ನವದೆಹಲಿ:
ಹಮಾಸ್ ನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸುವ ಕುರಿತು ಲೋಕಸಭೆಯ ಪ್ರಶ್ನೆಯ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿರುವ ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ, ಈ ಪ್ರಶ್ನೆ ಮತ್ತು ಉತ್ತರದೊಂದಿಗೆ ನಾನು ಯಾವುದೇ ಕಾಗದಕ್ಕೆ ಸಹಿ ಮಾಡದ ಕಾರಣ ನಿಮಗೆ ತಪ್ಪು ಮಾಹಿತಿ ನೀಡಲಾಗಿದೆ ಎಂದು ಹೇಳಿದ್ದಾರೆ.
“ಹಮಾಸ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಬೇಕು ಎಂದು ಕಾಂಗ್ರೆಸ್ ಸಂಸದ ಕುಂಬಕುಡಿ ಸುಧಾಕರನ್ ಪ್ರಶ್ನೆ ಕೇಳಿದ್ದಾರೆ. ಯಾವುದೇ ಸಂಘಟನೆಯನ್ನು ಭಯೋತ್ಪಾದಕ ಎಂದು ಘೋಷಿಸುವುದು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯ ವ್ಯಾಪ್ತಿಗೆ ಬರುತ್ತದೆ ಮತ್ತು ಕಾಯ್ದೆಯ ನಿಬಂಧನೆಗಳ ಪ್ರಕಾರ ಸಂಬಂಧಿತ ಸರ್ಕಾರಿ ಇಲಾಖೆಗಳಿಂದ ಪರಿಗಣಿಸಲಾಗುತ್ತದೆ ಎಂದು ಲೇಖಿ ಎಕ್ಸ್ ನಲ್ಲಿ ತಿಳಿಸಿದ್ದಾರೆ.
ಈ ಉತ್ತರ ಕುರಿತು ಎಕ್ಸ್ ನಲ್ಲಿ ಪ್ರತಿಕ್ರಿಯಿಸಿರುವ ಶಿವಸೇನಾ ರಾಜ್ಯಸಭಾ ಸದಸ್ಯೆ ಪ್ರಿಯಾಂಕಾ ಚತುರ್ವೇದಿ, (ಲೇಖಿ) ಇದು ನಕಲಿ ಪ್ರತಿಕ್ರಿಯೆ ಎಂದು ಹೇಳುತ್ತಿದ್ದಾರೆಯೇ, ಹೌದು ಎಂದಾದರೆ ಇದು ಗಂಭೀರ ಉಲ್ಲಂಘನೆ ಮತ್ತು ಚಾಲ್ತಿಯಲ್ಲಿರುವ ನಿಯಮಗಳ ಉಲ್ಲಂಘನೆಯಾಗಿದೆ. ವಿದೇಶಾಂಗ ಸಚಿವಾಲಯದ ಸ್ಪಷ್ಟೀಕರಣಕ್ಕಾಗಿ ಕೃತಜ್ಞರಾಗಿರುತ್ತೇನೆ ಎಂದಿದ್ದಾರೆ.
ಕಣ್ಣೂರು ಕ್ಷೇತ್ರದ ಸುಧಾಕರನ್, ಭಾರತದಲ್ಲಿ ಹಮಾಸ್ ನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸುವ ಯಾವುದೇ ಪ್ರಸ್ತಾವನೆಯನ್ನು ಸರ್ಕಾರ ಹೊಂದಿದೆಯೇ, ಹಾಗಿದ್ದರೆ, ಅದರ ವಿವರಗಳು ಮತ್ತು ಇಲ್ಲದಿದ್ದರೆ ಕಾರಣವೇನು ಎಂದು ಪ್ರಶ್ನೆ ಕೇಳಿದ್ದರು. ಹಮಾಸ್ ನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಲು ಇಸ್ರೇಲ್ ಸರ್ಕಾರ ಭಾರತ ಸರ್ಕಾರದೊಂದಿಗೆ ಯಾವುದೇ ಬೇಡಿಕೆ ಇಟ್ಟಿದ್ದಿಯೇ, ಹಾಗಿದ್ದಲ್ಲಿ, ಅದರ ವಿವರ ನೀಡಬೇಕೆಂದು ಕೋರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ