ನವದೆಹಲಿ:
ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಅಮಾನತುಗೊಂಡಿರುವ ಪಶ್ಚಿಮ ಬಂಗಾಳ ಟಿಎಂಸಿ ನಾಯಕ ಶಹಜಹಾನ್ ಶೇಖ್, ಅವರ ಸಹೋದರ ಮತ್ತು ಇಬ್ಬರು ಸಹಚರರ ವಿರುದ್ಧ ಜಾರಿ ನಿರ್ದೇಶನಾಲಯ ಮೊದಲ ಚಾರ್ಜ್ ಶೀಟ್ ಸಲ್ಲಿಸಲಾಗಿದೆ ಎಂದು ಗುರುವಾರ ತಿಳಿಸಿದೆ.
ಪ್ರಾಸಿಕ್ಯೂಷನ್ ದೂರಿನಲ್ಲಿ ಹೆಸರಿಸಲಾದ ಇತರ ಆರೋಪಿಗಳೆಂದರೆ ಶಿಬ್ ಪ್ರಸಾದ್ ಹಜ್ರಾ ಮತ್ತು ದಿದರ್ ಬೋಕ್ಷ್ ಮೊಲ್ಲಾ ಹಾಗೂ ಶೇಖ್ ಅಲಂಗೀರ್ .ಕೋಲ್ಕತ್ತಾದ ವಿಶೇಷ ಪ್ರಿವೆನ್ಶನ್ ಆಫ್ ಮನಿ ಲಾಂಡರಿಂಗ್ ಆಕ್ಟ್ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ ಎಂದು ಇಡಿ ತಿಳಿಸಿದೆ.
ಮೀನುಗಾರಿಕೆ ವ್ಯವಹಾರದ ನೆಪದಲ್ಲಿ ಅಕ್ರಮ ಹಣ ವರ್ಗಾವಣೆ, ಭೂ ಕಬಳಿಕೆ, ಅಕ್ರಮ ಮೀನು ಸಾಕಾಣಿಕೆ/ವ್ಯಾಪಾರ, ಇಟ್ಟಿಗೆ ಗದ್ದೆಗಳನ್ನು ಕಬಳಿಸುವುದು ಸೇರಿದಂತೆ ಹಲವು ಆರೋಪಗಳನ್ನು ಶಹಜಹಾನ್ ಶೇಖ್ ಎದುರಿಸುತ್ತಿದ್ದಾರೆ.ಈ ಪ್ರಕರಣದಲ್ಲಿ ಅಮಾನತುಗೊಂಡಿರುವ ಟಿಎಂಸಿ ನಾಯಕ, ಅವರ ಸಹೋದರ ಮತ್ತು ಅವರ ಇಬ್ಬರು ಸಹಾಯಕರನ್ನು ಇಡಿ ಬಂಧಿಸಿದ್ದು, ಪ್ರಸ್ತುತ ಶಹಜಹಾನ್ ಶೇಖ್ ನ್ಯಾಯಾಂಗ ಬಂಧನದಲ್ಲಿದ್ದಾರೆ.