ಲಖನೌ:
ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರೋಡೆಕೋರ-ರಾಜಕಾರಣಿ ಅತಿಕ್ ಅಹ್ಮದ್ ಅವರ ಪುತ್ರ ಅಸದ್ ಹಾಗೂ ಆತನ ಸಹಾಯಕ ಗುಲಾಮ್ ನನ್ನು ಎನ್ಕೌಂಟರ್ ನಲ್ಲಿ ಹತ್ಯೆ ಮಾಡಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸರು ತಿಳಿಸಿದರು .
ಝಾನ್ಸಿಯಲ್ಲಿ ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ ಎನ್ಕೌಂಟರ್ ನಡೆಸಿದ್ದು, ಎನ್ಕೌಂಟರ್ ನಲ್ಲಿ ಅಸದ್ ಹಾಗೂ ಆತನ ಸಹಾಯಕನನ್ನು ಹತ್ಯೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಹತ್ಯೆಯಾದ ಅಸದ್ ನಿಂದ ಕೆಲವು ಅತ್ಯಾಧುನಿಕ ವಿದೇಶಿ ನಿರ್ಮಿತ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಟಿಎಫ್ ಮೂಲಗಳು ಮಾಹಿತಿ ನೀಡಿವೆ. ಅಸದ್ ಅಹ್ಮದ್ ಅವರ ತಲೆಗೆ ಈ ಹಿಂದೆ ಪೊಲೀಸರು 5 ಲಕ್ಷ ರೂ ಇನಾಮು ಘೋಷಿಸಿದ್ದರು.
ಗ್ಯಾಂಗ್ ಸ್ಟರ್ ಅತಿಕ್ ಅಹ್ಮದ್ ಅವರ ಸಹೋದರಿ ಆಯೇಷಾ ನೂರಿ ಅವರ ಮಗಳೊಂದಿಗೆ ಹತ್ಯೆಯಾದ ಅಸಾದ್ ಮದುವೆ ನಿಶ್ಚಯವಾಗಿತ್ತು. ಕಳೆದ ವರ್ಷ ಇವರಿಬ್ಬರ ನಿಶ್ಚಿತಾರ್ಥವಾಗಿತ್ತು ಎಂದು ಮಾಧ್ಯಮಗಳು ವರದಿ ಮಾಡಿವೆ.
ನಿನ್ನೆಯಷ್ಟೇ ಹೇಳಿಕೆ ನೀಡಿದ್ದ ಅತೀಕ್ ಅಹ್ಮದ್, ಗುಜರಾತ್ನ ಸಬರಮತಿ ಕೇಂದ್ರ ಕಾರಾಗೃಹದಲ್ಲಿ ತನಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದ್ದ.ಸರ್ಕಾರ ನನ್ನನ್ನು ನಾಶ ಮಾಡಿದೆ. ತನ್ನ ಕುಟುಂಬ ನಾಶ ಮಾಡಿದೆ. ಸಬರಮತಿ ಜೈಲಿನಲ್ಲಿ ಕಿರುಕುಳ ನೀಡಲಾಗುತ್ತಿದೆ ಎಂದು ಹೇಳಿದ್ದ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ