ಕೊಡಿಗೇನಹಳ್ಳಿ :
ರೈತನ ಬದುಕು ಮನೆ ಮಕ್ಕಳು ಸಾಯ ಎಂಬ ಗಾದೆ ಮಾತಿನಂತೆ ಇಡೀ ಕುಟುಂಬ ಕಷ್ಷಪಟ್ಟು ಬೆಳೆ ಇಟ್ಟರೆ ಬೆಳೆ ಬೆಳೆದು ಮನೆ ಸೇರುತ್ತದೆ ಎಂಬ ಖಾತ್ರಿಯಿಲ್ಲ ಏಕೆಂದರೆ ಐಡಿಹಳ್ಳಿ ಹೋಬಳಿಯ ಸುತ್ತಮುತ್ತಲಿನ ಹಲವು ಹಳ್ಳಿಗಳ ರೈತರುಗಳು ಕೃಷ್ಣ ಮೃಗಗಳ ಕಾಟ ವಿಪರೀತವಾಗಿದ್ದು ರೈತ ಸಂಕಷ್ಟಕ್ಕೀಡಾಗಿದ್ದೇನೆ.
ಐಡಿಹಳ್ಳಿ ಹೋಬಳಿಯ ಚಿಕ್ಕದಾಳವಟ್ಟ ಗ್ರಾಮದ ಸರ್ವೆ ನಂ.58ರಲ್ಲಿ 3 ಏಕರೆ ಪಾರ್ವತಮ್ಮ ಅವರಿಗೆ ಸೇರಿದ ಜಮೀನಿನಲ್ಲಿ ಇತ್ತೀಚಿಗೆ ಮುಸುಕಿನ ಜೋಳದ ಬೆಳೆಗೆ ಸೋಮವಾರ ರಾತ್ರಿ ಕೃಷ್ಣ ಮೃಗಗಳ ಹಿಂಡು ಸುಮಾರು ಆರ್ಧ ಏಕರೆಯಷ್ಟು ಬೆಳೆಯನ್ನು ನಾಷಪಡಿಸಿದ್ದು ಪರಿಹಾರಕ್ಕೆ ರೈತರು ಒತ್ತಾಯಿಸಿದ್ದಾರೆ.
ಅರಣ್ಯ ಇಲಾಖೆ ಕೃಷ್ಣ ಮೃಗಗಳಿಗೆ ಆಹಾರ ಬದ್ರತೆಯನ್ನು ಒದಗಿಸಿ ರೈತರಿಗೆ ಆಗುವು ಬೆಳೆ ನಷ್ಟದ ಪರಿಹಾರವನ್ನು ಸಂಬಂಧ ಪಟ್ಟ ಇಲಾಖೆಯಿಂದ ಪರಿಹಾರ ದೊರಕಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ