ಯಶಸ್ವಿನಿ ವ್ಯಾಪ್ತಿಗೆ ಪತ್ರಕರ್ತರ ಸೇರ್ಪಡೆಗೆ ಕ್ರಮ :ಕೆ.ಎನ್.ರಾಜಣ್ಣ

ತುಮಕೂರು

      ಯಶಸ್ವಿನಿ ಆರೋಗ್ಯ ವಿಮಾ ಯೋಜನೆ ವ್ಯಾಪ್ತಿಗೆ ಕಾರ್ಯನಿರತ ಪತ್ರಕರ್ತರನ್ನು ಸೇರ್ಪಡೆಗೊಳಿಸಲು ಕ್ರಮವಹಿಸಲಾಗುವುದು ಎಂದು ಸಹಕಾರ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಭರವಸೆ ನೀಡಿದರು.

     ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ., ಲೈಟ್ ಟಚ್ ಫೌಂಡೇಶನ್ ಧಾರವಾಡ ಮತ್ತು ಕಲಾಕೃತಿ ಸಂಸ್ಥೆ ತಿಪಟೂರು ಇವರ ಸಹಯೋಗದಲ್ಲಿ ಜಿಲ್ಲೆಯ ಕಾರ್ಯನಿರತ ಪತ್ರಕರ್ತರಿಗೆ ಸ್ವಯಂ ಉದ್ಯೋಗಮಾಹಿತಿ ಮತ್ತು ಪ್ರೇರಣಾ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿ, ಯಶಸ್ವಿನಿ ಸೇರ್ಪಡೆ ಕುರಿತು ಪತ್ರಕರ್ತರ ಸಂಘದವರು ಹಾಸನ ಮತ್ತು ತುಮಕೂರಿನಲ್ಲಿ ಇಟ್ಟಿರುವ ಬೇಡಿಕೆಯನ್ನು ಈಡೇರಿಸಲು ಶೀಘ್ರ ಸಭೆ ನಡೆಸಿ ತೀರ್ಮಾನಿಸಲಾಗುವುದು. ಸಂಘದ ರಾಜ್ಯಾಧ್ಯಕ್ಷರ ಕೋರಿಕೆಯಂತೆ ಕಾರ್ಯನಿರತ ಪತ್ರಕರ್ತರ ಸಂಘದ ಹೆಸರಿನಲ್ಲಿ ಸಹಕಾರ ಇಲಾಖೆಯಲ್ಲಿ ನೋಂದಣಿ ಮಾಡಿಸುತ್ತಿರುವುದು ತಡೆಗಟ್ಟಲು ಶೀಘ್ರ ಆದೇಶ ಹೊರಡಿಸಲಾಗುವುದು ಎಂದು ಸಚಿವರು ತಿಳಿಸಿದರು.

    ಹೊಟ್ಟೆಪಾಡಿನ ವೃತ್ತಿಯಾಗಬಾರದು: ಪತ್ರಿಕೋದ್ಯಮ ಹೊಟ್ಟೆಪಾಡಿನ ವೃತ್ತಿಯಾಗಬಾರದು. ಇದೊಂದು ರೀತಿಯ ಸಾಮಾಜಿಕ ಸೇವೆ. ಪತ್ರಕರ್ತರು ನಿರ್ಭೀತಿಯಿಂದ ವೃತ್ತಿ ಬದ್ಧತೆಯಿಂದ ಕಾರ್ಯನಿರ್ವಹಿಸಬೇಕಾದರೆ ಅವರ ಕೌಟಂಬಿಕ ಬದುಕು ನೆಮ್ಮದಿಯಿಂದ ಕೂಡಿರಬೇಕು. ಮನಸ್ಸು ತಿಳಿಯಿರಬೇಕು. ಕಾರ್ಯನಿರತ ಪತ್ರಕರ್ತರಿಗೆ ವೃತ್ತಿಯೊಟ್ಟಿಗೆ ಉದ್ಯಮಿಗಳಾಗಲು ಪ್ರೇರಣಾ ಕಾರ್ಯಗಾರವನ್ನು ಆಯೋಜಿಸಿರುವುದು ಒಳ್ಳೆಯ ಬೆಳವಣಿಗೆ. ಉದ್ಯಮಿಗಳಾಗಿ ಮುಂದೆ ಬರುವ ಪತ್ರಕರ್ತರಿಗೆ ಡಿಸಿಸಿ ಬ್ಯಾಂಕ್‌ನಿAದ ಅಗತ್ಯ ಸಾಲಸೌಲಭ್ಯವನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ವಿಶ್ವಾಸಾರ್ಹತೆ, ಮಾನವೀಯತೆ ಉಳಿಸಿಕೊಳ್ಳುವ ಅಗತ್ಯವಿದೆ

    ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ರಾಜ್ಯದ ಪತ್ರಕರ್ತರ ಆರೋಗ್ಯದ ಹಿತದೃಷ್ಟಿಯಿಂದ ಪತ್ರಕರ್ತರನ್ನು ಸರ್ಕಾರದ ಯಶಸ್ವಿನಿ ಯೋಜನೆಗೆ ಒಳಪಡಿಸಬೇಕು. 93 ವರ್ಷಗಳ ಇತಿಹಾಸದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಹೆಸರನ್ನು ದುರ್ಬಳಕೆ ಮಾಡಿಕೊಂಡು ಸಹಕಾರ ಇಲಾಖೆಯಲ್ಲಿ ಪ್ರತ್ಯೇಕ ಸಂಘ ನೋಂದಾವಣಿ ಮಾಡಿಸಿಕೊಳ್ಳುತ್ತಿರುವುದನ್ನು ಸಚಿವರು ಆದೇಶ ಹೊರಡಿಸಿ ನಿಷೇಧಿಸಬೇಕೆಂದು ಹೇಳಿ ಪತ್ರಕರ್ತರು ಸಾರ್ವಜನಿಕ ವಲಯದಲ್ಲಿ ವಿಶ್ವಾಸಾರ್ಹತೆ, ಮಾನವೀಯ ಸೇವಾ ಮನೋಭಾವ ಹೊಂದುವುದು ಅಗತ್ಯವಿದೆ ಎಂದರು.

    ಗ್ರಾಮೀಣ ಪತ್ರಕರ್ತರಿಗೆ ಬಸ್‌ಪಾಸ್ ಕೋರಿಕೆ:ಕೆಯುಡಬ್ಲೂö್ಯಜೆ ಜಿಲ್ಲಾ ಘಟಕದ ಅಧ್ಯಕ್ಷರಾದ ಚಿ.ನಿ.ಪುರುಷೋತ್ತಮ್ ಅವರು ಮಾತನಾಡಿ, ಸಚಿವರಾದ ಕೆ.ಎನ್. ರಾಜಣ್ಣ ಅವರು, ಅಧಿಕಾರದಲ್ಲಿರಲಿ ಬಿಡಲಿ ಜನಸಾಮಾನ್ಯರ ಪರವಾಗಿ ಕಾರ್ಯಮಾಡುತ್ತಿದ್ದು, ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ ಅಗತ್ಯ ಅನುದಾನ ನೀಡುವ ಜೊತೆಗೆ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡಬೇಕೆಂದು ಕೋರಿ, ಕಾರ್ಯನಿರತ ಪತ್ರಕರ್ತರ ಅನುಕೂಲಕ್ಕಾಗಿ ಈ ಸ್ವಯಂ ಉದ್ಯೋಗ ಅರಿವಿನ ಕಾರ್ಯಗಾರ ಆಯೋಜಿಸಲಾಗಿದೆ ಎಂದರು.

    ಪಾಲಿಕೆ ನೂತನ ಆಯುಕ್ತೆ ಬಿ.ವಿ.ಅಶ್ವಿಜ ಮುಖ್ಯ ಅತಿಥಿಯಾಗಿ ಮಾತನಾಡಿ ಮಹಾನಗರಪಾಲಿಕೆಯ ಆಯವ್ಯಯದಲ್ಲಿ ಮೀಸಲಿಟ್ಟಿರುವ ಅನುದಾನದಲ್ಲಿ ನಗರ ವ್ಯಾಪ್ತಿಯ ಕಾರ್ಯನಿರತ ಪತ್ರಕರ್ತರಿಗೆ ಹೆಲ್ತ್ ಇನ್ಶುರೆನ್ಸ್ ಮಾಡಿಕೊಟ್ಟರೆ ತುರ್ತು ಸಂದರ್ಭದಲ್ಲಿ ಸಹಾಯವಾಗುತ್ತದೆ ಎಂದರು.

    ಸಂಪನ್ಮೂಲ ವ್ಯಕ್ತಿ ಡಾ.ಸುರೇಶ್‌ಕಮ್ಮಾರ ಅವರು ಮಾತನಾಡಿ ಆಹಾರ, ಆರೋಗ್ಯ, ವಸ್ತç, ದೈನಂದಿನ ಬಳಕೆಯ ವಸ್ತುಗಳ ಉದ್ಯಮಗಳು ಸದಾ ಚಾಲ್ತಿಯಲ್ಲಿರುವ ಉದ್ಯಮಗಳೆನಿಸಿದ್ದು, ಮಾರುಕಟ್ಟೆ ತಂತ್ರಗಾರಿಕೆ, ಮೌಲ್ಯವರ್ದನೆ, ಸೂಕ್ತ ಯೋಜನೆ ಬೆಂಬಲದೊAದಿಗೆ ಉದ್ಯಮಿ ಸ್ಥಾಪಿಸಿದರೆ ಯಶಸ್ವಿಯಾಗಬಹುದು ಎಂದು ಸಲಹೆ ನೀಡಿದರು. ಕೃಷಿ ಇಲಾಖೆ ಪ್ರಭಾರ ಜಂಟಿ ನಿರ್ದೇಶಕÀ ಅಶೋಕ್, ಡಿಐಸಿ ಜಂಟಿ ನಿರ್ದೇಶಕ ಲಿಂಗರಾಜು ಅವರು ಇಲಾಖೆ ಯೋಜನೆಗಳ ಮಾಹಿತಿ ನೀಡಿದರು. ಜಯಣ್ಣ ಪ್ರಾರ್ಥಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಇ.ರಘುರಾಂ ಸ್ವಾಗತಿಸಿದರು. ರಾಷ್ಟಿçÃಯ ಮಂಡಳಿ ಸದಸ್ಯರಾದ ಶಾಂತರಾಜು, ಡಿ.ಎಂ.ಸತೀಶ್, ಉಪಾಧ್ಯಕ್ಷರಾದ ತಿಪಟೂರು ಕೃಷ್ಣ, ಎಲ್.ಚಿಕ್ಕೀರಪ್ಪ, ಕಾರ್ಯದರ್ಶಿಗಳಾದ ರಂಗಧಾಮಯ್ಯ, ಸತೀಶ್‌ಹಾರೋಗೆರೆ, ರಾಜ್ಯ ಸಮಿತಿ ಸದಸ್ಯ ಸಿದ್ಧಲಿಂಗಸ್ವಾಮಿ, ನಿರ್ದೇಶಕರುಗಳು, ಸದಸ್ಯರುಗಳು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap