ಸಿಗರೇಟ್‌ ಬ್ಯಾನ್‌ ಮಾಡಲು ಮುಂದಾಯ್ತು ಈ ದೇಶ….!

ಬೆಂಗಳೂರು: 

     ಸಿಗರೇಟ್ ಪ್ರಾಣ ಮಾತ್ರ ತೆಗೆಯಲ್ಲ, ಒಂದು ಕುಟಂಬವನ್ನೇ ಸರ್ವನಾಶ ಮಾಡುತ್ತದೆ. ಈ ಒಂದು ವಸ್ತು ಜಗತ್ತಿನಲ್ಲಿ ಪ್ರತಿವರ್ಷ ಹತ್ತಾರು ಲಕ್ಷ ಜನರ ಜೀವ ತೆಗೆಯುತ್ತದೆ. ಇದೀಗ ಇಲ್ಲೊಂದು ದೇಶ ಸಿಗರೇಟ್ ವಿರುದ್ಧ ಸಮರ ಸಾರಲು ಮುಂದಾಗಿದೆ.

    ಲಕ್ಷಾಂತರ ಜೀವಕ್ಕೆ ಅಪಾಯ ಮಾಡುವ ಸಿಗರೇಟ್‌ಗೆ ಗೇಟ್ ಪಾಸ್ ನೀಡಿ, ಬ್ಯಾನ್ ಮಾಡಲು ಚಿಂತನೆ ನಡೆಸಿದೆ. ಈ ಮೂಲಕ ಲಕ್ಷಾಂತರ ಜನರ ಜೀವ ಉಳಿಸುವ ಜೊತೆಗೆ ಸಮಾಜದ ಆರೋಗ್ಯ ಕಾಪಾಡಲು ಮುಂದಾಗಿದೆ. ಅಕಸ್ಮಾತ್ ಈ ದೇಶದಲ್ಲಿ ಸಿಗರೇಟ್ ಬ್ಯಾನ್ ಮಾಡಿದ್ದೇ ಆದರೆ ಇದು ಭವಿಷ್ಯಕ್ಕೂ ಹೊಸ ಕ್ರಾಂತಿಗೆ ಹಾದಿಯಾಗಲಿದೆ.

    ಹಾಗಾದರೆ ಯಾವುದು ಆ ದೇಶ? ಸಿಗರೇಟ್ ಬ್ಯಾನ್ ಆಗುವುದು ಯಾವಾಗ? ಮುಂದೆ ಓದಿ. ಕರ್ನಾಟಕ ಮತ್ತು ಕನ್ನಡಿಗರ ಹಿತ ಕಾಪಾಡುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲ: ಗೋವಿಂದ ಕಾರಜೋಳ ಬ್ರಿಟನ್ ಸಿಗರೇಟ್ ಬ್ಯಾನ್ ಮಾಡುತ್ತಾ? ಹೌದು, ಭಾರತ ಮೂಲದ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಇಡೀ ಜಗತ್ತೇ ಮೆಚ್ಚುವ ಕೆಲಸ ಮಾಡಲು ಈಗ ಮುಂದಾಗಿದ್ದಾರೆ.

    ಅದೇನೆಂದರೆ ಬ್ರಿಟನ್‌ನಲ್ಲಿ ಸಿಗರೇಟ್​ ಬ್ಯಾನ್ ಮಾಡುವ ಮೂಲಕ ಹೊಸ ಕ್ರಾಂತಿಗೆ ಮುನ್ನುಡಿ ಬರೆಯಲು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ 2009ರ ಜನವರಿ 1ರಂದು ಅಥವಾ ಈ ಡೇಟ್‌ನ ನಂತರ ಜನಿಸಿರುವವರಿಗೆ ತಂಬಾಕು ಮಾರಾಟ ಮಾಡುವುದನ್ನು ನಿಷೇಧಿಸಲು ಚಿಂತಿಸಿದ್ದಾರೆ ಎನ್ನಲಾಗಿದೆ. ಹಾಗೇ ಧೂಮಪಾನ ವಿರೋಧಿಯಾದ ಹಲವು ಕಠಿಣ ಕ್ರಮ ಜಾರಿಗೊಳಿಸಿ, ಬ್ರಿಟನ್ ಜನರ ಆರೋಗ್ಯ ರಕ್ಷಿಸಲು ಮುಂದಾಗಿದ್ದಾರೆ.

   ಬ್ರಿಟನ್ ಮಾಸ್ಟರ್ ಪ್ಲ್ಯಾನ್ ಏನು? ಈಗಿರುವ ಮಾಹಿತಿ ಪ್ರಕಾರ, ಸಿಗರೇಟ್ ಚಟವನ್ನು ತಕ್ಷಣಕ್ಕೆ ಬಿಡಲು ಆಗುವುದಿಲ್ಲ. ಇದೇ ಕಾರಣಕ್ಕೆ ಈಗ ಕ್ರಮ ಕೈಗೊಂಡರೆ, ಮುಂದಿನ ಪೀಳಿಗೆಗೆ ಸಿಗರೇಟ್ ಚಟ ಅಂಟುವುದನ್ನು ತಡೆಯಬಹುದು. ಹೀಗಾಗಿಯೇ ಭಾರತ ಮೂಲದ ಬ್ರಿಟನ್ ಪ್ರಧಾನಿ ಇಂತಹ ಕ್ರಮ ಜಾರಿಗೆ ತರಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಈ ಮೂಲಕ ಬ್ರಿಟನ್‌ನಲ್ಲಿ ಮುಂದಿನ ಪೀಳಿಗೆ ಸಿಗರೇಟ್ ಖರೀದಿಸುವುದನ್ನ ತಡೆಯಲು ಸಾಧ್ಯ.

   ಈ ಬಗ್ಗೆ ಬ್ರಿಟನ್ ಸರ್ಕಾರದ ಅಧಿಕಾರಿಗಳ ಮಾಹಿತಿ ಉಲ್ಲೇಖಿಸಿ ಪ್ರತಿಷ್ಠಿತ ಅಂತಾರಾಷ್ಟ್ರೀಯ ದಿನಪತ್ರಿಕೆ ದಿ ಗಾರ್ಡಿಯನ್ ವಿಶೇಷ ವರದಿ ಪ್ರಕಟಿಸಿದೆ. 2030ಕ್ಕೆ ಧೂಮಪಾನ ರಹಿತ ಸಮಾಜ? ಅಂದಹಾಗೆ ಇದೀಗ ರಿಷಿ ಸುನಕ್ ಅವರ ಸರ್ಕಾರ ಕೈಗೊಳ್ಳುತ್ತಿರುವ ಕ್ರಮವು ಮುಂಬರುವ ಬ್ರಿಟನ್ ಚುನಾವಣೆಗೆ ದೊಡ್ಡ ಪರಿಣಾಮ ಉಂಟುಮಾಡುವ ಸಾಧ್ಯತೆ ಇದೆ. ಹಾಗೇ ಇದರ ಜೊತೆಗೆ ಇನ್ನೂ ಹಲವು ಆರೋಗ್ಯ ಸಂಬಂಧಿ ಕ್ರಮ ಜರುಗಿಸುವ ಬಗ್ಗೆಯೂ ರಿಷಿ ಸರ್ಕಾರ ಚಿಂತಿಸುತ್ತಿದೆ.

    ಮತ್ತೊಂದು ಕಡೆ ಈಗಾಗಲೇ ನ್ಯೂಜಿಲ್ಯಾಂಡ್ ಜಾರಿಗೆ ತಂದಿರುವ ಸಿಗರೇಟ್ ವಿರೋಧಿ ಧೋರಣೆಯನ್ನೇ ಬ್ರಿಟನ್ ಕೂಡ ಪಾಲಿಸಲು ಮುಂದಾಗಿದೆ. ನ್ಯೂಜಿಲ್ಯಾಂಡ್‌ನ ಪ್ರಜೆಗಳು ಧೂಮಪಾನ ನಿಷೇಧ ಕಾನೂನು ಉಲ್ಲಂಘನೆ ಮಾಡಿದರೆ ಸುಮಾರು 95,910 ಅಮೆರಿಕನ್ ಡಾಲರ್, ಅಂದರೆ 79 ಲಕ್ಷ ರೂಪಾಯಿ ತನಕ ದಂಡ ವಿಧಿಸಲಾಗುತ್ತಿದೆ. 

     ಇದೇ ರೀತಿ ಇದೀಗ ಬ್ರಿಟನ್ ಕೂಡ ಕಠಿಣ ಕಾನೂನು ಜಾರಿಗೆ ತರಲು ತಯಾರಿ ನಡೆಸಿದೆ. ಹಾಗಾದರೆ ಇದು ಮುಂಬರುವ ಚುನಾವಣೆಯಲ್ಲಿ ರಿಷಿ ಸುನಕ್ ಅವರ ಪಕ್ಷಕ್ಕೂ ಉತ್ತಮ ಲಾಭ ನೀಡುವ ಜೊತೆಗೆ ಸಮಾಜಕ್ಕೂ ಉತ್ತಮ ಸಂದೇಶ ಸಿಗಲಿದೆ. ಹಾಗೇ ಇದು ಬ್ರಿಟನ್‌ನ ಮುಂದಿನ ಪೀಳಿಗೆಯನ್ನು ಆರೋಗ್ಯವಂತ ಸಮಾಜ ಮಾಡಲು ಸಹಾಯಕ. ಈ ಮಧ್ಯೆ ಹೊಸ ಕಾನೂನು ಜಾರಿಗೆ ಸಾಕಷ್ಟು ಅಡೆತಡೆ ಇದ್ದು, ಅದನ್ನೆಲ್ಲಾ ಎದುರಿಸಲು ರಿಷಿ ಸುನಕ್ ಸರ್ಕಾರ ಸಿದ್ಧತೆ ನಡೆಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap