ಜೈಪುರ:
ರಾಜಸ್ಥಾನದಲ್ಲಿ ಇನ್ನು ಮುಂದೆ ಹಸುಗಳಿಗೆ ‘ಬಿಡಾಡಿ ದನ’ ಎಂಬ ಪದವನ್ನು ಬಳಸುವಂತಿಲ್ಲ ಎಂದು ಪಶುಸಂಗೋಪನೆ ಮತ್ತು ಡೈರಿ ಸಚಿವ ಜೋರಾರಾಮ್ ಕುಮಾವತ್ ಅವರು ಹೇಳಿದ್ದಾರೆ.
ರಾಜಸ್ಥಾನ ವಿಧಾನಸಭೆಯಲ್ಲಿ ಬುಧವಾರ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ಅನುದಾನದ ಬೇಡಿಕೆಯ ಮೇಲಿನ ಚರ್ಚೆಗೆ ಉತ್ತರಿಸಿದ ಕುಮಾವತ್ ಅವರು, ಇನ್ನು ಮುಂದೆ ಬಿಡಾಡಿ ದನಗಳಿಗೆ ‘ನಿರಾಶ್ರಿತ್’ (ನಿರ್ಗತಿಕ) ಪದವನ್ನು ಬಳಸಲಾಗುವುದು ಎಂದು ಹೇಳಿದರು.
ಇದೇ ವೇಳೆ ಮೌಲ್ಯಯುತ ಪಶು ಸಂಪತ್ತನ್ನು ಅಭಿವೃದ್ಧಿಪಡಿಸಿ ಜಾನುವಾರುಗಳ ಉತ್ಪಾದನೆ ಹೆಚ್ಚಿಸುವ ಮೂಲಕ ಪಶುಪಾಲಕರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಲು ರಾಜ್ಯ ಸರ್ಕಾರ ಬದ್ಧವಾಗಿದೆ. ಗೋವು ಮತ್ತು ಗೂಳಿಗಳ ರಕ್ಷಣೆ ಹಾಗೂ ಪ್ರಚಾರಕ್ಕಾಗಿ ಸರ್ಕಾರ ಸೂಕ್ಷ್ಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಚಿವರು ಹೇಳಿದರು. ಚರ್ಚೆಯ ನಂತರ ವಿಧಾನಸಭೆಯು ಧ್ವನಿ ಮತದ ಮೂಲಕ ಇಲಾಖೆಯ ಅನುದಾನ ಬೇಡಿಕೆಗಳನ್ನು ಅಂಗೀಕರಿಸಿತು.