ಮುಂಜಾಗ್ರತಾ ಕ್ರಮವಾಗಿ ಚಾರ್ಮಡಿ ಘಾಟ್‌ ಚೆಕ್‌ ಪೋಸ್ಟ್‌ ಬಳಿ ಒಂದು ಡಿಆರ್‌ ವ್ಯಾನ್‌

ಚಿಕ್ಕಮಗಳೂರು:

    ಉತ್ತರ ಕನ್ನಡದ ಶಿರೂರು ಕೇರಳದ ವಯನಾಡು ಪ್ರಕರಣ ಬೆನ್ನಲ್ಲೇ ಕಾಫಿನಾಡಿನ ಜಿಲ್ಲಾಡಳಿತ ಹೈ ಅಲರ್ಟ್ ಆಗಿದೆ. ಚಾರ್ಮಾಡಿ ಘಾಟ್  ಆರಂಭದ ಸ್ಥಳವಾದ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಚೆಕ್ ಪೋಸ್ಟ್  ಬಳಿ ಡಿಆರ್‌ ತುಡಿಯನ್ನು ನಿಯೋಜಿಸಿದೆ.

    ನಿರಂತರ ಧಾರಾಕಾರ ಮಳೆಯಿಂದ ಚಿಕ್ಕಮಗಳೂರು-ಮಂಗಳೂರಿಗೆ  ಸಂಪರ್ಕ ಕಲ್ಪಿಸುವ ಬೆಟ್ಟಗುಡ್ಡಗಳ ಮಾರ್ಗ ರಾಷ್ಟ್ರೀಯ ಹೆದ್ದಾರಿ 173 ರಲ್ಲಿ ಯಾವ ಕ್ಷಣದಲ್ಲಿ ಬೇಕಾದರೂ ಯಾವುದೇ ರೀತಿಯ ಅನಾಹುತ ಸಂಭವಿಸುವ ಸಾಧ್ಯತೆ ಇರುವುರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತ ಈ ನಿರ್ಧಾರ ಕೈಗೊಂಡಿದೆ. 

    ಡಿಆರ್ ವ್ಯಾನ್‌ನಲ್ಲಿ ಯಾವಾಗಲೂ ಓರ್ವ ಅಧಿಕಾರಿ ಸೇರಿ 7-8 ಸಿಬ್ಬಂದಿ ಇರುತ್ತಾರೆ. ಒಂದು ವೇಳೆ ಭಾರೀ ಮಳೆಯಿಂದ ಚಾರ್ಮಾಡಿ ಘಾಟಿಯಲ್ಲಿ ಏನಾದರೂ ಅನಾಹುತ ಸಂಭವಿಸದರೆ ತಕ್ಷಣ ಅಲ್ಲಿನವರ ಸಹಾಯಕ್ಕೆ ಪೊಲೀಸರು ಅಲರ್ಟ್ ಅಗಲಿದ್ದಾರೆ. ಈ ಕಾರಣಕ್ಕೆ ಕೊಟ್ಟಿಗೆಹಾರದಲ್ಲೇ ಒಂದು ವ್ಯಾನ್ ನಿಯೋಜಿಸಿದ್ದಾರೆ.

   ಕೇರಳದ ವಯನಾಡು ದುರಂತದ ಬಳಿಕ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಆತಂಕ ಮನೆಮಾಡಿದೆ. ಶಿರಾಡಿಘಾಟ್ ರಸ್ತೆಯ ಸಂಚಾರ ಕೂಡ ಡೋಲಾಯಮಾನವಾಗಿರುವ ಹಿನ್ನಲೆ ಚಾರ್ಮಾಟಿ ಘಾಟಿಯಲ್ಲಿ ಚಾಲಕರು ಭಯದಿಂದಲೇ ವಾಹನ ಚಲಾಯಿಸುವಂತಾಗಿದೆ. ಚಾರ್ಮಾಡಿ ಘಾಟಿಯಲ್ಲಿ 2019ರಲ್ಲಿ ಭಾರೀ ಭೂ ಕುಸಿತದಿಂದ 6 ತಿಂಗಳು ಬಂದ್ ಆಗಿತ್ತು. ಈ ವರ್ಷ ಸುರಿಯುತ್ತಿರುವ ಭಾರೀ ಮಳೆಗೆ ಮರಗಳು, ಗುಡ್ಡಗಳಲ್ಲಿ ಭೂ ಕುಸಿತ ಕೂಡ ಉಂಟಾಗುತ್ತಿದೆ. 2019ರಲ್ಲಿ ಭೂಕುಸಿತದ ಜಾಗದಲ್ಲಿ ಆಗಿದ್ದ ದುರಸ್ಥಿ ಕಾಮಗಾರಿ ಕೂಡ ಬಿರುಕು ಬಿಟ್ಟಿದೆ.

Recent Articles

spot_img

Related Stories

Share via
Copy link