ಇಂದಿನಿಂದ ಜೆಡಿಎಸ್‌ಗೆ ನೂತನ ಸಾರಥಿ

ಬೆಂಗಳೂರು:

ಕಾಂಗ್ರೆಸ್ ತೊರೆದು ಇತ್ತೀಚೆಗೆ ಜೆಡಿಎಸ್ ಸೇರ್ಪಡೆಯಾದ ಹಿರಿಯ ಮುಖಂಡ ಸಿ.ಎಂ. ಇಬ್ರಾಹಿಂ ಏ. 17ರಂದು ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಪದಗ್ರಹಣ ಮಾಡಲಿದ್ದಾರೆ.

ಈವರೆಗೆ ಜೆಡಿಎಸ್ ಮುನ್ನಡೆಸಿದ ಎಚ್.ಕೆ. ಕುಮಾರಸ್ವಾಮಿ ಸ್ಥಾನಕ್ಕೇರಲಿರುವ ತೆನೆ ಹೊತ್ತ ಇಬ್ರಾಹಿಂ, ಪದಗ್ರಹಣ ಕಾರ್ಯಕ್ರಮ ನಗರದಲ್ಲಿ ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ನಡೆಯಲಿದೆ. ಇದೇ ವೇಳೆ ಎಚ್.ಕೆ ಕುಮಾರಸ್ವಾಮಿ ಸಂಸದೀಯ ಮಂಡಳಿ(ಪರ‍್ಲಿಮೆಂಟ್ ಬೋರ್ಡ್)ನ ಆಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಪಕ್ಷ ಸಂಘಟನೆ ಆದ್ಯತೆ ನೀಡಿರುವ ಜೆಡಿಎಸ್ ವರಿಷ್ಠರು, ಅಲ್ಪಸಂಖ್ಯಾತ ನಾಯಕರೊಬ್ಬರಿಗೆ ಪಕ್ಷದ ಅತ್ಯುನ್ನತ ಸ್ಥಾನ ನೀಡಿದ್ದಾರೆ. ಪದಗ್ರಹಣ ಸಮಾರಂಭಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ವಿಧಾನಪರಿಷತ್ ಸದಸ್ಯ ತಿಪ್ಪೇಸ್ವಾಮಿ, ಸಮಾರಂಭದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮತ್ತಿತರರು ಭಾಗವಹಿಸುವರು ಎಂದು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link