ಬೆಂಗಳೂರು:
ರಾಜಾಜಿನಗರದಿಂದ ಕಾಂಗ್ರೆಸ್ ಟಿಕೆಟ್ ಸಿಗದ ಕಾರಣ ಬೆಂಗಳೂರು ಮಾಜಿ ಉಪಮೇಯರ್ ಬಿಎಸ್ ಪುಟ್ಟರಾಜು ಬಂಡಾಯವೆದ್ದಿದ್ದಾರೆ. ಲಿಂಗಾಯತ ಪ್ರಮುಖ ನಾಯಕರಾದ ಪುಟ್ಟರಾಜು ಸೋಮವಾರ ರಾಮಮಂದಿರ ಮೈದಾನದಲ್ಲಿ ಬೆಂಬಲಿಗರ ಸಭೆ ನಡೆಸಿದರು.
ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ವಿಧಾನಸಭೆ ಟಿಕೆಟ್‌ಗಾಗಿ ಚರ್ಚಿಸಿದ ವೇಳೆಯಲ್ಲಿ, ಅವರು ಸೂಚಿಸಿದ ಕೆಲ ಹೆಸರುಗಳಲ್ಲಿ ಪುಟ್ಟರಾಜು ಕೂಡ ಸೇರಿದ್ದರು.
ರಾಜ್ಯದ ದಕ್ಷಿಣದಲ್ಲಿ ಸುಮಾರು 100 ಕ್ಷೇತ್ರಗಳಿದ್ದು,ಅದರಲ್ಲಿ ಸಮುದಾಯವು 10 ಸ್ಥಾನಗಳನ್ನು ಬಯಸುತ್ತಿದೆ ಎಂದು ಮಹಾಸಭಾ ಖರ್ಗೆ ಅವರಿಗೆ ತಿಳಿಸಿತ್ತು.