ಯುರೋಪ್‌ ಮಗುವಿನ ಹಾಡಿಗೆ ತಾಳ ಹಾಕಿದ ಪ್ರಧಾನಿ ಮೋದಿ!

ನವದೆಹಲಿ: 

ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ ಯುರೋಪ್‌ನ ಜರ್ಮನಿ, ಡೆನ್ಮಾರ್ಕ್‌ ಮತ್ತು ಫ್ರಾನ್ಸ್‌ ರಾಷ್ಟ್ರಗಳ ಪ್ರವಾಸ ಕೈಗೊಂಡಿದ್ದು, ಈಗಾಗಲೇ ಜರ್ಮನಿ ತಲುಪಿದ್ದಾರೆ. ಜರ್ಮನಿಯಲ್ಲಿರುವ ಭಾರತೀಯ ವಲಸಿಗರ ಅದ್ದೂರಿ ಸ್ವಾಗತದ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ (ಮೇ 2, 2022) ಬರ್ಲಿನ್‌ಗೆ ಆಗಮಿಸಿದರು.

 ಕೋವಿಡ್-19 ಲಸಿಕೆ ಪಡೆಯಲು ಯಾರನ್ನೂ ಒತ್ತಾಯಿಸುವಂತಿಲ್ಲ : ಸುಪ್ರಿಂಕೋರ್ಟ್‌ ಮಹತ್ವದ ತೀರ್ಪು

ಬರ್ಲಿನ್‌ನ ಹೊಟೇಲ್ ಅಡ್ಲಾನ್ ಕೆಂಪಿನ್ಸ್ಕಿಯಲ್ಲಿ ಪಿಎಂ ಮೋದಿ ನೋಡಲು ಹಲವಾರು ಜನರು ಸೇರಿದ್ದರು. ಜರ್ಮನಿಯಲ್ಲಿ ಮಕ್ಕಳನ್ನು ಭೇಟಿ ಮಾಡಿದ ಪ್ರಧಾನಿ ಅವರೊಂದಿಗೆ ಒಂದಷ್ಟು ಸಮಯ ಕಳೆದಿದ್ದಾರೆ.

ಹಿಂದುಸ್ತಾನದ ಕುರಿತು ಹುಡುಗನೊಬ್ಬ ಹಾಡು ಹೇಳಿದ್ದು, ಪ್ರಧಾನಿ ಅದಕ್ಕೆ ತಾಳ ಹಾಕಿರುವ ವಿಡಿಯೋ ಹಾಗೂ ಮೋದಿ ಅವರ ಭಾವಚಿತ್ರ ಬಿಡಿಸಿರುವ ಹುಡುಗಿಯೊಬ್ಬಳಿಗೆ ಆಟೋಗ್ರಾಫ್ ನೀಡುತ್ತಿರುವ ವಿಡಿಯೋಗಳು ಈಗ ಎಲ್ಲೆಡೆ ವೈರಲ್ ಆಗುತ್ತಿದೆ.

17ನೇ ದಿನವೂ ಮುಂದುವರಿದ ‘ಕೆಜಿಎಫ್ 2’ ಅಬ್ಬರ; ಯಶ್ ಎದುರು ಮಂಕಾದ ಅಜಯ್​ ದೇವಗನ್, ಟೈಗರ್ ಸಿನಿಮಾ

ಮೋದಿ ಅವರ ಚಿತ್ರ ಬಿಡಿಸಿದ ಹುಡುಗಿಯೊಬ್ಬಳು ಅವರಿಗೆ ಭಾವಚಿತ್ರವನ್ನು ಉಡುಗೊರೆಯಾಗಿ ನೀಡಿದಳು. ಪುಟ್ಟ ಬಾಲಕಿಯೊಂದಿಗೂ ಪ್ರಧಾನಿ ಸಂವಾದ ನಡೆಸಿದರು. ಅವರು ತಮ್ಮ ಐಕಾನ್ ಎಂದು ಹುಡುಗಿ ಹೇಲಿದರು. ಈ ಬಳಿಕ ಮೋದಿ ಅವರು ಬಾಳಕಿಗೆ ಆಟೋಗ್ರಾಫ್‌ ನೀಡಿದರು.

ಹಿಂದಿನ ದಿನ, ಬರ್ಲಿನ್‌ಗೆ ಆಗಮಿಸಿದ ಪ್ರಧಾನಿ ಮೋದಿ, ಈ ಭೇಟಿಯು ಭಾರತ ಮತ್ತು ಜರ್ಮನಿ ನಡುವಿನ ಸ್ನೇಹವನ್ನು ಹೆಚ್ಚಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. “ಬರ್ಲಿನ್‌ಗೆ ಬಂದಿಳಿದಿದ್ದೇನೆ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರ ‘ಬಸವಶ್ರೀ’ ಪ್ರಶಸ್ತಿ ನಾಳೆ ಪ್ರದಾನ

ಇಂದು, ನಾನು ಚಾನ್ಸೆಲರ್ @OlafScholz ಅವರೊಂದಿಗೆ ಮಾತುಕತೆ ನಡೆಸಲಿದ್ದೇನೆ. ಸಮುದಾಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತೇನೆ. ಈ ಭೇಟಿಯು ಭಾರತ ಮತ್ತು ಜರ್ಮನಿ ನಡುವಿನ ಸ್ನೇಹವನ್ನು ಹೆಚ್ಚಿಸುತ್ತದೆ ಎಂದು ನನಗೆ ವಿಶ್ವಾಸವಿದೆ” ಎಂದು ಟ್ವೀಟ್ ಮಾಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link