ನವದೆಹಲಿ:
ಸೆ.18 ರಂದು ನಡೆಯಲಿರುವ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕೆಲವು ಅತ್ಯಂತ ಮಹತ್ವದ ನಿರ್ಣಯಗಳು ಮತ್ತು ಸುಗ್ರೀವಾಜ್ಞೆಗಳ ಕುರಿತು ಚರ್ಚೆಯಾಗುವ ನಿರೀಕ್ಷೆ ಇದೆ ಎಂದು ವರದಿಯಾಗೊದೆ .
ಇ-ಸಿಗರೇಟ್ ಆಮದು, ಉತ್ಪಾದನೆ, ವಿತರಣೆ ಮತ್ತು ಮಾರಾಟದ ಮೇಲೆ ನಿಷೇಧ ವಿಧಿಸಲು ಕೇಂದ್ರ ಚಿಂತನೆ ನಡೆಸಿದೆ ಎಂದು ರಾಷ್ಟ್ರೀಯ ಮಾಧ್ಯಮದ ವರದಿಯಿಂದ ತಿಳಿದುಬಂದಿದೆ. ಧೂಮಪಾನದ ಚಟ ಬಿಡುವುದಕ್ಕೆ ಸಹಕಾರಿ ಎಂದು ಹೇಳಲಾಗುವ ಇ-ಸಿಗರೇಟ್ ಗಳನ್ನು ವಿಶ್ವಾದ್ಯಂತ ಅಪಾಯವಿಲ್ಲದ ಸರಕೆಂದು ಪರಿಗಣಿಸಿ ಮಾರಾಟ ಮಾಡಲಾಗುತ್ತಿದೆ.ಆದರೆ ತಜ್ಞರ ಹೇಳಿಕೆಯ ಪ್ರಕಾರ ಇ-ಸಿಗರೇಟ್ ಗಳೂ ಆರೋಗ್ಯಕ್ಕೆ ಹಾನಿಕಾರಕವೇ ಆಗಿದೆ. ಈ ಹಿನ್ನೆಲೆಯಲ್ಲಿ ಇ-ಸಿಗರೇಟ್ ಗಳ ನಿಷೇಧಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಹೇಳಲಾಗಿದೆ.
