ನವದೆಹಲಿ:
ಅಮೇರಿದ ಹಿಂಡನ್ ಬರ್ಗ್ ಸಂಸ್ಥೆ ನೀಡಿದ ವರದಿಯನ್ವಯ ಕಾರ್ಪೊರೇಟ್ ಆಡಳಿತ ಮತ್ತು ಲೆಕ್ಕಪತ್ರ ವಂಚನೆ ಆರೋಪದಿಂದಾಗಿ ಗೌತಮ್ ಅದಾನಿ ಮತ್ತು ಸಮೂಹದ ಭವಿಷ್ಯ ಮೇಲೆ ತೀವ್ರ ಹೊಡೆತ ಬಿದಿದೆ ಮಾಡಿದೆ. ಇದರಿಂದಾಗಿ ಮತ್ತೆ ರಿಲಯನ್ಸ್ ಇಂಡಸ್ಟ್ರೀಸ್ನ ಮುಖೇಶ್ ಅಂಬಾನಿ ದೇಶದ ನಂಬರ್ 1 ಶ್ರೀಮಂತ ಸ್ಥಾನ ಅಲಂಕರಿಸಿದ್ದಾರೆ.
ಎಂ3ಎಂ ಹುರುನ್ ಗ್ಲೋಬಲ್ ರಿಚ್ ಲಿಸ್ಟ್ ಪ್ರಕಾರ, ಅದಾನಿ ಕಳೆದ ವರ್ಷದಿಂದ ಪ್ರತಿ ವಾರ 3,000 ಕೋಟಿ ಸಂಪತ್ತನ್ನು ಕಳೆದುಕೊಂಡಿದ್ದಾರೆ ಮತ್ತು ಅವರ ಒಟ್ಟಾರೆ ನಿವ್ವಳ ಮೌಲ್ಯವು ಅವರ ಗರಿಷ್ಠ ಸಂಪತ್ತಿನ ಮಟ್ಟಕ್ಕಿಂತ ಶೇ.60 ರಷ್ಟು ಕಡಿಮೆಯಾಗಿದೆ. ಮಾರ್ಚ್ ಮಧ್ಯದಲ್ಲಿ ಅವರ ಒಟ್ಟಾರೇ ಸಂಪತ್ತು 53 ಬಿಲಿಯನ್ ಡಾಲರ್ ನಷ್ಟಾಗಿದೆ.
ಅಂಬಾನಿ ಅವರ ಸಂಪತ್ತಿನಲ್ಲಿಯೂ ಕುಸಿತವಾಗಿದೆ. ಆದರೆ, ಅವರ ನಿವ್ವಳ ಮೌಲ್ಯವು ಶೇ. 20 ರಷ್ಟು ಕುಸಿತದೊಂದಿಗೆ 82 ಬಿಲಿಯನ್ ಡಾಲರ್ ನಷ್ಟಾಗಿದೆ. ಇದರಿಂದಾಗಿ ಅವರು ಅದಾನಿಯನ್ನು ಹಿಂದಿಕ್ಕಿ ದೇಶದ ಅತ್ಯಂತ ಶ್ರೀಮಂತ ಎನ್ನಿಸಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2023/02/NQG6HV4W7ZNVXK7OUVJ6KOMRI4.jpg)