ಬೆಂಗಳೂರು
ಅಗ್ಗದ ದರದಲ್ಲಿ ಜೀವ ಇಂಟರ್‌ನೆಟ್ ಸೇವೆ ಆರಂಭಿಸಿದ್ದ ಜಿಯೋ ಕಂಪನಿಯು ತನ್ನ ಸೇವೆಯಲ್ಲಿ ದಕ್ಷತೆ ಕಳೆದುಕೊಂಡಿದ್ದರ ಕುರಿತು ಮಾತುಗಳು, ಟೀಕೆಗಳು ಗ್ರಾಹಕರಿಂದ ಕೇಳಿ ಬರುತ್ತಿವೆ. ಕೋಟ್ಯಂತರ ಜಿಯೋ ಗ್ರಾಹಕರು ಜಿಯೋ ಇಂಟರ್‌ನೆಟ್ ಸೇವೆಯಲ್ಲಿ ಭಾರೀ ಅಡೆತಡೆ ಎದುರಿಸುತ್ತಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣ ಬಳಕೆಗೆ, ಅಪ್ಲೋಡ್, ಡೌನ್‌ಲೋಡ್ ವೇಳೆ ಸಾಕಷ್ಟು ಸಮಸ್ಯೆ ಎದುರಿಸುವಂತಾಗಿದೆ. ಕಾರಣ ಜೀಯೋ ಇಂಟರ್‌ನೆಟ್ ಸೇವೆ ಸ್ಲೋಡೌನ್ ಆಗಿದೆ. ಮೊದಲಿನಂತ ಪರಿಣಾಮಕಾರಿ ಸೇವೆ ನೀಡುವಲ್ಲಿ ಜಿಯೋ ಕಂಪನಿ ವಿಫಲವಾಯಿತಾ? ಎಂಬ ಪ್ರಶ್ನೆ ಕಾಡುತ್ತಿದೆ.
ಇಂದು ಮಾತ್ರವಲ್ಲ ಕಳೆದ 3 ತಿಂಗಳಿಂದಲೇ ಜಿಯೋ ನೆಟ್‌ವರ್ಕ್ ತುಂಬಾ ನಿಧಾನವಾಗಿದೆ. ಅನೇಕ ಭಾರಿ ಕರೆ ಮಾಡಲು ಸಹ ಸಾಧ್ಯವಿಲ್ಲದಾಗಿದೆ. ದಯವಿಟ್ಟು ಉತ್ತಮ ಸೇವೆಯನ್ನು ನೀಡಿ. ಕಳೆದ 3 ತಿಂಗಳಲ್ಲಿ ನಿಮ್ಮ ಗ್ರಾಹಕ ಸೇವೆ ತುಂಬಾ ಕೆಟ್ಟದಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ.
ಇದು ದೇಶದ ಯಾವುದೇ ಒಂದು ರಾಜ್ಯದ ಸಮಸ್ಯೆಯಲ್ಲ ಅನೇಕ ಕಡೆಗೆ ಇದೇ ರೀತಿ ಕಳಪೆ ಇಂಟರ್‌ನೆಟ್ ಸೇವೆ ಲಭ್ಯವಾಗುತ್ತಿದೆ. ಇನ್ನೂ ಕರ್ನಾಟಕದ ಅನೇಕ ಜಿಲ್ಲೆಗಳು, ಹಳ್ಳಿಗಳಲ್ಲಿ ಜಿಯೋ ಇಂಟರ್‌ನೆಟ್ ಕಳಪೆ ಸೇವೆ ಇದೆ ಎಂದು ಗ್ರಾಹಕರು ದೂರಿದ್ದಾರೆ.
ಈ ಕುರಿತು ಬೆಂಗಳೂರಿನಂತಹ ನಗರದ ಪ್ರದೇಶಗಳಿಂದ ಕರೆ ಮಾಡಿ ಕಳಪೆ ಸೇವೆ ಬಗ್ಗೆ ಪ್ರಶ್ನಿಸಿದರೆ, ಜಿಯೋ ಗ್ರಾಹಕರ ಸಂಖ್ಯೆ ಹೆಚ್ಚುತ್ತಿರುವ ಕಾರಣ ಹೀಗೆ ಆಗುತ್ತಿದೆ ಎಂದು ಕಾಲ್ ಸೆಂಟರ್ ಸಿಬ್ಬಂದಿ ಹೇಳುತ್ತಿದ್ದಾರೆ. ಗ್ರಾಹಕರು ಹೆಚ್ಚಾದರೆ ಇಂಟರ್‌ನೆಟ್ ಮೂಲಸೌಲಭ್ಯ, ಎಂಟೆನ್, ನೆಟ್‌ವರ್ಕ್ ಜಾಲ ಹೆಚ್ಚಿಸುವ ಸಾಮಾನ್ಯ ಪ್ರಶ್ನೆಯನ್ನು ಜಿಯೋ ಕಂಪನಿ ಮರೆತಂದಿದೆ.
ಇನ್ನೂ ಕರ್ನಾಟಕದ ಹಾವೇರಿ ಜಿಲ್ಲೆಯ ಹೊಸರಿತ್ತಿ ಗ್ರಾಮದಲ್ಲಿ ಕಳೆದ 08-10 ತಿಂಗಳುಗಳಿಂದ ಇಂಟರ್‌ನೆಟ್ ಸೇವೆ ಇದ್ದು ಇಲ್ಲದಂತಹ ಸ್ಥಿತಿ ಇದೆ. ಆನ್‌ಹಣ ಪಾವತಿಗೆ, ವಾಟ್ಸಾಪ್ ಫೋಟೋ ಶೇರ್ ಮಾಡಲು ಪರದಾಡುವ ಸ್ಥಿತಿ ಇದೆ. ಇಲ್ಲಿ ಟಾವರ್ ಕಂಬ ನಿಲ್ಲಿಸಿದ್ದ ಜಾಗದ ಬಾಡಿಗೆ ವಿಚಾರದಲ್ಲಿ ಹೊಂದಾಣಿಕೆ ಆಗಿಲ್ಲ. ಹೀಗಾಗಿ ಎರಡು ಟಾವರ್ ಪೈಕಿ ಒಂದೇ ಟಾವರ್ ನಿಂದ ಸೇವೆ ಸಿಗುತ್ತಿದೆ. ಹೀಗಾಗಿ ಈ ಗ್ರಾಮದಲ್ಲಿ ಜಿಯೋ 2G ರೀತಿಯ ಸೇವೆ ಗ್ರಾಹಕರು ಬಳಸುತ್ತಿದ್ದಾರೆ.
ಹಂತ ಹಂತವಾಗಿ ಜಿಯೋ ಪ್ಯಾಕೇಜ್ ಏರಿಸಲಾಗಿದೆ. ಒಂದು ನಿಮಿಷ ಹೆಚ್ಚಾದರೂ ಪ್ಯಾಕೇಜ್ ಅವಧಿ ಮುಕ್ತಾಯಗೊಳ್ಳುತ್ತಿದೆ. ಅಷ್ಟರ ಮಟ್ಟಿನ ಕಾರ್ಯನಿರ್ವಹಿಸುವ ಜಿಯೋ ಗ್ರಾಹಕರ ವಿಚಾರದಲ್ಲಿ ಏಕೆ ಇಷ್ಟೊಂದು ವಿಳಂಬ ಧೋರಣೆ ತಾಳುತ್ತಿದೆ ಎಂದು ಗ್ರಾಮದ ಗ್ರಾಹಕರು ಪ್ರಶ್ನಿಸುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ