ವೇಶ್ಯಾವಾಟಿಕೆ ನೆಪದಲ್ಲಿ ಅಪಹರಣ : 8 ಜನರ ಬಂಧನ

ಬೆಂಗಳೂರು: 

    ವೇಶ್ಯಾವಾಟಿಕೆ ನೆಪದಲ್ಲಿ ಯುವಕರನ್ನು ಅಪಹರಣ ಮಾಡಿ ಹಣ ದೋಚುತ್ತಿದ್ದ ಜಾಲ ಬೇಗೂರು ಠಾಣೆ ಪೊಲೀಸರು ಭೇದಿಸಿದ್ದು, ‘ಕಾಲ್ ರ್ಲ್’ ಸೇರಿ 8 ಮಂದಿಯನ್ನು ಬಂಧಿಸಿದ್ದಾರೆ.‘ಮಧು ಅಲಿಯಾಸ್ ಪ್ರಿಯಾ, ನವೀನ್, ತಿರುಮಲೇಶ್, ಕೆಂಪರಾಜ್, ಮುಖೇಶ್, ಮಂಜುನಾಥ್, ಭರತ್, ದಲ್ಪೀರ್ ಸೌದ್ ಅಲಿಯಾಸ್ ದೀಪು ಬಂಧಿತರು.

     ಇವರಿಂದ ಕಾರು, 3 ದ್ವಿಚಕ್ರ ವಾಹನ, 10 ಮೊಬೈಲ್ ಹಾಗೂ ಚಾಕು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಜಾಲದ ಕೃತ್ಯದ ಬಗ್ಗೆ ಬಿ. ಮಂಜುನಾಥ್ (30) ಎಂಬುವರು ದೂರು ನೀಡಿದ್ದರು. ಅದರನ್ವಯ ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ. ಹಲವು ಯುವಕರಿಂದ ಆರೋಪಿಗಳು ಹಣ ದೋಚಿರುವ ಮಾಹಿತಿ ಇದ್ದು, ತನಿಖೆ ಮುಂದುವರಿಸಲಾಗಿದೆ’ ಎಂದು ತಿಳಿಸಿದರು.

 

    ಕೊಠಡಿ ಕಾಯ್ದಿರಿಸಿದ್ದರು: ‘ದೂರು ದಾರ ಬಿ. ಮಂಜುನಾಥ್ ಹಾಗೂ ಸ್ನೇಹಿತ ರಜನಿಕಾಂತ್, ವೇಶ್ಯಾ ವಾಟಿಕೆಗಾಗಿ ಕಾಲ್ ರ್ಲ್ಗ ಳನ್ನು ಹುಡುಕಾಡುತ್ತಿದ್ದರು. ರಜನಿಕಾಂತ್ ಸ್ನೇಹಿತನಾಗಿದ್ದ ತಿರುಮಲೇಶ್, ತನಗೆ ಯುವತಿಯೊಬ್ಬರು ಪರಿಚಯ ಇರುವುದಾಗಿ ಹೇಳಿದ್ದ. ಹೆಚ್ಚು ಹಣ ನೀಡಿದರೆ, ಯುವತಿಯನ್ನು ಕಳುಹಿಸು ವುದಾಗಿ ತಿಳಿಸಿದ್ದ. ಅದಕ್ಕೆ ಮಂಜುನಾಥ್ ಹಾಗೂ ರಜನಿಕಾಂತ್ ಒಪ್ಪಿದ್ದರು’ ಎಂದು ಪೊಲೀಸರು ಹೇಳಿದರು.

    ‘ಆರೋಪಿ ಮಧು ಜೊತೆ ಸಂಪರ್ಕದಲ್ಲಿದ್ದ ತಿರುಮಲೇಶ್, ಹಲವು ಬಾರಿ ಭೇಟಿಯಾಗಿ ಖಾಸಗಿ ಕ್ಷಣ ಕಳೆದಿದ್ದ. ವೇಶ್ಯಾವಾಟಿಕೆ ನೆಪದಲ್ಲಿ ಸ್ನೇಹಿತರ ಬಳಿ ಹೋದರೆ, ಅವರಿಬ್ಬರಿಂದ ಹಣ ದೋಚಬಹುದೆಂದು ಯುವತಿಗೆ ತಿಳಿಸಿದ್ದ. ಅದರಂತೆ ಯುವತಿ, ಕಾಲ್ಗರ್ಲ್ ಎಂದು ಹೇಳಿಕೊಂಡು ಮಂಜುನಾಥ್ ಹಾಗೂ ರಜನಿಕಾಂತ್ ಬಳಿ ಹೋಗಲು ಒಪ್ಪಿದ್ದರು’

    ‘ಮಧು ಅವರನ್ನು ತಮ್ಮ ಬಳಿ ಕರೆಸಿದ್ದ ಆರೋಪಿಗಳು, ಓಯೊ ಆಯಪ್ ಮೂಲಕ ಕಾಯ್ದಿರಿಸಿದ್ದ ಮಡಿವಾಳದ ಹೋಟೆಲೊಂದರ ಕೊಠಡಿಗೆ ಫೆ. 17 ರಂದು ಕರೆದೊಯ್ದಿದ್ದರು. ತಮ್ಮ ಕೆಲಸ ಮುಗಿಸಿ ತಡರಾತ್ರಿ ಹೋಟೆಲ್ನಿಂದ ಹೊರಬಂದಿದ್ದ ದೂರುದಾರ ಹಾಗೂ ಸ್ನೇಹಿತ, ಆರೋಪಿ ಮಧು ಜೊತೆ ಕಾರಿನಲ್ಲಿ ಹೊರಟಿದ್ದರು.’

   ‘ಬೇಗೂರು ದೇವರಚಿಕ್ಕನ ಹಳ್ಳಿ ಬಳಿ ಬೈಕ್ನಲ್ಲಿ ಬಂದಿದ್ದ ಇತರೆ ಆರೋಪಿಗಳು, ಕಾರು ಅಡ್ಡಗಟ್ಟಿದ್ದರು. ಚಾಕು ತೋರಿಸಿ ಬೆದರಿಸಿದ್ದರು’ ಎಂದು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link