ಜವರಾಯಿ ಗೌಡ ಸೋತರೆ ರಾಜಕೀಯ ನಿವೃತ್ತಿ : ಹೆಚ್‌ ಡಿ ಕೆ

ಬೆಂಗಳೂರು:

        ಯಶವಂತಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸೋತಲ್ಲಿ ನಾನು ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ  ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದಾರೆ.

       ಜವರಾಯಿಗೌಡ ಅವರನ್ನು ಕ್ಷೇತ್ರದ ಆಭ್ಯರ್ಥಿಯಾಗಿ ಘೋಷಿಸಿ ಅವರು ಮಾತನಾಡಿದ ಅವರು,  ಕಳೆದ ಮೂರು ಚುನಾವಣೆಗಳಲ್ಲಿ ಜವರಾಯಿಗೌಡ ಕಡಿಮೆ ಅಂತರದಲ್ಲಿ ಸೋತಿದ್ದಾರೆ. ಕ್ಷೇತ್ರದ ಮತದಾರರ ಅನುಕಂಪ ಅವರ ಮೇಲಿದೆ. ಈ ಬಾರಿ ಜನರು ಅವರನ್ನು ಕೈ ಹಿಡಿಯಲಿದ್ದಾರೆ. ವೈಯಕ್ತಿಕವಾಗಿ ಬೆಂಬಲ ನೀಡುವ ಅವರನ್ನು ಜಯಶೀಲರನ್ನಾಗಿ ಮಾಡಿಯೇ ತೀರುವೆ ಎಂದು ಹೇಳಿದರು.  

    ಬೆಂಗಳೂರಿನಲ್ಲಿ ತ್ಯಾಜ್ಯ ವಿಲೇವಾರಿ ದೊಡ್ಡ ಮಾಫಿಯವಾಗಿದೆ. ತ್ಯಾಜ್ಯ ಸಂಸ್ಕರಣೆಗೆ ಹಲವಾರು ನೂತನ ವಿಧಾನಗಳಿವೆ. ಸರ್ಕಾರ ಈ ಬಗ್ಗೆ ಬದ್ಧತೆ ತೋರುತ್ತಿಲ್ಲ.  8 ಸಾವಿರ ಕೋಟಿ ಖರ್ಚಾದರೂ  ಬೆಂಗಳೂರಿನಲ್ಲಿ ಗುಂಡಿಗಳ ಸಂಖ್ಯೆ ಕಡಿಮೆಯಾಗಿಲ್ಲ ಎಂದು ಅವರು ದೂರಿದರು.

     ಕಾಂಗ್ರೆಸ್- ಬಿಜೆಪಿ ಒಳ ಮೈತ್ರಿಯಿಂದ ಕಳೆದ ಉಪಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಯಿತು ಎಂದು ಅವರು ತಿಳಿಸಿದರು. ಯಶವಂತಪುರ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿ ನಾನಲ್ಲ. ಜನಸೇವೆ ಮಾಡಲು ಅಧಿಕಾರವೊಂದೇ ಮಾರ್ಗವಲ್ಲ’ ಎಂದು ಜೆಡಿಎಸ್ ಮುಖಂಡ ಜವರಾಯಿಗೌಡ ಅವರು ಹೇಳಿದರು.

        ಕುಮಾರಸ್ವಾಮಿ ಅವರೇ ಯಶವಂತಪುರ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು. ಕಳೆದ ಮೂರು ಬಾರಿ ನಡೆದ ಚುನಾವಣೆಯಲ್ಲೂ ಜೆಡಿಎಸ್ ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಈ ಬಾರಿ ನೀವೇ ಸ್ಪರ್ಧಿಸಿದರೆ ಕಾರ್ಯ ಕರ್ತರ ವಿಶ್ವಾಸ ಇಮ್ಮಡಿಗೊಳ್ಳಲಿದೆ’ ಎಂದು ಕಾರ್ಯಕರ್ತರು ಒತ್ತಾಯಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link