ಮೈಸೂರು:
” ಟೋಟೆಲ್ ಫೇಲುರ್ ಅಫ್ ಇಂಟಿಲೀಜೆನ್ಸ್” ಎಂದು ನೆನ್ನೆಯ ಜಮ್ಮ ಕಾಶ್ಮೀರದ ಉಗ್ರರ ಘಟನೆಯ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಇಂದು ನಗರದ ತಮ್ಮ ಶಾರದದೇವಿ ನಿವಾಸದ ಬಳಿ ಮಾದ್ಯಮಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ ನೆನ್ನೆಯ ಘಟನೆ ಒಂದು ಅಮಾನುಷ ಹೇಯ ಕೃತ್ಯ ವಾಗಿದ್ದು ಇದನ್ನ ಖಂಡಿಸುತ್ತೇನೆ. ಇಂತಹ ಘಟನೆಗೆ ಕಾರಣವಾದ ಉಗ್ರವಾದಿಗಳ ಬಗ್ಗೆ ಮೃದು ದೋರಣೆ ತಾಳಬಾರದು. ಉಗ್ರವಾದಿಗಳ ತಾಣಗಳ ಮೇಲೆ ದಾಳಿ ಮಾಡಿ ಅವರುಗಳನ್ನ ನಾಶಮಾಡಬೇಕು ಎಂದರು.
ನೋಟ್ ಬ್ಯಾನ್ ನಿಂದ ಕಪ್ಪು ಹಣ ಚಲಾವಣೆ ಕಡಿಮೆಯಾಗುತ್ತದೆ ಇದರಿಂದ ಉಗ್ರವಾದ ಕಡಿಮೆಯಾಗುತ್ತದೆ ಎಂದು ನೋಟ್ ಬ್ಯಾನ್ ಸಂದರ್ಬದಲ್ಲಿ ಪ್ರಾದಾನಿ ನರೇಂದ್ರ ಮೋದಿ ಹೇಳಿದ್ದರು. ಆದರೆ ಆಗಿದ್ದೇನು? ನೆನ್ನೆಯ ಘಟನೆಯಲ್ಲಿ ಗುಪ್ತಚರ ಇಲಾಖೆಯಲ್ಲಿ ಸಂಪೂರ್ಣ ವಿಫಲವಾಗಿದೆ. ಟೋಟಲ್ ಫೆಲುರ್ ಆಪ್ ಇಂಟೆಲಿಜೆನ್ಸ್ ಎಂದು ಕಿಡಿಕಾರಿದರು.
ನಮ್ಮ ರಕ್ಷಣೆ ಗಾಗಿ ದೇಶ ಕಾಯುವ ಯೋಧರಿಗೆ ರಕ್ಷಣೆ ಕೊಡಬೇಕು. ಕೇಂದ್ರ ಸರ್ಕಾರ ಕೂಡಲೆ ಉಗ್ರವಾದಿಗಳನ್ನ ಪತ್ತೆ ಹಚ್ಚಿ ಅವರ ಶಿಬಿರಗಳನ್ನ ನಾಶಮಾಡಬೇಕು ಎಂದು ಒತ್ತಾಯಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
