ಬಿಗ್‌ ಬಾಸ್‌ ವಿನ್ನರ್ ಹನುಮಂತು ಅವರ ಮರೆಯಲಾಗದ ಕ್ಷಣಗಳಾವು ಗೊತ್ತಾ…?

ಬೆಂಗಳೂರು :

    ಹನುಮಂತ ಲಮಾಣಿ ಅವರು ಹಲವು ರಿಯಾಲಿಟಿ ಶೋಗಳ ಮೂಲಕ ಗುರುತಿಸಿಕೊಂಡರು. ಅವರಿಗೆ ‘ಬಿಗ್ ಬಾಸ್’ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿತು. ಈ ರಿಯಾಲಿಟಿ ಶೋ ಬಳಿಕ ಅವರ ಜನಪ್ರಿಯತೆ ಹೆಚ್ಚಾಗಿದೆ. ಈಗ ಅವರು ಸೋಶಿಯಲ್ ಮೀಡಿಯಾದಲ್ಲಿ ಮರೆಯಲಾಗದ ಕ್ಷಣವನ್ನು ಹಂಚಿಕೊಂಡಿದ್ದಾರೆ. 

   ಹನುಮಂತ ಅವರು ಸದ್ಯ ಹೊಸ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅವರು ಬಿಗ್ ಬಾಸ್ ಗೆದ್ದ ಕ್ಷಣವಿದೆ. ಸುದೀಪ್ ಅವರು ಹನುಮಂತ ಅವರ ಕಪ್ ಎತ್ತುತ್ತಾ ಇರುವ ದೃಶ್ಯ ಇದೆ. ಮತ್ತೊಂದು ಫೋಟೋದಲ್ಲಿ ಹನುಮಂತ ಅವರು ಸುದೀಪ್ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುತ್ತಿರುವ ಫೋಟೋ ಇದೆ. ಮೂರನೇ ಫೋಟೋದಲ್ಲಿ ಸುದೀಪ್ ಅವರು ಹನುಮಂತ ಅವರನ್ನು ಹಗ್ ಮಾಡುತ್ತಿದ್ದಾರೆ. ಈ ಫೋಟೋನ ಫ್ಯಾನ್ಸ್ ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಈ ಫೋಟೋಗೆ ‘ಜೀವನದ ಸುಂದರ ಮರೆಯಲಾಗದ ಕ್ಷಣ’ ಎಂದು ಹನುಮಂತ ಕ್ಯಾಪ್ಶನ್ ನೀಡಿದ್ದಾರೆ.

   ಹನುಮಂತ ಅವರು ವೈಲ್ಡ್ ಕಾರ್ಡ್ ಮೂಲಕ ದೊಡ್ಮನೆಗೆ ಬಂದರು. ವೈಲ್ಡ್ ಕಾರ್ಡ್​​ನಲ್ಲಿ ಬಂದು ಕಪ್ ಗೆಲ್ಲುತ್ತಾರೆ ಎಂದು ಆರಂಭದಲ್ಲಿ ಯಾರೂ ಊಹಿಸಿರಲಿಲ್ಲ. ದಿನ ಕಳೆದಂತೆ ಆಟ ತೋರಿಸಿ ಅವರು ಗೆದ್ದು ತೋರಿಸಿದ್ದಾರೆ. ಅವರ ಹಿಂಬಾಲಕರ ಸಂಖ್ಯೆ ಕೂಡ ಹೆಚ್ಚಿದೆ .ಹನುಮಂತ ಅವರು ಬಿಗ್ ಬಾಸ್ ಮನೆಗೆ ಬರುವಾಗ ಕೇವಲ ಒಂದೂವರೆ ಇಂದ ಎರಡು ಲಕ್ಷ ಹಿಂಬಾಲಕರನ್ನು ಹೊಂದಿದ್ದರು. ಈಗ ಆ ಸಂಖ್ಯೆ ಐದೂವರೆ ಲಕ್ಷಕ್ಕೆ ಏರಿಕೆ ಆಗಿದೆ. ಅವರನ್ನು ಇನ್​ಸ್ಟಾಗ್ರಾಮ್​ನಲ್ಲಿ 5.63 ಲಕ್ಷ ಹಿಂಬಾಲಕರನ್ನು ಪಡೆದಿದ್ದಾರೆ. ಇದು ಅವರಿಗೆ ಸಾಕಷ್ಟು ಜನಪ್ರಿಯತೆಗೆ ಸಿಕ್ಕ ಉದಾಹರಣೆ ಆಗಿದೆ. 

    ಹನುಮಂತ ಅವರು ಸದ್ಯ ‘ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋನ ಭಾಗವಾಗಿದ್ದಾರೆ. ಪ್ರತಿ ವೀಕೆಂಡ್​ನಲ್ಲಿ ಕಲರ್ಸ್​ ಕನ್ನಡದಲ್ಲಿ ಈ ಶೋ ಪ್ರಸಾರ ಕಾಣುತ್ತಿದೆ. ಈ ರಿಯಾಲಿಟಿ ಶೋ ಮೂಲಕ ಅಭಿಮಾನಿ ಬಳಗವನ್ನು ಅವರು ಮತ್ತಷ್ಟು ಏರಿಸಿಕೊಂಡಿದ್ದಾರೆ.

Recent Articles

spot_img

Related Stories

Share via
Copy link