ರಾಯಪುರ:
ರಾಯಪುರದಲ್ಲಿ ನಡೆಯುತ್ತಿರುವ ಎಐಸಿಸಿ ಮಹಾ ಅಧಿವೇಶನದಲ್ಲಿ ಪಾಲ್ಗೊಳಲು ಇಂದು ರಾಯಪುರಕ್ಕೆ ಆಗಮಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮತ್ತಿತ್ತರ ಸ್ವಾಗತಕ್ಕಾಗಿ ಇಡೀ ರಸ್ತೆಯನ್ನೇ ಗುಲಾಬಿ ಹೂವಿನಿಂದ ಸಿಂಗರಿಸಲಾಗಿತ್ತು.
ಈ ವಿಷಯದ ಕುರಿತ ವಿಡಿಯೋ ಸಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು. ಸುಮಾರು 6 ಟನ್ ಗುಲಾಬಿ ಹೂಗಳಿಂದ ರಸ್ತೆ ಸಿಂಗರಿಸಲಾಗಿದೆ ಎನ್ನಲಾಗಿದೆ. ಗುಲಾಬಿ ದಳಗಳಿಂದಾಗಿ ಇಡೀ ರಸ್ತೆ ಕೆಂಪಗೆ ಕಾಣುತ್ತಿರುವ ವಿಡಿಯೊ ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
कांग्रेस में मुख्यमंत्री बने रहने के लिये क्या-कया करना पड़ता है।
छत्तीसगढ़ में प्रियंका के लिये रेड-कारपेट की जगह किलोमीटर तक गुलाब के फूल बिछा दिये। pic.twitter.com/8qRPUbXUjY
— Ankur Singh (@iAnkurSingh) February 25, 2023
ಛತ್ತೀಸ್ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ವಿಮಾನ ನಿಲ್ದಾಣದಲ್ಲಿ ಪ್ರಿಯಾಂಕಾ ಅವರಿಗೆ ಪುಷ್ಪಗುಚ್ಛ ನೀಡಿ ಬರಮಾಡಿಕೊಂಡರು. ನಂತರ ಗುಲಾಬಿಯಿಂದ ಸಿಂಗರಿಸಿದ್ದ ರಸ್ತೆ ಮೂಲಕ ಪ್ರಿಯಾಂಕಾ ವಾದ್ರಾ ಅವರನ್ನು ಕರೆತಂದರು. ಸುಮಾರು ಎರಡು ಕಿ.ಮೀ.ವರೆಗೆ ರಸ್ತೆಯನ್ನು ಅಲಂಕರಿಸಲು 6,000 ಕೆಜಿಗೂ ಹೆಚ್ಚು ಗುಲಾಬಿಗಳನ್ನು ಬಳಸಲಾಯಿತು ಮತ್ತು ವರ್ಣರಂಜಿತ ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಿದ ಜಾನಪದ ಕಲಾವಿದರು ಮಾರ್ಗದ ಉದ್ದಕ್ಕೂ ನಿರ್ಮಿಸಲಾದ ಉದ್ದನೆಯ ವೇದಿಕೆಯಲ್ಲಿ ಪ್ರದರ್ಶನ ನೀಡಿದರು.ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಬೆಂಬಲಿಗರು ಜಮಾಯಿಸಿ ಪ್ರಿಯಾಂಕ ಅವರಿಗೆ ಭವ್ಯ ಸ್ವಾಗತ ಕೋರಿದರು ಮತ್ತು ಧ್ವಜಗಳನ್ನು ಬೀಸಿದರು ಮತ್ತು ಅವರನ್ನು ಅಭಿನಂದಿಸುತ್ತಾ ಘೋಷಣೆಗಳನ್ನು ಕೂಗಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2023/02/Untitled-2-36.jpg)