ಬೆಂಗಳೂರು :
ಸರ್ಕಾರಿ ಬಸ್ ನಲ್ಲಿ ಸೀಟಿಗಾಗಿ ಮಹಿಳೆಯರು ಗಲಾಟೆ ನಡೆಸಿದ ಹಿನ್ನೆಲೆ ಪೊಲೀಸರು ಲಾಠಿಚಾರ್ಜ್ ನಡೆಸಿದ ಘಟನೆ ಕೋಲಾರ ನಗರದ ಕೆಎಸ್ ಆರ್ ಟಿಸಿ (KSRTC) ಬಸ್ ನಿಲ್ದಾಣದಲ್ಲಿ ನಡೆದಿದೆ.
ಬಸ್ ನಿಲ್ದಾಣದಲ್ಲಿ ಮಹಿಳೆಯರು ಬಸ್ಸಿನ ಸೀಟಿಗಾಗಿ ಕಿತ್ತಾಟ ನಡೆಸಿದ್ದು, ಮಹಿಳೆಯರ ನಡುವೆ ಭಾರಿ ಗಲಾಟೆ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ಕೂಡ ಹೋಗಿದ್ದಾರೆ
ಕೋಲಾರದಿಂದ ಬೆಂಗಳೂರಿಗೆ ತೆರಳುವ ಬಸ್ ನಲ್ಲಿ ಸೀಟಿಗಾಗಿ ಮಹಿಳೆಯರು ಕಿತ್ತಾಟ ನಡೆಸಿದ್ದಾರೆ. ಇಬ್ಬರು ಮಹಿಳೆಯರ ನಡುವೆ ಗಲಾಟೆ ನಡೆದಿದ್ದು, ಮಹಿಳೆಯೊಬ್ಬಳು ತನ್ನ ಸಂಬಂಧಿಕರನ್ನ ಕರೆಸಿ ದೊಡ್ಡ ರಾದ್ದಾಂತ ನಡೆಸಿದ್ದಾಳೆ. ಈ ಹಿನ್ನೆಲೆ ಪೊಲೀಸರು ಲಾಠಿಚಾರ್ಜ್ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಘಟನೆ ಸಂಬಂಧ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ