ಶ್ರೀಲಂಕಾ:
ಈಸ್ಟರ್ ಭಾನುವಾರದ ಭಯೋತ್ಪಾದಕ ದಾಳಿಯ ವೇಳೆ ಕರ್ತವ್ಯ ಲೋಪವೆಸಗಿದ ಆರೋಪದಲ್ಲಿ ಶ್ರೀಲಂಕಾದ ಮಾಜಿ ರಕ್ಷಣಾ ಕಾರ್ಯದರ್ಶಿ ಹೇಮಸಿರಿ ಫರ್ನಾಂಡೋ ಮತ್ತು ಪೊಲೀಸ್ ಮಹಾ ನಿರ್ದೇಶಕ ಪುಜಿತ್ ಜಯಸುಂದರ ಅವರನ್ನು ಸಿಐಡಿ ಮಂಗಳವಾರ ಬಂಧಿಸಿದೆ.
ಏಪ್ರಿಲ್ 21ರಂದು ನಡೆದ ಈಸ್ಟರ್ ದಾಳಿಯಲ್ಲಿ 250 ಮಂದಿ ಸಾವನ್ನಪ್ಪಿದ್ದರು. ಪೊಲೀಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಜಯಸುಂದರ ಅವರನ್ನು ಅಲ್ಲಿಂದಲೇ ಬಂಧಿಸಲಾಗಿದೆ. ಅದೇ ರೀತಿ ಫರ್ನಾಂಡೋ ಅವರನ್ನು ನ್ಯಾಷನಲ್ ಆಸ್ಪತ್ರೆಯಿಂದ ಬಂಧಿಸಲಾಗಿದೆ.ಮಾಜಿ ಪೊಲೀಸ್ ಮಹಾನಿರ್ದೇಶಕ ಮತ್ತು ಮಾಜಿ ರಕ್ಷಣಾ ಕಾರ್ಯದರ್ಶಿ ಅವರ ವಿರುದ್ಧ ಆರೋಪ ದಾಖಲಿಸುವಂತೆ ಅಟಾರ್ನಿ ಜನರಲ್ ದಪ್ಪುಲಾ ಡೇ ಲಿವೇರಾ ಸೋಮವಾರ ಹಾಲಿ ಪೊಲೀಸ್ ವರಿಷ್ಠರಿಗೆ ಸೂಚಿಸಿದ್ದರು.
ಅಧಿಕಾರಿಗಳ ಕರ್ತವ್ಯ ಲೋಪ ಮತ್ತು ಕ್ರಿಮಿನಲ್ ನಿರ್ಲಕ್ಷ್ಯ ದಾಖಲಿಸಲು ಸಾಕಷ್ಟು ಸಾಕ್ಷ್ಯಾಧಾರಗಳು ಇವೆ. ಅಂತಾರಾಷ್ಟ್ರೀಯ ಕಾನೂನಿನಡಿ ಮಾನವೀಯತೆಯ ವಿರುದ್ಧ ಎಸಗಿದ ಭಾರೀ ಅಪರಾಧ ಎಂದು ಇದನ್ನು ಪರಿಗಣಿಸಲಾಗಿದೆ ಎಂದು ಸರ್ಕಾರದ ಅಧಿಕೃತ ಸುದ್ದಿ ಪೋರ್ಟಲ್ ತಿಳಿಸಿದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ