ಭಯೋತ್ಪಾದನೆಗೆ ಬಳಕೆಯಾಗುತ್ತಿದ್ದ 14 APPಗಳು ಬ್ಯಾನ್…!

ನವದೆಹಲಿ: 

    ಪಾಕಿಸ್ತಾನದ ಉಗ್ರರಿಗೆ ರಹಸ್ಯ ಸಂದೇಶ ಕಳುಹಿಸಲು ಜಮ್ಮು& ಕಾಶ್ಮೀರದ ಕಣಿವೆ ಪ್ರದೇಶದ ಭಯೋತ್ಪಾದಕ ಗುಂಪುಗಳು ಬಳಸುತ್ತಿದ್ದ 14 ಮೆಸೆಂಜರ್ ಆ್ಯಪ್‌ ಗಳನ್ನು ಕೇಂದ್ರ ಸರ್ಕಾರ ಸೋಮವಾರ ನಿರ್ಬಂಧಿಸಿದೆ. 

     ಭದ್ರತಾ ಮತ್ತು ಗುಪ್ತಚರ ಸಂಸ್ಥೆಗಳ ಶಿಫಾರಸಿನ ಮೇರೆಗೆ ಕೇಂದ್ರ ಸರ್ಕಾರ ಈ ಕ್ರಮವನ್ನು ಕೈಗೊಂಡಿದ್ದು, ಈ ಆ್ಯಪ್‌ಗಳನ್ನು ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಸೆಕ್ಷನ್ 69ಎ ಅಡಿಯಲ್ಲಿ ನಿರ್ಬಂಧಿಸಲಾಗಿದೆ.
    ದೇಶದ ಭದ್ರತೆಗೆ ಧಕ್ಕೆ ತರುವ ಮೊಬೈಲ್ ಅಪ್ಲಿಕೇಷನ್ ಗಳ ಮೇಲೆ ನಿಷೇಧ ಹೇರಿರುವುದು ಇದೇ ಮೊದಲಲ್ಲ. ಈ ಹಿಂದೆ ಚೀನಾದ ಹಲವು ಅಪ್ಲಿಕೇಷನ್ ಗಳನ್ನು ಸರ್ಕಾರ ನಿಷೇಧಿಸಿದೆ. ಟಿಕ್‌ ಟಾಕ್‌, ಶೇರ್‌ ಚಾಟ್‌, ಹೆಲೋ, ಲೈಕಿ, ಯುಸಿ ನ್ಯೂಸ್‌, ಬಿಗೋ ಲೈವ್, ಯುಸಿ ಬ್ರೌಸರ್, ಜೆಂಡರ್‌, ಕ್ಯಾಮ್‌ ಸ್ಕ್ಯಾನರ್‌, ಪಬ್‌ ಜಿ, ಫ್ರೀ ಫೈರ್‌ ನಂತರ ಜನಪ್ರಿಯ ಮುಂತಾದ ಜನಪ್ರಿಯ ಮೊಬೈಲ್ ಗೇಮ್‌, ಹಾಗೂ ಆ್ಯಪ್‌ ಸೇರಿದಂತೆ 200 ಕ್ಕೂ ಹೆಚ್ಚು ಚೀನೀ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link