ಲಂಡನ್:
ದೇಶದಲ್ಲಿ ತೀವ್ರ ಸಂಚಲನಾ ಹಾಗು ಕುತೂಹಲಕಾರಿಯಾಗಿದ್ದ ಪಿಎನ್‌ಬಿ ಬಹುಕೋಟಿ ವಂಚನೆ ಅರೋಪಿ ವಜ್ರದ ವ್ಯಾಪಾರಿ ನೀರವ್ ಮೋದಿ ಅವರ ಕಸ್ಟಡಿಯನ್ನು ಜುಲೈ 9ರವರೆಗೆ ವಿಸ್ತರಿಸಿ ಲಂಡನ್ ಕೋರ್ಟ್ ಆದೇಶಿಸಿದೆ. ಸದ್ಯ ಲಂಡನ್‌ನ ವಾಂಡ್ಸ್‌ವರ್ತ್ ಜೈಲಿನಲ್ಲಿರುವ ಮೋದಿ ಲಂಡನ್‌ನ ವೆಸ್ಟ್‌ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ರಿಮಾಂಡ್ ವಿಚಾರಣೆಗೆ ವಿಡಿಯೋ ಕಾನ್ಪರೆನ್ಸ್ ಕಾಲ ಮುಖೇನಾ ಹಾಜರಾಗಿದ್ದರು.
ಮುಂದಿನ ವಿಚಾರಣೆಯು ಸೆಪ್ಟೆಂಬರ್ 7ರಂದು ನಡೆಯಲಿದ್ದು ಅಂದು ಭಾರತಕ್ಕೆ ಹಸ್ತಾಂತರ ಕುರಿತಂತೆ ವಿಚಾರಣೆಯನ್ನು ವೀಡಿಯೊ ಕಾಲ್ ಮೂಲಕ ನಡೆಸಲಾಗುವುದು ಎಂದು ಜಿಲ್ಲಾ ನ್ಯಾಯಾಧೀಶ ಸ್ಯಾಮ್ಯುಯೆಲ್ ಗೂಜಿ ಅವರು ಮೋದಿಗೆ ತಿಳಿಸಿದರು.ಕಳೆದ ತಿಂಗಳು, ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಮೊದಲ ಭಾಗದ ಹಸ್ತಾಂತರ ವಿಚಾರಣೆ ನಡೆದಿತ್ತು. ಇದು ಕೊರೊನಾವೈರಸ್ ಲಾಕ್‌ಡೌನ್ ನಿರ್ಬಂಧಗಳಿಂದಾಗಿ ವಿಚಾರಣೆ ಮುಂದೂಡಲಾಗಿತ್ತು. ಇಂದು ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಧೀಶರು ಎರಡನೇ ಭಾಗದ ವಿಚಾರಣೆ ಸೆಪ್ಟೆಂಬರ್ 7ರಿಂದ ಐದು ದಿನಗಳ ನಡೆಯಲಿದೆ ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
