ಲಂಡನ್ ನಲ್ಲಿ ಪ್ರತ್ಯಕ್ಷವಾದ ನೀರವ್ ಮೋದಿ …!!!

0
32

ಲಂಡನ್

       ಭಾರತದಲ್ಲಿ ಸಾವಿರಾರು ಕೋಟಿ ಸಾಲ ಮಾಡಿ ತನಿಖೆಗೆ ಭಯಪಟ್ಟು ದೇಶ ಬಿಟ್ಟು ಪರಾರಿಯಾಗಿ ತಲೆಮರೆಸಿಕೊಂಡಿರುವ ಮೋಸ್ಟ್ ವಾಂಟೆಡ್ ಡೈಮಂಡ್ ವ್ಯಾಪಾರಿ ನೀರವ್ ಮೋದಿ ಲಂಡನ್ ನಲ್ಲಿ ಪತ್ತೆಯಾಗಿದ್ದಾನೆ, ನೂರಾರುಕೋಟಿ ಬೆಲೆ ಬಾಳುವ ಬಂಗಲೆಯಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದಾನೆ.

       ಬ್ಯಾಂಕ್ ಗಳಿಗೆ 13 ಸಾವಿರ ಕೋಟಿ ರುಪಾಯಿಯಷ್ಟು ಪಂಗನಾಮ ಹಾಕಿ ಪರಾರಿಯಾಗಿದ್ದ ನೀರವ್ ಮೋದಿಯನ್ನು ದಿ ಟೆಲಿಗ್ರಾಫ್ ಪತ್ರಿಕೆ ವರದಿಗಾರ ಪತ್ತೆ ಹಚ್ಚಿದ್ದಾರೆ. ಅಲ್ಲಿ ಆತ ಮತ್ತೊಂದು ಡೈಮಂಡ್ ವ್ಯಾಪಾರ ಶುರು ಮಾಡಿದ್ದಾನೆ ಎಂದು ತಿಳಿದುಬಂದಿದೆ.

       ಪಿಂಕ್ ಅಂಗಿ ತೊಟ್ಟು, ಕಪ್ಪು ಜಾಕೆಟ್ ಧರಿಸಿ, ಗಡ್ಡ ಬಿಟ್ಟು ಆತ ಲಂಡನ್ ನ ಬೀದಿಯಲ್ಲಿ ನಡೆದುಹೋಗುತ್ತಿದ್ದಾಗ ದಿ ಟೆಲಿಗ್ರಾಫ್ ಪತ್ರಿಕೆಯ ವರದಿಗಾರನಿಗೆ ಆತ ಸಿಕ್ಕಿಬಿದ್ದಿದ್ದಾನೆ. ವರದಿಗಾರ ಕೇಳಿದ ಯಾವ ಪ್ರಶ್ನೆಗೂ ಉತ್ತರ ಕೊಡದೆ ಸುಮ್ಮನೆ ನೋ ಕಮೆಂಟ್ಸ್ ಎಂದು ಹೇಳಿಕೊಂಡೆ  ಅಲ್ಲಿಂದ ಕಾಲುಕಿತ್ತಿದ್ದಾನೆ ಎಂದು ತಿಳಿದು ಬಂದಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here