ಬೆಂಗಳೂರು : ಬಿಸಿಲಿನ ಝಳಕ್ಕೆ ತಂಪೆರೆದ ವರುಣ….!

ಬೆಂಗಳೂರು:

    ರಾಜಧಾನಿ ಬೆಂಗಳೂರಿನ ಮೇಲೆ ಮುನಿಸಿಕೊಂಡಿದ್ದ ಮಳೆರಾಯ ಕೊನೆಗೂ ತನ್ನ ಮುನಿಸು ಬಿಟ್ಟು ಮಳೆಯಲಾರಂಭಿಸಿದ್ದು, ನಗರದ ಹಲವು ಪ್ರದೇಶಗಳಲ್ಲಿ ಇಂದು ತುಂತುರು ಮಳೆ ವರದಿಯಾಗಿದೆ.

    ಬಿರು ಬಿಸಿಲಿನ ಬೇಗೆಯಿಂದ ಕಂಗೆಟ್ಟಿದ್ದ ಸಿಲಿಕಾನ್​ ಸಿಟಿ ಬೆಂಗಳೂರಿಗರಿಗೆ ಕೊನೆಗೂ ವರಣದೇವನ ದರ್ಶನವಾಗಿದ್ದು, ನಗರದ ಹಲವು ಭಾಗಗಳಲ್ಲಿ ಇಂದು ಸಂಜೆ ತುಂತುರು ಮಳೆಯಾಗಿದೆ. 

    ನಗರದ ನಾಗರಬಾವಿ, ವಿಜಯನಗರ, ಮೈಸೂರು ರಸ್ತೆ, ನಾಯಂಡಹಳ್ಳಿ, ಗೊಟ್ಟಿಗೆರೆ, ಆರ್ ಟಿ ನಗರ, ಹೆಬ್ಬಾಳ, ಸಿವಿ ರಾಮನ್ ನಗರ, ರಾಜಾಜಿನಗರ, ಅನ್ನಪೂರ್ಣೇಶ್ವರಿ ನಗರ, ಜ್ಞಾನಭಾರತಿ, ವೈಟ್‌ಫೀಲ್ಡ್, ವರ್ತೂರು, ಸರ್ಜಾಪುರ ರಸ್ತೆ, ಮಾರತ್ತಹಳ್ಳಿ, ಬೆಳ್ಳಂದೂರು, ಬೊಮ್ಮನಹಳ್ಳಿ, ಬಿಟಿಎಂ ಲೇಔಟ್, ಕೋರಮಂಗಲ, ಜಯನಗರ, ಜೆಪಿ ನಗರ, ಎಚ್‌ಎಸ್‌ಆರ್ ಲೇಔಟ್, ಬನಶಂಕರಿ, ಉತ್ತರಹಳ್ಳಿ, ರಾಜರಾಜೇಶ್ವರಿ ನಗರ, HSR ಲೇಔಟ್ ಮತ್ತು ಕಗ್ಗದಾಸನಪುರದಲ್ಲಿ ಇಂದು ಸಂಜೆ ತುಂತುರು ಮಳೆಯಾಗುತ್ತಿದೆ.

    ಕೆಲವೆಡೆ ಮೋಡ ಕವಿದ ವಾತಾವರಣ ಹಿನ್ನಲೆ ನಗರದ ಕೆಲವೆಡೆ ಲಘು ಮಳೆಯಾಗಿದೆ. ಎರಡು ದಿನ ಕಾಲ ಬೆಂಗಳೂರಿನಲ್ಲಿ ಹಗುರ ಮಳೆ ಕುರಿತು ಹವಾಮಾನ ಇಲಾಖೆ‌ ಮೂನ್ಸುಚನೆ ನೀಡಿತ್ತು. ನಿನ್ನೆ ಕೂಡ ನಗರದ ಕೆಂಗೇರಿ, ಆರ್ ಆರ್ ನಗರದಲ್ಲಿ ಮಳೆಯಾಗಿತ್ತು. ಇವತ್ತು ಕೂಡ ನಗರದ ಹಲವೆಡೆ ಲಘು ಮಳೆಯಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link