ಚೆನ್ನೈ:
ತಮಿಳುನಾಡಿನ ಸಿಎಂ ಸ್ಟ್ಯಾಲಿನ್ ಪುತ್ರ ಉದಯನಿಧಿ ಸ್ಟ್ಯಾಲಿನ್ ಜನ್ಮ ದಿನಾಚರಣೆಯನ್ನು ಅದ್ಧೂರಿಯಾಗಿ ನಡೆಸಲಾಗುತ್ತಿದೆ. ಈ ನಡುವೆ ಪಕ್ಷದಲ್ಲಿ ಅವರಿಗೆ ಹೆಚ್ಚಿನ ಜವಾಬ್ದಾರಿ ನೀಡುವ ಬಗ್ಗೆ ಗಂಭೀರ ಚಿಂತನೆ ನಡೆದಿದೆ.
ಈಗಾಗಲೇ ತಂದೆಯ ಸಚಿವ ಸಂಪುಟದ ಭಾಗವಾಗಿರುವ ಉದಯನಿಧಿ ಸ್ಟ್ಯಾಲಿನ್, ಶೀಘ್ರವೇ ಉಪಮುಖ್ಯಮಂತ್ರಿ ಹುದ್ದೆಗೇರಲಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಉದಯನಿಧಿ ಸ್ಟ್ಯಾಲಿನ್ ಸಚಿವ ಸ್ಥಾನದ ಜೊತೆಗೆ ಡಿಎಂಕೆ ಯುವ ಘಟಕದ ಕಾರ್ಯದರ್ಶಿಯೂ ಆಗಿದ್ದಾರೆ.
ಪಕ್ಷದ ಎಲ್ಲಾ ಪ್ರಮುಖರೂ ಉದಯನಿಧಿ ಅವರ ನಾಯಕತ್ವವನ್ನು ಒಪ್ಪಿಕೊಂಡಿದ್ದಾರೆ. ಅವರನ್ನು ಶೀಘ್ರವೇ ಡಿಸಿಎಂ ಹುದ್ದೆಗೆ ನೇಮಕ ಮಾಡುವ ಬಗ್ಗೆ ಅಥವಾ ಅದೇ ಮಾದರಿಯ ಬೇರೆ ಪ್ರಮುಖ ಘೋಷಣೆಯನ್ನು ನಾವು ಎದುರುನೋಡುತ್ತಿದ್ದೇವೆ ಎಂದು ಡಿಎಂಕೆಯ ಪ್ರಮುಖ ಮುಖಂಡರೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.