ಹೊಸ ಸರ್ಕಾರ ರಚನೆ : ಬಿಬಿಎಂಪಿ ಚುನಾವಣೆಗೆ ಹೆಚ್ಚಿದ ಬೇಡಿಕೆ

ಬೆಂಗಳೂರು:

     ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಭರ್ಜರಿ ಗೆಲುವಿನಿಂದ ಉತ್ಸುಕರಾಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾಜಿ ಕಾರ್ಪೊರೇಟರ್‌ಗಳು ಶೀಘ್ರವೇ ಬಿಬಿಎಂಪಿಗೆ ಚುನಾವಣೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.

     ”ಹಿಂದಿನ ಸರಕಾರ ಬಿಬಿಎಂಪಿ ಚುನಾವಣೆಯನ್ನು ವಿಳಂಬ ಮಾಡಿರುವುದನ್ನು ಪ್ರಶ್ನಿಸಿ ನಾವು ಈಗಾಗಲೇ ಸುಪ್ರೀಂ ಕೋರ್ಟ್‌ಗೆ ಹೋಗಿದ್ದೇವೆ. ಈಗ ಕಾಂಗ್ರೆಸ್‌ಗೆ ಪೂರ್ಣ ಬಹುಮತವಿದ್ದು, ಸಚಿವ ಸಂಪುಟ ಅಸ್ತಿತ್ವಕ್ಕೆ ಬರಲಿದ್ದು,ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ಬಿಬಿಎಂಪಿ ಚುನಾವಣೆ ನಡೆಸುವಂತೆ ಒತ್ತಾಯಿಸುತ್ತೇವೆ’’ ಎಂದು ಮನೋರಾಯನ ಪಾಳ್ಯ ವಾರ್ಡ್‌ನ ಕಾರ್ಪೊರೇಟರ್ ಅಬ್ದುಲ್ ವಾಜಿದ್ ಹೇಳಿದ್ದಾರೆ.

    ವಾಜಿದ್ ಜೊತೆಗೆ ಶಿವರಾಜು, ಮಂಜುನಾಥ್ ರೆಡ್ಡಿ, ರಿಜ್ವಾನ್ ನವಾಬ್, ಜಿ ಪದ್ಮಾವತಿ ಮತ್ತು ಇತರರು ಕೂಡ ಬಿಬಿಎಂಪಿಯಲ್ಲಿಯೂ ಕಾಂಗ್ರೆಸ್‌  ಬರಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

    ಪಾಲಿಕೆ ಚುನಾವಣೆ ನಡೆದರೆ ಕಾಂಗ್ರೆಸ್‌ ಬಿಬಿಎಂಪಿ ಅಧಿಕಾರ ಹಿಡಿಯಲಿದೆ. ರಾಜ್ಯದಲ್ಲಿ ನಾವು ಬಲಿಷ್ಠ ಸರ್ಕಾರವನ್ನು ಹೊಂದಿರುವುದರಿಂದ  ಮುಂದಿನ ಗೆಲುವು ಸಹ ನಮ್ಮದೆ ಆಗಿರುತ್ತದೆ. ಆದಷ್ಟು ಬೇಗ ಪಾಲಿಕೆ ಚುನಾವಣೆ ನಡೆಸಲು ನಮ್ಮ ನಾಯಕರ ಜೊತೆ ಮಾತನಾಡಲು ಯೋಜಿಸಿದ್ದೇವೆ ಎಂದು ಶಿವನಗರ ವಾರ್ಡ್ ಪ್ರತಿನಿಧಿಸಿದ್ದ  ಶಿವರಾಜು ಹೇಳಿದರು.

 

     ಪಾಲಿಕೆ ಮೇಲೆ ಹಿಡಿತ ಹೊಂದಿರುವ ಶಾಸಕರು ಚುನಾವಣೆ ವಿಳಂಬ ಮಾಡುತ್ತಿದ್ದಾರೆ ಎಂದು ಈ ಹಿಂದೆ ಪಾಲಿಕೆ ಸದಸ್ಯರಾಗಿ ಸೇವೆ ಸಲ್ಲಿಸಿದ ಕೆಲವು ಹಿರಿಯ ಮುಖಂಡರು ಅಭಿಪ್ರಾಯ ಪಟ್ಟಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap