ತುಮಕೂರು:
ಹೇಮಾವತಿ ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆಯಾಗುತ್ತಿದ್ದು ಗೊರೂರಿನ ಹೇಮಾವತಿ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದ್ದು. ಆದ ಕಾರಣ
ತುಮಕೂರು ಜಿಲ್ಲೆಯ ಕೆರೆಗಳಿಗೆ ನೀರು ಹರಿಸಿ ಎಂದು ಇಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವರು ಕರ್ನಾಟಕ ಸರ್ಕಾರದ ಸಹಕಾರ ಸಚಿವರಾದ ಕೆ ಎನ್ ರಾಜಣ್ಣ ರವರನ್ನು ಅವರ ತುಮಕೂರು ನಿವಾಸದಲ್ಲಿ ಕೆ ಎಸ್ ಆರ್ ಟಿ ಸಿ ಅಧ್ಯಕ್ಷ ಹಾಗೂ ಗುಬ್ಬಿ ಕ್ಷೇತ್ರದ ಶಾಸಕ ಎಸ್ ಆರ್ ಶ್ರೀನಿವಾಸ್ ಭೇಟಿಯಾಗಿ ಮನವಿ ಮಾಡಿದರು. ರಾಜಣ್ಣ ನವರು ಇದಕ್ಕೆ ಸ್ಪಂದಿಸಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಹೇಮಾವತಿ ಜಲಾಶಯದಿಂದ ನೀರು ಬಿಡುವಂತೆ ಆದೇಶಿಸಿದರಾದರು.
ಬಾಗುರು ನವಿಲೇ ಸುರಂಗದ ಬಳಿ ಹಲವು ಕಾಮಗಾರಿಗಳು ನೆಡೆಯುತ್ತಿದ್ದು ಇನ್ನು 4 ರಿಂದ 5 ದಿನಗಳಲ್ಲಿ ನೀರು ಬಿಡುತ್ತೇವೆಂದರು.ಈಗಾಗಲೇ ತುಮಕುರು ಜಿಲ್ಲೆಯ ಹಲವು ಕೆರೆಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು ಮುಂದಿನ ವಾರದಲ್ಲಿ ನೀರು ಹರಿಸಿದಲ್ಲಿ ಕುಡಿಯುವ ನೀರಿನ ಕೆರೆಗಳಿಗೆ ಅನುಕೂಲವಾಗುತ್ತದೆ ಎನ್ನುತ್ತಾರೆ ಸ್ಥಳೀಯರು.
ಕಳೆದ ಸೋಮವಾರ ಗುಬ್ಬಿಯ ಬಿ ಜೆ ಪಿ ಮುಖಂಡ ಎಸ್ ಡಿ ದಿಲೀಪ್ ಕುಮಾರ್ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನೆಡೆಸಿ ತುಮಕೂರು ಬಾಗದ ನಾಲೆಗೆ ನೀರು ಹರಿಸಲು ಜಿಲ್ಲೆಯ ಮಂತ್ರಿಗಳಿಗೆ ಶಾಸಕರುಗಳಿಗೆ ಮನವಿ ಮಾಡಿಕೊಂಡಿದ್ದರು.
ಎಸ್ ಆರ್ ಶ್ರೀನಿವಾಸ್ ಮನವಿ ಮಾಡಿದ ಸಂದರ್ಭದಲ್ಲಿ ಪ್ರಜಾಪ್ರಗತಿ ದಿನಪತ್ರಿಕೆಯ ಸಂಪಾದಕ ಎಸ್ ನಾಗಣ್ಣ ಉಪಸ್ಥಿತರಿದ್ದರು.