ಜಗನ್‌ ಸಂಪುಟದ ಎಲ್ಲಾ ಸಚಿವರು ನಾಳೆ ರಾಜೀನಾಮೆ; ಎ.11ಕ್ಕೆ ಸಂಪುಟ ಪುನರ್‌ರಚನೆ

ಅಮರಾವತಿ:

ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್‌.ಜಗನ್ಮೋಹನ ರೆಡ್ಡಿ ಸಂಪುಟದ ಎಲ್ಲಾ 24 ಮಂದಿ ಸಚಿವರು ಗುರುವಾರ(ಎ.07) ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ.ಎ.11ರಂದು ಅವರು ಸಂಪುಟ ಪುನಾರಚನೆ ನಡೆಸಲಿದ್ದಾರೆ.ಹೀಗಾಗಿ, ಹಾಲಿ ಸಚಿವರೆಲ್ಲರ ರಾಜೀನಾಮೆ ನೀಡಲಿದ್ದಾರೆ.

ಆಮ್​ ಆದ್ಮಿ ರೀ ಎಂಟ್ರಿ ಯಾರಿಗೆ ಆಪತ್ತು?: ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಜತೆ ರಾಜ್ಯದಲ್ಲಿ ಮತ್ತೊಂದು ರಾಜಕೀಯ ನೆಲೆ

ಹಾಲಿ ಇರುವ ಸಚಿವರ ಪೈಕಿ ನಾಲ್ವರು ಸ್ಥಾನ ಉಳಿಸಿಕೊಳ್ಳುವುದು ಖಚಿತ ಎಂದು ಹೇಳಲಾಗುತ್ತಿದೆ.ಜಾತಿ, ಪ್ರಾದೇಶಿಕವಾರು ಪ್ರಾಬಲ್ಯ ಪ್ರಮುಖವಾಗಿ ನೂತನ ಸಚಿವರ ಆಯ್ಕೆಯಲ್ಲಿ ಪ್ರಧಾನವಾಗಲಿದೆ.2019 ಮೇ 30ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಸಂದರ್ಭದಲ್ಲಿ “ಅಧಿಕಾರ ಸ್ವೀಕರಿಸಿದ ಎರಡೂವರೆ ವರ್ಷಗಳ ಬಳಿಕ ಸಂಪೂರ್ಣವಾಗಿ ಸಚಿವ ಸಂಪುಟ ಪುನಾರಚನೆ ಮಾಡಲಾಗುತ್ತದೆ’ ಎಂದು ಹೇಳಿದ್ದರು. ಅದರಂತೆ ಈ ಕ್ರಮ ಕೈಗೊಳ್ಳಲಾಗಿದೆ.

ಕಳಪೆ ಗುಣಮಟ್ಟ ಔಷಧಿಗಳ ಬಳಕೆ ನಿಷೇಧ

2019ರ ಜೂ.8ರಂದು ಹಾಲಿ ಸಂಪುಟದ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದರು. ಏ.4ರಂದು ಸಿಎಂ ಜಗನ್ಮೋಹನ ರೆಡ್ಡಿ ಹೊಸತಾಗಿ 13 ಜಿಲ್ಲೆಗಳ ರಚನೆಯನ್ನು ಘೋಷಣೆ ಮಾಡಿದ್ದರು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ