ಉದ್ಯಮಿ ಆತ್ಮಹತ್ಯೆ : ನಕಲಿ ಜ್ಯೋತಿಷಿ ಬಂಧನ ….!

ರಾಮನಗರ:

     25 ವರ್ಷದ ಉದ್ಯಮಿಯೊಬ್ಬರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇರೆಗೆ ರಾಮನಗರ ಜಿಲ್ಲೆ ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 22 ವರ್ಷದ ನಕಲಿ ಜ್ಯೋತಿಷಿಯನ್ನು ಬಂಧಿಸಲಾಗಿದೆ. ಮದ್ದೂರು ತಾಲೂಕಿನ ಚಂದೂಪುರ ಗ್ರಾಮದ ನಿವಾಸಿ ಮುತ್ತುರಾಜು ಮೃತಪಟ್ಟವರು.

    ಅವರು ಮಾ.9 ರಂದು ಕನಕಪುರ ತಾಲೂಕಿನ ಟಿ ಬೇಕುಪ್ಪೆ ಸರ್ಕಲ್‌ನಲ್ಲಿ ಅರ್ಕಾವತಿ ನದಿಗೆ ಹಾರಿ ಸಾವನ್ನಪ್ಪಿದ್ದರು. ಕುಟುಂಬದವರಿಗೆ ಯಾರ ಮೇಲೆಯೂ ಅನುಮಾನ ಬಾರದ ಕಾರಣ ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು.

    ಆದರೆ, ಸಾವನ್ನಪ್ಪಿದ 10 ದಿನಗಳ ನಂತರ ಮೃತರ ಕುಟುಂಬಸ್ಥರು ಆತನ ಮೊಬೈಲ್ ಫೋನ್ ಪರಿಶೀಲಿಸಿದಾಗ ಬ್ಲ್ಯಾಕ್ ಮೇಲ್ ಮತ್ತು ಸುಲಿಗೆಯಿಂದ ಸಾವು ಸಂಭವಿಸಿರುವುದು ಕಂಡು ಬಂದಿದೆ. ಮುತ್ತುರಾಜು ಅವರ 23 ವರ್ಷದ ಪತ್ನಿ ವಿ ಶಿಲ್ಪಾ ನೀಡಿದ ದೂರಿನ ಆಧಾರದ ಮೇಲೆ ಪದವಿ ವ್ಯಾಸಂಗ ಮಾಡುತ್ತಿರುವ ವಿಷ್ಣು ಶಾಸ್ತ್ರಿ ಅವರನ್ನು ಆತ್ಮಹತ್ಯೆಗೆ ಪ್ರಚೋದನೆ (ಐಪಿಸಿ 306) ಆರೋಪದಡಿ ಬಂಧಿಸಲಾಗಿದೆ. 

   ವ್ಯಾಪಾರದಲ್ಲಿ ನಷ್ಟವಾದ ನಂತರ ಉದ್ಯಮಿ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಊಹಿಸಲಾಗಿತ್ತು. ಮೃತರ ಮೊಬೈಲ್ ಫೋನ್‌ನಲ್ಲಿ ಪತ್ತೆಯಾದ ವಾಯ್ಸ್ ನೋಟ್ ಆರೋಪಿಯ ಬಂಧನಕ್ಕೆ ಕಾರಣವಾಯಿತು. ಸಾಮಿಲ್ ನಡೆಸುತ್ತಿದ್ದ ಉದ್ಯಮಿ ದೊಡ್ಡ ಅವಲಹಳ್ಳಿ ಬಳಿ ಸಾಮಾಜಿಕ ಜಾಲತಾಣದಲ್ಲಿ ವಿವರ ತಿಳಿದು ಜ್ಯೋತಿಷಿಗಳ ಸಲಹೆ ಕೇಳಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

   ಮುತ್ತುರಾಜು ಅವರ ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡಿ, ಅವರ ಕುಟುಂಬದ ಎಲ್ಲಾ ಸದಸ್ಯರ ಫೋಟೋಗಳನ್ನು ಶಾಸ್ತ್ರಿ ಪಡೆದುಕೊಂಡಿದ್ದಾರೆ. ನಂತರ ಮುತ್ತುರಾಜ್ ಹಾಗೂ ಅವರ ಅತ್ತೆಯ ಫೋಟೋ ಎಡಿಟ್ ಮಾಡಿದ್ದು, ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಒಂದು ವೇಳೆ ಹಣ ಕೊಡದಿದ್ದಲ್ಲಿ ಅತ್ತೆಯೊಂದಿಗೆ ಮುತ್ತುರಾಜ್ ಅಕ್ರಮ ಸಂಬಂಧವಿದ್ದು, ತನ್ನ ಬಳಿ ಸಲಹೆ ಕೇಳಿದಂತೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾರೆ.

   ನಂತರ ಆರೋಪಿ ವಾಯ್ಸ್ ನೋಟ್ಸ್ ಮತ್ತು ವಾಟ್ಸಾಪ್ ಸಂದೇಶಗಳನ್ನು ಕಳುಹಿಸುವ ಮೂಲಕ ಮುತ್ತುರಾಜ್ ಅವರನ್ನು ಬ್ಲ್ಯಾಕ್‌ಮೇಲ್ ಮಾಡಲು ಪ್ರಾರಂಭಿಸಿದ್ದರು. ಇದರಿಂದಾಗಿ ಚಿತ್ರಹಿಂಸೆ ಸಹಿಸಲಾಗದ ಅವರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅಧಿಕಾರಿ ತಿಳಿಸಿದ್ದಾರೆ.

Recent Articles

spot_img

Related Stories

Share via
Copy link