ಬೆಂಗಳೂರು:
ಕಲರ್ಸ್ ಕನ್ನಡ ವಾಹಿನಿಯ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ಈಗ ಲಕ್ಷ್ಮೀ ಹಾಗೂ ವೈಷ್ಣವ್ ನಡುವೆ ಪ್ರೀತಿ ಚಿಗುರೊಡೆಯುತ್ತಿದೆ. ಆದರೆ, ಇದನ್ನು ಕೀರ್ತಿ ಕೈಯಲ್ಲಿ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ವೈಷ್ಣವ್ಗಾಗಿ ಕೀರ್ತಿ ಏನೋ ಮಾಡುವುದಕ್ಕೆ ಹೋಗಿ ಎಲ್ಲವೂ ಉಲ್ಟಾ ಆಗುತ್ತಿದೆ. ಮಾತು ಕೊಟ್ಟ ಕಾವೇರಿ ಕೈಕೊಡುತ್ತಿದ್ದಾಳೆ. ವೈಷ್ಣವ್ ಅನ್ನು ಬಿಟ್ಟಿರಲಾರದೇ ಕೀರ್ತಿ ಒದ್ದಾಡುತ್ತಿದ್ದಾಳೆ. ಕಾವೇರಿಯ ಪ್ಲ್ಯಾನ್ ತಿಳಿಯದ ವೈಷ್ಣವ್, ಕೀರ್ತಿ ಮೇಲೆ ಅಪಾರ್ಥ ಮಾಡಿಕೊಂಡಿದ್ದು, ಈಗ ಲಕ್ಷ್ಮೀಯ ಮೇಲೆ ಪ್ರೀತಿ ಹೆಚ್ಚಿಸಿಕೊಂಡಿದ್ದಾನೆ. ಪ್ರತಿಯೊಂದಕ್ಕೂ ಲಕ್ಷ್ಮಿಗೆ ವೈಷ್ಣವ್ ಸಪೋರ್ಟ್ ಮಾಡುತ್ತಿದ್ದಾನೆ. ಇತ್ತ ಮಾಡದ ತಪ್ಪಿಗೆ ಕೀರ್ತಿ ಬಲಿಪಶು ಆಗಿದ್ದಾಳೆ.
ಕಾವೇರಿಗೆ ಕಷ್ಟವೂ ಬರಬೇಕು ಎಂಬಂತೆ ನಡೆದುಕೊಳ್ಲೂತ್ತಿದ್ದಾಳೆ. ಕೀರ್ತಿ ಹಾಗೂ ಕಾವೇರಿ ಮಧ್ಯೆ ಏನು ನಡೆಯುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಾಗದಿದ್ದರೂ ಸಮಸ್ಯೆ ಉಂಟು ಮಾಡುತ್ತಿದ್ದಾಳೆ. ಕೀರ್ತಿಗೆ ಪದೇ ಪದೇ ಸುಪ್ರೀತಾ ಹರ್ಟ್ ಮಾಡುತ್ತಿದ್ದಾಳೆ. ಆದರೆ, ಕಾವೇರಿ ಹೆಣೆದಿರುವ ಸುಳ್ಳಿನ ದಾರ ಯಾವಾಗ ಕಟ್ ಆಗಿ, ವೈಷ್ಣವ್ ಅಮ್ಮನ ಮೇಲೆ ಕೂಗಾಡುವಂತಾಗುತ್ತೋ ಗೊತ್ತಿಲ್ಲ.
ಧಾರಾವಾಹಿಯಲ್ಲಿ ಹೊಸ ಟ್ವಿಸ್ಟ್ ‘ಭಾಗ್ಯಲಕ್ಷ್ಮಿ’ ಧಾರಾವಾಹಿ ತುಂಬಾನೇ ಇಂಟರೆಸ್ಟಿಂಗ್ ಆಗಿ ಇರುವಾಗಲೇ ಟ್ವಿಸ್ಟ್ ಸಿಕ್ಕಿದೆ. ಕೀರ್ತಿ ಪಾತ್ರದಿಂದ ತನ್ವಿ ರಾವ್ ಹೊರ ನಡೆಯಲಿದ್ದು, ಬೇರೆ ನಟಿ ಈ ಜಾಗಕ್ಕೆ ಆಗಮಿಸಲಿದ್ದಾರೆ. ನಟಿ ತನ್ವಿ ರಾವ್ ಅವರು ಧಾರಾವಾಹಿ ಪ್ರಾರಂಭವಾದಾಗಿನಿಂದಲೂ ಉತ್ತಮವಾಗಿ ನಟಿಸಿದ್ದರು. ತಮ್ಮ ಪಾತ್ರಕ್ಕೆ ಕೊಂಚವೂ ಕೊರತೆಯಾಗದಂತೆ ನಡೆದುಕೊಂಡಿದ್ದರು. ಕೀರ್ತಿ ಅವರ ಪಾತ್ರವನ್ನು ಪ್ರೇಕ್ಷಕರು ಕೂಡ ಮೆಚ್ಚಿಕೊಂಡಿದ್ದಾರೆ.
ಆದರೆ, ಈಗ ಪಾತ್ರಧಾರಿ ಬದಲಾಗುತ್ತಿರುವುದನ್ನು ಕೇಳಿದ ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದಾರೆ. ತನ್ವಿ ರಾವ್ ಬಿಟ್ಟರೆ, ಈ ಪಾತ್ರಕ್ಕೆ ಬೇರೆ ಯಾರೂ ಸೂಟ್ ಆಗುವುದಿಲ್ಲ ಎಂದು ಹೇಳುತ್ತಿದ್ದಾರೆ. ಬಾಲಿವುಡ್ನಲ್ಲಿ ಮಿಂಚಿರುವ ನಟಿ ಇನ್ನು ಕೀರ್ತಿ ಪಾತ್ರದಲ್ಲಿರುವ ತನ್ವಿ ರಾವ್ ಈ ಹಿಂದೆ ‘ಆಕೃತಿ’ ಎಂಬ ಧಾರಾವಾಹಿಯಲ್ಲಿ ನಟಿಸಿದ್ದರು. ‘ರಾಧೆ ಶ್ಯಾಮ’ ಧಾರಾವಾಹಿಯಲ್ಲಿ ಕೂಡ ಕಾಣಿಸಿಕೊಂಡಿದ್ದರು. ಈ ಧಾರಾವಾಹಿ ಮುಗಿಯುತ್ತಿದ್ದಂತೆ ತಮಿಳಿನ ‘ಜಮೆಲ’ ಧಾರಾವಾಹಿಯಲ್ಲಿ ಮಿಂಚಿದ್ದಾರೆ.
ಕಿರುತೆರೆಗೆ ಬರುವ ಮುನ್ನ ತನ್ವಿ ರಾವ್ ಬಾಲಿವುಡ್ ಸಿನಿಮಾದಲ್ಲಿ ನಟಿಸಿದ್ದರು. ಮಾಧುರಿ ದೀಕ್ಷಿತ್ ನಟನೆಯ ‘ಗುಲಾಬ್ ಗ್ಯಾಂಗ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇನ್ನು ‘ರಂಗ್ ಬಿ ರಂಗ್’ ಚಿತ್ರಕ್ಕೆ ಬಣ್ಣ ಹಚ್ಚಿದರು. ಹಿಂದಿಯ ‘ಗುಲ್ಮೊಹರ್’ ಸಿನಿಮಾದಲ್ಲೂ ದೀಪಿಕಾ ಎಂಬ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಧಾರಾವಾಹಿ ಕೈ ಬಿಟ್ಟಿದ್ದು ಯಾಕೆ? ತನ್ವಿ ರಾವ್ ಭರತನಾಟ್ಯ ಕಲಾವಿದೆಯಾಗಿದ್ದು, ಕಥಕ್ ಹಾಗೂ ಸೆಮಿ ಕ್ಲಾಸಿಕಲ್ ನೃತ್ಯವನ್ನೂ ಅಭ್ಯಾಸ ಮಾಡಿದ್ದಾರೆ.
ಸದ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ ‘ಭಾಗ್ಯಲಕ್ಷ್ಮಿ’ ಧಾರಾವಾಹಿಯಲ್ಲಿ ಕೀರ್ತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತನ್ವಿ ರಾವ್ ಅವರ ಕೀರ್ತಿ ಪಾತ್ರ ವಿಭಿನ್ನವಾಗಿದ್ದು, ಅವರ ನಟನೆಯನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ತನ್ವಿ ರಾವ್ ಅವರಿಗೆ ಸಿನಿಮಾದಲ್ಲೋ ಅಥವಾ ಧಾರಾವಾಹಿಯಲ್ಲೋ ಇನ್ನೂ ಒಳ್ಳೆಯ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿರಬಹುದು ಎನ್ನಲಾಗುತ್ತಿದೆ. ಸದ್ಯ ಈಗ ಧಾರಾವಾಹಿಯಿಂದ ಹೊರ ನಡೆಯುತ್ತಿದ್ದು, ಮುಂದೆ ಕೀರ್ತಿ ಪಾತ್ರಕ್ಕೆ ಯಾವ ನಟಿ ಎಂಟ್ರಿಕೊಡಲಿದ್ದಾರೆ ಅನ್ನೋದು ಇನ್ನಷ್ಟೆ ಗೊತ್ತಾಗಬೇಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ