ಮಧುಗಿರಿ :
ನಮ್ಮ ಕಾಂಗ್ರೆಸ್ ನವರದ್ದೂ ಶ್ರೀರಾಮನ ದೇವಾಸ್ಥಾನ ಬಿಜೆಪಿಯವರದ್ದು ಶ್ರೀರಾಮನ ಮಂದಿರ ಅವರದ್ದೂ ಎಂದು ಸಹಕಾರಿ ಸಚಿವ ಕೆ.ಎನ್ ರಾಜಣ್ಣ ಬಿಜೆಪಿಯವರಿಗೆ ಕುಟುಕಿದರು.ತಾಲೂಕಿನ ಐಡಿ ಹೋಬಳಿಯ ಚಿಕ್ಕದಾಳವಟ್ಟ ಗ್ರಾಮದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯದಲ್ಲಿ ಕಾಂಗ್ರೆಸ್ ನ ಅಧಿಕೃತ ಅಭ್ಯರ್ಥಿ ಎಂ ಪಿ ಮುದ್ದಹನುಮೇಗೌಡರ ಜತೆ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ ನಂತರ ಮಾತನಾಡಿದ ಅವರು ,
ಬಿಜೆಪಿಯವರಿಗೂ ಮುನ್ನಾವೇ ನಾನು ದೊಡ್ಡೇರಿ ಹೋಬಳಿಯ ಕಿತ್ತಗಳಿ ಗ್ರಾಮದಲ್ಲಿ 2004 ರಲ್ಲಿ ಸುಮಾರು 25 ಲಕ್ಷ ರೂ ಗಳ ವೆಚ್ಚದಲ್ಲಿ ಶ್ರೀರಾಮನ ದೇವಾಲಯವನ್ನು ನಿರ್ಮಿಸಿದ್ದೇನೆ. ಶ್ರೀರಾಮನನ್ನು ಬಿಜೆಪಿಯವರಿಗೆ ಮಾತ್ರ ಜಾಗೀರೂ ಕೊಟ್ಟಿಲ್ಲಾ ಶ್ರೀರಾಮ ಎಲ್ಲಾರ ಸ್ವತ್ತು.
ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ನಾವು ಬರುವ ಲೋಕಸಭಾ ಚುನಾವಣೆಯಲ್ಲಿ 400 ಎಂ.ಪಿಗಳು ಆಯ್ಕೆಯಾದರೆ ದೇಶದ ಸಂವಿಧಾನವನ್ನು ಬದಲಾಯಿಸುತ್ತೆವೆಂದು ಹೇಳಿಕೆ ನೀಡಿರುವ ವ್ಯಕ್ತಿ ಮನುಷ್ಯನೇ ಅಲ್ಲಾ.
ಡಾ.ಬಿ.ಆರ್ ಅಂಬೇಡ್ಕರ್ ರಚಿಸಿರುವ ದೇಶದ ಸಂವಿಧಾನವನ್ನು ಬದಲಾವಣೆ ಮಾಡಲು ಹೊರಟರೆ ದೇಶದಲ್ಲಿಯೇ ಕ್ರಾಂತಿ ಯಾಗಲಿದೆ ದಲಿತರಿಗೆ ಇರುವಂತಹ ಸಂವಿಧಾನ ಬದ್ಧ ಹಕ್ಕುಗಳಿಗೆ ಚ್ಯುತಿ ಉಂಟಾಗ ಯಾಗಲಿದ್ದೂ ಎಲ್ಲಾ ವರ್ಗಗಳ ಬಡವರಿಗೂ ತೊಂದರೆಯಾಗಲಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ