ಬೆಂಗಳೂರು:
ಮೂರು ನಿಮಿಷದಲ್ಲಿ ಅತಿ ಹೆಚ್ಚು ಸೆಲ್ಫಿ ತೆಗೆದುಕೊಳ್ಳುವ ಮೂಲಕ ಅಕ್ಷಯ್ ಕುಮಾರ್ ದಾಖಲೆ ಬರೆದಿದ್ದಾರೆ. ಸೆಲ್ಫಿ ಚಿತ್ರದ ಪ್ರಚಾರಕ್ಕಾಗಿ ಅಭಿಮಾನಿಗಳನ್ನು ಭೇಟಿ ಮಾಡಿ, ಅಭಿಮಾನಿಗಳೊಂದಿಗೆ ಕೇವಲ ಮೂರು ನಿಮಿಷದಲ್ಲಿ 184 ಸೆಲ್ಫಿ ತೆಗೆದುಕೊಳ್ಳುವ ಮೂಲಕ ಅಕ್ಷಯ್ ಕುಮಾರ್ ವಿಶ್ವದಾಖಲೆ ಬರೆದಿದ್ದಾರೆ. ಇನ್ನೂ ಈ ಬಗ್ಗೆ ಅಕ್ಷಯ್ ಪೋಸ್ಟ್ ಮಾಡಿದ್ದಾರೆ.
ಅವರ ಸಾಧನೆಯನ್ನು ಚರ್ಚಿಸುತ್ತಾ “ಈ ವಿಶೇಷ ವಿಶ್ವ ದಾಖಲೆಯನ್ನು ಮುರಿಯಲು ಮತ್ತು ನನ್ನ ಬೆಂಬಲಿಗರೊಂದಿಗೆ ಆಚರಿಸಲು ನನಗೆ ಅತೀವ ಸಂತೋಷವಾಗಿದೆ! ನಾನು ಇಲ್ಲಿಯವರೆಗೆ ಸಾಧಿಸಿದ್ದೆಲ್ಲವೂ ಜಗತ್ತಿನಾದ್ಯಂತ ನನ್ನ ಅನುಯಾಯಿಗಳ ಪ್ರೀತಿ ಮತ್ತು ಬೆಂಬಲದಿಂದಾಗಿ. ಇದು ಅವರನ್ನು ವಿಶೇಷವಾಗಿ ಗೌರವಿಸುವ ನನ್ನ ಮಾರ್ಗವಾಗಿದೆ ಮತ್ತು ನನ್ನ ವೃತ್ತಿಜೀವನದುದ್ದಕ್ಕೂ ನನಗೆ ಮತ್ತು ನನ್ನ ಪ್ರಯತ್ನಗಳನ್ನು ಬೆಂಬಲಿಸಿದ್ದಕ್ಕಾಗಿ ಅವರಿಗೆ ಧನ್ಯವಾದಗಳು” ಎಂದಿದ್ದಾರೆ. ಅಕ್ಷಯ್ ಕುಮಾರ್ ಮತ್ತು ಇಮ್ರಾನ್ ಹಶ್ಮಿ ಅಭಿನಯದ ಸೆಲ್ಫಿ ಚಿತ್ರ ಫೆಬ್ರವರಿ 24 ರಂದು ಬಿಡುಗಡೆಯಾಗಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ