ಗೌರಿಬಿದನೂರು
ಕರ್ನಾಟಕ ತೋಟಗಾರಿಕೆ ಇಲಾಖೆ ಹಾಗೂ ಕರ್ನಾಟಕ ದ್ರಾಕ್ಷಿ ಮತ್ತು ದ್ರಾಕ್ಷಾರಸ ಮಂಡಳಿಯಿAದ ಫೆಬ್ರವರಿ 24 ರಿಂದ 26 ರ ವರೆಗೆ ಗೌರಿಬಿದನೂರಿನಲ್ಲಿ ರಾಜ್ಯಮಟ್ಟದ ?ಪಿನಾಕಿನಿ ವೈನ್ ಫೆಸ್ಟಿವಲ್- 2023? ಆಯೋಜಿಸಲಾಗಿದೆ. ಇದೇ ಮೊದಲ ಬಾರಿಗೆ ಐತಿಹಾಸಿಕ ಪಿನಾಕಿನಿ ನದಿ ಪಾತ್ರದಲ್ಲಿ ವೈನ್ ಮೇಳ ನಡೆಯುತ್ತಿದ್ದು, ದ್ರಾಕ್ಷಿ ಬೆಳೆಗಾರರಿಗೆ ದೊಡ್ಡಮಟ್ಟದಲ್ಲಿ ಪ್ರೋತ್ಸಾಹ ನೀಡಲು ಮೇಳ ಸಹಕಾರಿಯಾಗಲಿದೆ ಎಂದು ಕರ್ನಾಟಕ ದ್ರಾಕ್ಷಿ ಮತ್ತು ವೈನ್ ಬೋರ್ಡ್ ಅಧ್ಯಕ್ಷ ಎಂ.ಎನ್. ರವಿನಾರಾಯಣ ರೆಡ್ಡಿ ತಿಳಿಸಿದ್ದಾರೆ.
ಗೌರಿ ಬಿದನೂರಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೌರಿ ಬಿದನೂರಿನ ವರ್ತುಲ ರಸ್ತೆಯ ಸಾಯಿಕೃಷ್ಣ ಕನ್ವೆನ್ಷನ್ ಮೈದಾನದಲ್ಲಿ ಮೇಳಕ್ಕೆ ವ್ಯವಸ್ಥೆ ಮಾಡಲಾಗಿದೆ. ರಾಜ್ಯದ ಪ್ರಮುಖ ಹತ್ತು ವೈನರಿಗಳು ಮೇಳದಲ್ಲಿ ಭಾಗಿಯಾಗುತ್ತಿದ್ದು, 80ಕ್ಕೂ ಹೆಚ್ಚು ವಿವಿಧ ವೈನ್ ಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಮೇಳದಲ್ಲಿ ಉಚಿತವಾಗಿ ವೈನ್ ಸವಿಯಲು ಅವಕಾಶವಿದ್ದು, ಕನಿಷ್ಟ ಶೇ 10 ರಷ್ಟು ರಿಯಾಯಿತಿ ದರದಲ್ಲಿ ವೈನ್ ಮಾರಾಟ ಮಾಡಲಾಗುತ್ತದೆ ಎಂದು ಹೇಳಿದರು.
ವೈನ್ ಆರೋಗ್ಯಕ್ಕೆ ಪೂರಕವಾಗಿದ್ದು, ಭಾಗವಹಿಸುವವರು ಸ್ವತಃ ದ್ರಾಕ್ಷಿ ತುಳಿದು ವೈನ್ ತಯಾರಿಕೆಯ *ದ್ರಾಕ್ಷಿ ಸ್ಟಾಂಪಿಂಗ್* ಅನುಭವ ಪಡೆಯಲು ಇದೊಂದು ಸದಾವಕಾಶವಾಗಿದೆ. ಫಿನಾಕಿನಿ ವೈನ್ ಫೆಸ್ಟಿವಲ್ ನಲ್ಲಿ ಭಾಗವಹಿಸಿ, ಸಂತಸ ಮತ್ತು ಸಂಭ್ರಮಪಡುವAತೆ ಜನರಿಗೆ ಮನವಿ ಮಾಡುತ್ತಿದ್ದೇವೆ. ವೈನ್ ತಯಾರಿಕೆ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಇದೊಂದು ಅಭೂತಪೂರ್ವ ಅವಕಾಶವಾಗಿದೆ. ಭಿನ್ನ, ವಿಭಿನ್ನ ವೈನ್ ಸವಿದು ಸಂಗೀತ, ಸಾಂಸ್ಕöÈತಿಕ ಲೋಕದಲ್ಲಿ ವಿಹರಿಸಲು ಇದು ಸೂಕ್ತ ಅವಕಾಶವಾಗಿದೆ ಎಂದರು.
ರಾಜ್ಯದಲ್ಲಿ ವೈನ್ ಬೋರ್ಡ್ ಸ್ಥಾಪನೆಗೂ ಮುನ್ನ ವೈನ್ ಮಾರಾಟದ ವಹಿವಾಟು ಕೇವಲ 30 ಕೋಟಿ ರೂಪಾಯಿ ಇತ್ತು. ಈ ವರ್ಷ 457 ಕೋಟಿ ರೂಪಾಯಿಗೆ ಗುರಿ ತಲುಪುತ್ತಿದ್ದೇವೆ. 2023-24 ನೇ ಸಾಲಿನಲ್ಲಿ 500 ಕೋಟಿಗೂ ಹೆಚ್ಚು ಆದಾಯದ ಗುರಿ ಹೊಂದಲಾಗಿದೆ. ವೈನ್ ಮಂಡಳಿಯ ರಚನಾತ್ಮಕ ಕ್ರಮಗಳಿಂದ ರೈತ ಸಮುದಾಯಕ್ಕೆ ಹೆಚ್ಚಿನ ರೀತಿಯಲ್ಲಿ ಲಾಭವಾಗುತ್ತಿದೆ ಎಂದು ತಿಳಿಸಿದರು.
ಕರ್ನಾಟಕ ದ್ರಾಕ್ಷಿ ಮತ್ತು ವೈನ್ ಬೋರ್ಡ್ ವ್ಯವಸ್ಥಾಪಕ ನಿರ್ದೇಶಕ ಟಿ. ಸೋಮು ಮಾತನಾಡಿ, ರಾಜ್ಯದಲ್ಲಿ ಮಂಡಳಿ ರಚನೆಗೂ ಮುನ್ನ ಕೇವಲ 2 ವೈನರಿಗಳಿದ್ದವು. ಇದೀಗ ಈ ಸಂಖ್ಯೆ 19ಕ್ಕೆ ಏರಿಕೆಯಾಗಿದೆ. ವೈನ್ ಟಾವರಿನ್ ಗಳ ಸಂಖ್ಯೆ 232 ಕ್ಕೆ ಏರಿಕೆಯಾಗಿದೆ. ವೈನ್ ಬೋಟಿಕ್ 89ಕ್ಕೆ ತಲುಪಿದೆ. 500 ಎಕರೆಯಷ್ಟಿದ್ದ ದ್ರಾಕ್ಷಿ ಬೆಳೆಯುವ ಪ್ರದೇಶ ಇದೀಗ 2000 ಕ್ಕೆ ಏರಿಕೆಯಾಗಿದೆ. ವೈನ್ ಮಾರಾಟ 15 ಲಕ್ಷ ಲೀಟರ್ ನಿಂದ 95 ಲಕ್ಷ ಲೀಟರ್ ಗೆ ಏರಿಕೆಯಾಗಿದೆ ಎಂದರು.
ಕರ್ನಾಟಕ ದ್ರಾಕ್ಷಿ ಮತ್ತು ವೈನ್ ವೈನ್ ಬೋರ್ಡ್ ನ ಪ್ರಧಾನ ವ್ಯವಸ್ಥಾಪಕ ಎಸ್.ಆರ್. ಸರ್ವೇಶ್ ಕುಮಾರ್ ಮಾತನಾಡಿ, ವೈನ್ ಮಾರಾಟಕ್ಕೆ ಅನುಮತಿ ಪಡೆಯುವುದು ಅತ್ಯಂತ ಸುಲಭವಾಗಿದ್ದು, ಪರವಾನಗಿ ಶುಲ್ಕವೂ ಕೂಡ ಕಡಿಮೆ ಇದೆ. ಅಬಕಾರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೆ ತಕ್ಷಣ ಅನುಮತಿ ದೊರೆಯಲಿದೆ ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ