ಸಾರಿಗೆ ಟೊಮೆಟೊ : ಗಂಡನನ್ನು ಬಿಟ್ಟ ಹೆಂಡತಿ

ಭೋಪಾಲ್‌: 

      ಮಧ್ಯಪ್ರದೇಶದ ಶಾಹದೋಲ್‌ ಜಿಲ್ಲೆಯಲ್ಲಿ ಈ ನಡೆದಿದ್ದು ಸದ್ಯ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಇರುವ ಟೊಮೆಟೊವನ್ನು ತನ್ನನ್ನು ಕೇಳದೇ ಸಾಂಬಾರಿನಲ್ಲಿ ಬಳಸಿದಕ್ಕೆ ಗಂಡನ ಜೊತೆ ಜಗಳವಾಡಿದ ಹೆಂಡತಿ ಕೊನೆಗೆ ಮನೆಯನ್ನೇ ತೊರೆದು ಕಾಣೆಯಾಗಿರುವ ಘಟನೆ ನಡೆದಿದೆ.

    ಸಂಜೀವ್‌ ಹೇಳದೇ ಕೇಳದೆ ಎರಡು ಟೊಮೆಟೊ ಹಣ್ಣುಗಳನ್ನು ಬಳಸಿ ಸಾಂಬಾರು ತಯಾರಿಸಿದ್ದನ್ನು ಕಂಡು ಕೋಪಗೊಂಡ ಪತ್ನಿ ಜಗಳ ಆರಂಭಿಸಿದ್ದಾಳೆ. ಟೊಮೆಟೊದಿಂದ ಆರಂಭವಾದ ಸಣ್ಣ ಜಗಳ ಅತಿರೇಕಕ್ಕೆ ಹೋಗಿದ್ದು, ಕೊನೆಗೆ ಸಂಜೀವ್‌ ಬರ್ಮನ್‌ ಪತ್ನಿ, ಮಗುವಿನ ಜೊತೆ ಮನೆ ಬಿಟ್ಟು ಹೋಗಿದ್ದಾಳೆ. ಈ ಸಣ್ಣ ವಿಚಾರಕ್ಕೆ ಮನೆ ಬಿಟ್ಟು ಹೋದ ಪತ್ನಿಯನ್ನು ಸಂಜೀವ್‌ ಬರ್ಮನ್‌ ಹುಡುಕಿದ್ದಾರೆ. ಆದರೆ ಆಕೆ ಎಲ್ಲಿಯೂ ಪತ್ತೆಯಾಗದ ಕಾರಣ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ
    ಸಂಜೀವ್ ಬರ್ಮನ್‌ ಹೆಂಡತಿ ನಾಪತ್ತೆಯ ಬಗ್ಗೆ ದೂರು ದಾಖಲಿಸಿರುವುದನ್ನು ಪೊಲೀಸ್‌ ಅಧಿಕಾರಿಯೊಬ್ಬರು ಖಚಿತಪಡಿಸಿದ್ದು, ಟೊಮೆಟೊಗಾಗಿ ಜಗಳ ಆರಂಭವಾಗಿದೆ ಎನ್ನುವುದನ್ನು ಸಹ ತಿಳಿಸಿದ್ದಾರೆ. ಸಂಜೀವ್ ಬರ್ಮನ್‌ ಅವರು ಅಡುಗೆ ಮಾಡುತ್ತಿದ್ದಾಗ ತರಕಾರಿ ಸಾಂಬಾರಿಗೆ ಎರಡು ಟೊಮೆಟೊ ಹಾಕಿದ್ದರಿಂದ ಜಗಳ ಆರಂಭವಾಗಿದ್ದು, ಅನುಮತಿ ಕೇಳಲಿಲ್ಲ ಎಂದು ಪತ್ನಿ ಮೂರು ದಿನದಿಂದ ಮಾತನಾಡಿಲ್ಲ, ಬಳಿಕ ಮಗುವಿನೊಂದಿಗೆ ಮನೆ ಬಿಟ್ಟು ಹೋಗಿದ್ದಾಳೆ ಎಂದು ಸಂಜೀವ್ ಬರ್ಮನ್‌ ದೂರು ನೀಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap