ನಂದ್ಯಾಲ:
ನಟ ಅಲ್ಲು ಅರ್ಜುನ್ ಅವರು ನಂದ್ಯಾಲ ಹಾಲಿ ಶಾಸಕ ಹಾಗೂ ವೈಸಿಪಿ ಶಾಸಕಿ ಶಿಲ್ಪಾ ರವಿಚಂದ್ರ ಕಿಶೋರ್ ರೆಡ್ಡಿ ಮನೆಗೆ ಭೇಟಿ ನೀಡಿರುವುದು ಆಂಧ್ರ ಚುನಾವಣಾ ಪ್ರಚಾರಕ್ಕೆ ಮತ್ತಷ್ಟು ವೇಗ ತಂದಿದೆ. ಒಂದೆಡೆ ಮೈತ್ರಿಕೂಟದ ಪರವಾಗಿ ಪವನ್ ಕಲ್ಯಾಣ್ ಕಣಕ್ಕಿಳಿಯುತ್ತಿದ್ದು, ಇದೇ ವೇಳೆ ಅಲ್ಲು ಅರ್ಜುನ್ ಮತ್ತು ಶಿಲ್ಪಾ ಮೋಹನ್ ರೆಡ್ಡಿ ಕುಟುಂಬಸ್ಥರಿಗೆ ಶುಭಾಶಯ ಕೋರುತ್ತಿರುವುದು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.
ಮೆಗಾಸ್ಟಾರ್ ಚಿರಂಜೀವಿ ಕುಟುಂಬಕ್ಕೆ ಸೇರಿದ ನಟ ಅಲ್ಲು ಅರ್ಜುನ್ ಚುನಾವಣೆ ಹತ್ತಿರ ಬರುತ್ತಿದ್ದಂತೆ ಸೋದರ ಮಾವ ಪವನ್ ಕಲ್ಯಾಣ್ಗೆ ಶಾಕ್ ನೀಡಿದ್ದಾರೆ. ಆಂಧ್ರ ಪ್ರದೇಶ ಚುನಾವಣೆಯಲ್ಲಿ ಎದುರಾಳಿಯಾಗಿರುವ ವೈಎಸ್ಆರ್ಸಿಪಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡುವ ಮೂಲಕ ಮೆಗಾ ಕುಟುಂಬಕ್ಕೆ ಶಾಕ್ ಕೊಟ್ಟಿದ್ದಾರೆ.
ಚುನಾವಣಾ ಪ್ರಚಾರದ ಕೊನೆಯ ದಿನ ಒಂದೇ ಕುಟುಂಬದ ಇಬ್ಬರು ಸ್ಟಾರ್ ಹೀರೋಗಳು ಎರಡು ರಾಜಕೀಯ ಪಕ್ಷಗಳ ಅಭ್ಯರ್ಥಿಗಳನ್ನು ಭೇಟಿ ಮಾಡಲು ಹೊರಟಿರುವುದು ರಾಜಕೀಯ ಕೋಲಾಹಲಕ್ಕೆ ಕಾರಣವಾಗಿತ್ತು. ನಿನ್ನೆ ಅಲ್ಲು ಅರ್ಜುನ್ ಅವರು ಪವನ್ ಕಲ್ಯಾಣ್ ಜೊತೆ ಕಾಣಿಸಿಕೊಂಡಿದ್ದರು. ಇಂದು ವೈಸಿಪಿ ಶಾಸಕಿ ಶಿಲ್ಪಾ ರವಿಚಂದ್ರ ಜೊತೆ ಕಾಣಿಸಿಕೊಂಡಿದ್ದು ಈ ಎರಡು ಘಟನೆಗಳು ಆಂಧ್ರಪ್ರದೇಶ ಮತದಾರರನ್ನು ಗೊಂದಲಕ್ಕೀಡು ಮಾಡಿದಂತಿದೆ.
ಆದರೆ.. ನಂದ್ಯಾಲ್ ವೈಸಿಪಿ ಅಭ್ಯರ್ಥಿ ಶಿಲ್ಪಾ ರವಿಚಂದ್ರ ಕಿಶೋರ್ ರೆಡ್ಡಿ ಅವರ ಪತ್ನಿ ಹಾಗೂ ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ ಉತ್ತಮ ಸ್ನೇಹಿತರಾಗಿದ್ದು ಈ ಕಾರಣಕ್ಕಾಗಿಯೇ ಅಲ್ಲು ಅರ್ಜುನ್ ಅವರ ಮನೆಗೆ ಹೋಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ