ಬೆಂಗಳೂರು : ಬೆಳಕಿಗೆ ಬರ್ತಿದೆ ಹೊಸ ದಂಧೆ : ಈ ದಂಧೆಗೆ ನೀವು ಬಲಿಯಾಗದಿರಿ

ಬೆಂಗಳೂರು: 

    ರಾಜಸ್ಥಾನ ಮತ್ತು ಗುಜರಾತ್‌ನಿಂದ ಸಾವಿರಾರು ಕೇಜಿ ಕುರಿ ಮಾಂಸವನ್ನು ಥರ್ಮಾಕೋಲ್ ಬಾಕ್ಸ್‌ನಲ್ಲಿ ತುಂಬಿ ರೈಲಿನಲ್ಲಿ ಬೆಂಗಳೂರಿಗೆ ಕಳುಹಿಸುತ್ತಿದ್ದಾರೆ. ಅಲ್ಲಿಂದ ನಗರಕ್ಕೆ ತಲುಪಲು ನಾಲ್ಕೈದು ದಿನಗಳೇ ಬೇಕಾಗುತ್ತದೆ. ಕೇವಲ ಥರ್ಮಾಕೋಲ್‌ನಲ್ಲಿ ಐಸ್ ಗಡ್ಡೆಯೊಂದಿಗೆ ಮಾಂಸ ತುಂಬಿ ಕಳುಹಿಸುತ್ತಿದ್ದು, ಹಾಳಾಗಿರುವ ಸಾಧ್ಯತೆಗಳಿವೆ.

    ಯಾವುದೇ ಸುರಕ್ಷಿತ ಕ್ರಮಗಳನ್ನು ಕೈಗೊಂಡಿಲ್ಲ. ರೈಲಿನಲ್ಲಿ ಬರುವ ಥರ್ಮಾಕೋಲ್ ಬಾಕ್ಸ್‌ಗಳನ್ನು ಶಿವಾಜಿನಗರಕ್ಕೆ ಗೂಡ್ಸ್ ವಾಹನಗಳಲ್ಲಿ ತೆಗೆದುಕೊಂಡು ಗೋದಾಮಿನಲ್ಲಿ ಇರಿಸುತ್ತಾರೆ. ಅಲ್ಲಿ ಬಾಕ್ಸ್ ತೆಗೆದು ಕೆಮಿಕಲ್‌ನಲ್ಲಿ ಕುರಿ ಮಾಂಸವನ್ನು ತೊಳೆದು ಮತ್ತೆ ಹೊಸದಾಗಿ ಪ್ಯಾಕ್ ಮಾಡಿ ಸ್ಟಾರ್ ಹೋಟೆಲ್, ಕ್ಯಾಟರಿಂಗ್ ಸರ್ವಿಸ್‌ಗಳಿಗೆ ಮಾಂಸ ಮಾರಾಟ ಮಾಡುತ್ತಿದ್ದಾರೆ.

    ಇದರಿಂದ ಜನರ ಅರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಕೂಡಲೇ ಹೊರರಾಜ್ಯದಿಂದ ಯಾವುದೇ ಮಾರ್ಗಸೂಚಿ ಪಾಲನೆ ಮಾಡದೆ ಮಾಂಸ ಪಾರ್ಸೆಲ್ ಪಡೆಯುತ್ತಿರುವ ದಂಧೆಗೆ ನಿರ್ಬಂಧಿಸಬೇಕು. ಇದರಲ್ಲಿ ತೊಡಗಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಶಶಿಕುಮಾರ್, ದೂರಿನಲ್ಲಿ ಉಲ್ಲೇಖಿಸಿದ್ದಾರೆ.

   ಥರ್ಮಾಕೋಲ್ ಬಾಕ್ಸ್‌ನಲ್ಲಿ ಬಂದಿರುವ ಕುರಿ ಮಾಂಸದ ಮೇಲೆ ಅನುಮಾನ ವ್ಯಕ್ತವಾಗುತ್ತಿದೆ. ನಾಯಿ ಬಾಲದಂತೆ ಕಾಣುತ್ತಿದ್ದು, ಕುರಿಯ ಬಾಲ ಅಷ್ಟು ಉದ್ದ ಇರುವುದಿಲ್ಲ. ಈ ಬಗ್ಗೆಯೂ ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ಕ್ರಮ ಕೈಗೊಳ್ಳಬೇಕು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link