ನಾಗ್ಪುರ:
ಸರಕುಸಾಗಣೆ ರೈಲಿನ ಇಂಜಿನ್ ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಗೋಧ್ನಿ ಕಾರ್ಡ್ ಲೈನ್ ಬಳಿ ಹಳಿ ತಪ್ಪಿದೆ. ಆದರೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.ಘಟನೆಯ ಹಿನ್ನೆಲೆ ಸೇವೆಗಳಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ ಎಂದು ರೈಲ್ವೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಖಾಲಿ ಇದ್ದ ಸರಕು ಸಾಗಣೆ ರೈಲಿನ ಇಂಜಿನ್ ಹಳಿ ತಪ್ಪಿದ್ದು ರಾತ್ರಿ 8:30 ಕ್ಕೆ ಈ ಘಟನೆ ವರದಿಯಾಗಿದೆ. ರೈಲ್ವೆ ಭಾಷೆಯಲ್ಲಿ ಕಾರ್ಡ್ ಎಂದರೆ ಎರಡು ಪ್ರತ್ಯೇಕ ಮಾರ್ಗಗಳನ್ನು ಸಂಪರ್ಕಿಸುವ ಸಣ್ಣ ಸಾಲು ಎಂಬುದಾಗಿದೆ.