ಬೆಂಗಳೂರು :
ರಾತ್ರೋರಾತ್ರಿ ಬಿಬಿಎಂಪಿ ಬಜೆಟ್ ಮಂಡನೆಯಾಗಿದ್ದು, ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತೆ ತುಳಸಿ ಅವರು 10480 ಕೋಟಿ ರೂ.ಗಳ ಬಜೆಟ್ ಮಂಡಿಸಿದ್ದಾರೆ.
ಬಿಬಿಎಂಪಿಎಯು 2022-23 ನೇ ಸಾಳಿನ ಅಯವ್ಯಯವನ್ನು ತರಾತುರಿಯಲ್ಲಿ ಮಂಡಿಸಿ, ಆಡಳಿತಾಧಿಕಾರಿಗಳ ಅನುಮೋದನೆ ಪಡೆಯಲಾಗಿದೆ.10,488.28 ಕೋಟಿ ರೂ.ಗಳ ಆದಾಯ ನಿರೀಕ್ಷಿಸಿ 10,480.93 ಕೋಟಿ ರೂ. ಗಾತ್ರದ ಬಜೆಟ್ ಮಂಡನೆ ಮಾಡಲಾಗಿದೆ.
ಗುರುವಾರ ಬೆಳಗ್ಗೆ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಮತ್ತು ಮುಖ್ಯ ಆಯುಕ್ತ ಗೌರವ್ ಗುಪ್ತ ಅವರು ಸಿಎಂ ಬೊಮ್ಮಾಯಿ ಅವರನ್ನು ಬೇಟಿ ಮಾಡಿ, ಅಯವ್ಯಯ ಕುರಿತು ಚರ್ಚಿಸಿದ್ದರು. ಈ ವೇಳೆ ಸಿಎಂ ಬೊಮ್ಮಾಯಿ ಕೆಲವೊಂದು ಕಾರ್ಯಕ್ರಮಗಳ ಸೇರ್ಪಡೆಗೆ ಸೂಚನೆ ನೀಡಿದ್ದರು. ಅದರಂತೆ ಅಧಿಕಾರಿಗಳು ಅಯವ್ಯಯ ಸಿದ್ದಪಡಿಸಿ ತರಾತುರಿಯಲ್ಲಿ ಆಡಳಿತಾಧಿಕಾರಿಯ ಅನುಮೋದನೆ ಪಡೆದು ರಾತ್ರಿ 10.45 ರ ಸುಮಾರಿಗೆ ಖರ್ಚು ವೆಚ್ಚದ ವಿವರವನ್ನೊಳಗೊಂಡ ಬಜೆಟ್ ಪ್ರತಿಯನ್ನು ಅಪ್ ಲೋಡ್ ಮಾಡಿದ್ದಾರೆ.
ಬಿಬಿಎಂಪಿ ಬಜೆಟ್ ಮುಖಾಂಶಗಳು:
ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚಲು 61.36 ಲಕ್ಷ ರೂ.
ವಲಯ ಕಾಮಗಾರಿಗಳು-ಕ್ರಿಯಾ ಯೋಜನೆ ಕಾಮಗಾರಿಗಳು ಶೇ. 60 ರಷ್ಟು ವಾರ್ಷಿಕ ನಿರ್ವಹಣೆ ಮತ್ತು ವಾರ್ಡ್ ವ್ಯಾಪ್ತಿಯಲ್ಲಿ ರಸ್ತೆಗಳ ದುರಸ್ತಿಗೆ 967.47 ಕೋಟಿ ರೂ.
ಪಾಲಿಕೆಯಲ್ಲಿ ಎಲ್ಲಾ ವಲಯಗಳಲ್ಲಿ ಮೂಲಭೂತ ಸೌಕರ್ಯ ವಿಭಾಗದಿಂದ ಅರ್ಟೀರಿಯಲ್ ಮತ್ತು ಸಬ್ ಆರ್ಟೀರಿಯಲ್ ರಸ್ತೆಗಳ ನಿರ್ವಹಣೆಗೆ 86.83 ಕೋಟಿ ರೂ.
ಪಾಲಿಕೆ ಶಾಲಾ, ಕಾಲೇಜುಗಳ ಕಟ್ಟಡಗಳ ನಿರ್ವಹಣೆಗೆ ಮತ್ತು ದುರಸ್ತಿಗೆ 10.59 ಕೋಟಿ ರೂ.
ಪಾಲಿಕೆ ಮಾರುಕಟ್ಟೆಗಳ ನಿರ್ವಹಣೆ ಮತ್ತು ದುರಸ್ಥಿಗೆ 8.93 ಕೋಟಿ ರೂ.
ಡಾ ಶಿವಕುಮಾರ ಸ್ವಾಮೀಜಿಯವರ 115ನೇ ಜಯಂತ್ಯೋತ್ಸವ: ಗದ್ದುಗೆಗೆ ವಿಶೇಷ ಪೂಜೆ, ಕಂಚಿನ ಪ್ರತಿಮೆ ಮೆರವಣಿಗೆ
ಸುಟ್ಟುಉಹೋದ ಬೀದಿ ದೀಪಗಳನ್ನು ಬದಲಾಯಿಸುವುದು ಹಾಗೂ ಇತರೆ ವೆಚ್ಚ 82.11 ಕೋಟಿ ರೂ.
ಪಾಲಿಕೆಯ ಶಾಲೆ, ಹೆರಿಗೆ ಆಸ್ಪತ್ರೆ, ಕಟ್ಟಡ ಸಮುದಾಯ ಭವನ ಮತ್ತು ಮಾರುಕಟ್ಟೆಗಳಲ್ಲಿ ವಿದ್ಯುತ್ ಸ್ಥಾಪನೆಗೆ 6.74 ಕೋಟಿ ರೂ.
ಬೃಹತ್ ಮಳೆ ನೀರು ಕಾಲುವೆಗಳ ವಾರ್ಷಿಕ ನಿರ್ವಹಣಾ ವೆಚ್ಚ 40 ಕೋಟಿ
ಬೃಹತ್ ಮಳೆ ನೀರು ಕಾಳುವೆಗಳ ತುರ್ತು ಮೀಸಲು ಕಾಮಗಾರಿ 10.86 ಕೋಟಿ ರೂ.
ನೀರು ಸರಬರಾಜು ವಾರ್ಷಿಕ ನಿರ್ವಹಣೆ ಮತ್ತು ದುರಸ್ಥಿಗೆ 57.04 ಕೋಟಿ ರೂ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 2022-23ನೇ ಸಾಲಿನ ಬಿಬಿಎಂಪಿ ಆಯವ್ಯಯ – ಬಿಬಿಎಂಪಿ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ