ಬೆಂಗಳೂರು :
ಭಜರಂಗದಳ ನಿಷೇಧ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ. ಡಾ.ಜಿ.ಪರಮೇಶ್ವರ್ ಅವರು,ನಮ್ಮ ಪ್ರಣಾಳಿಕೆಯಲ್ಲಿ ಸರಿಯಾಗಿ ನೋಡಬೇಕು. ಯಾರು ಸಮಾಜದ ಶಾಂತಿಯನ್ನು ಕದಡುತ್ತಾರೆ. ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಅಂತಾ ಹೇಳಿದ್ದೇವೆ ಅಷ್ಟೇ ಎಂದು ಹೇಳಿದ್ದಾರೆ.
ವಿಧಾನಸೌಧದಲ್ಲಿ ತಮ್ಮ ಕಚೇರಿ ಪೂಜೆ ನೆರವೇರಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅವರು ಶಾಂತಿ ಕದಡುವುದಿಲ್ಲವೆಂದ ಮೇಲೆ ಅವರಿಗೆ ಯಾಕೆ ವರಿ. ಕಾನೂನು ಬ್ರೇಕ್ ಮಾಡುವುದಿಲ್ಲ ಅಂದರೆ ಯಾಕೆ ಭಯ. ಅದು ಅವರಿಗೆ ಅರ್ಥ ಆದರೆ ಸಾಕು ಎಂದರು. ನಮ್ಮ ಕಚೇರಿಯ ಪೂಜೆ ಮಾಡಿದ್ದೇವೆ. ಅನೇಕ ಜನ ಟೀಕೆ ಟಿಪ್ಪಣಿ ಮಾಡಬಹುದು. ದೇವರ ಹೆಸರಲ್ಲಿ ಪ್ರಮಾಣ ವಚನ ತೆಗೆದುಕೊಳ್ಳುತ್ತೇವೆ. ದೇವರನ್ನು ನೆನೆಸಿಕೊಂಡು ಕಚೇರಿ ಪೂಜೆ ಮಾಡಿದ್ದೇವೆ. ಇದು ನಮ್ಮೆಲ್ಲರಿಗೂ ಶಕ್ತಿ ಕೊಡುವಂತದ್ದು ಎಂದರು. ರಾಜ್ಯದ ಕಾನೂನು ವ್ಯವಸ್ಥೆಯನ್ನು ಮುಖವಾಣಿಯಲ್ಲಿರುವ ಗೃಹ ಖಾತೆ ಬಹಳ ಪ್ರಾಮುಖ್ಯ.
ಇಲ್ಲಿ ಏನೇ ವಿದ್ಯಾಮಾನಗಳು ನಡೆದರು ಜನತೆಗೆ ಮುಟ್ಟುತ್ತದೆ. ಇಲ್ಲಿಂದ ಒಳ್ಳೆಯ ಕೆಲಸಗಳಾಗಲಿ ಎಂದ ಅವರು, ಸಚಿವ ಸಂಪುಟ ಸಭೆಯಲ್ಲಿ ಐದು ಗ್ಯಾರಂಟಿ ಯೋಜನೆ ಬಗ್ಗೆ ಮಾಹಿತಿ ನೀಡಿದ್ದೇವೆ. ಈಗ ಏನೇ ಹೇಳಿದರೂ ಅಪ್ರಸ್ತುತವಾಗುತ್ತದೆ ಎಂದು ಹೇಳಿದರು.
ವಿಧಾನಸೌಧದಲ್ಲಿ ಕೊಠಡಿ ಪೂಜೆ ನೆರವೇರಿಸಿದ ಸಚಿವ ಕೆ.ಎಚ್.ಮುನಿಯಪ್ಪ : ವಿಧಾನಸೌಧದಲ್ಲಿ ಕೊಠಡಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಕೆ.ಎಚ್. ಮುನಿಯಪ್ಪ, ಜನ ಆಶೀರ್ವಾದ ಮಾಡಿದ್ದಾರೆ. 5 ಗ್ಯಾರೆಂಟಿಗಳ ಜಾರಿ ಖಚಿತ. ಇದರಲ್ಲಿ ಎರಡು ಮಾತಿಲ್ಲ. 10 ಕೆಜಿ ಅಕ್ಕಿ ಕೊಡುವ ಯೋಜನೆ ಬಗ್ಗೆ ನಾಳಿನ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡ್ತೇವೆ.
ನಾಳೆನ ಸಂಪುಟ ಸಭೆಯಲ್ಲಿ ಪೂರ್ಣ ಮಾಹಿತಿ ಸಿಗಲಿದೆ ಎಂದು ಹೇಳಿದರು. ಸದ್ಯ ನಾಗರೀಕರಿಗೆ 3 ಕೆಜಿ ಅಕ್ಕಿ ನೀಡಲು ಕೊರತೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ದೇಶ ವಿಶಾಲವಾಗಿದೆ. ಅಕ್ಕಿ ಬೆಳೆಯುವ ರಾಜ್ಯಗಳು ಸಾಕಷ್ಟು ಇವೆ. ಕೇಂದ್ರ ಸರ್ಕಾರ ಏನು ಮಾಡುತ್ತೇ ನೋಡೋಣ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ