ತುಮಕೂರು ; 19 ನೌಕರರಿಗೆ ಸೋಂಕು ; ಬಿಕೋ ಎನ್ನುತ್ತಿರುವ ಸರಕಾರಿ ಕಚೇರಿಗಳು

ತುಮಕೂರು :

      ಜಿಲ್ಲೆಯಲ್ಲಿ ಕೋವಿಡ್ ಸೋಂಕು ವ್ಯಾಪಕವಾಗಿ ಹಬ್ಬುತ್ತಿದ್ದು, ತುಮಕೂರು ತಾಲೂಕು ತಹಸೀಲ್ದಾರ್ ಮೋಹನ್‍ಕುಮಾರ್, ಗ್ರೇಡ್ 2 ತಹಸೀಲ್ದಾರ್ ತಿಪ್ಪೇಸ್ವಾಮಿ ಅವರಿಗೆ ಸೋಂಕು ದೃಢಪಟ್ಟಿದೆ. 19 ಮಂದಿ ಸರಕಾರಿ ನೌಕರರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸರಕಾರಿ ನೌಕರರು ವ್ಯಾಕ್ಸಿನ್‍ಗಳನ್ನು ಪಡೆದಿದ್ದರೂ ಕೋವಿಡ್ ಆತಂಕ ದೂರಾಗಿಲ್ಲ.

      ಸರಕಾರ ಸಹ 18 ತುರ್ತು ಸೇವೆಗಳ ಇಲಾಖೆ ಹೊರತುಪಡಿಸಿ ಇತರೆ ಇಲಾಖೆಯ ನೌಕರರ ಹಾಜರಾತಿಗೆ ನಿರ್ಬಂಧ ವಿಧಿಸಿದ್ದು, ಡಿಸಿ, ಕಚೇರಿ, ತಹಸೀಲ್ದಾರ್ ಕಚೇರಿ, ಮಹಾನಗರಪಾಲಿಕೆ, ನಗರಸ್ಥಳೀಯ ಸಂಸ್ಥೆ ಕಚೇರಿಗಳಲ್ಲಿ ನೌಕರರ ಸಂಖ್ಯೆ ವಿರಳವಾಗಿರುವ ಜತೆಗೆ ಸಾರ್ವಜನಿಕರ ಸಂಖ್ಯೆಯೂ ಕಡಿಮೆಯಾಗಿದೆ. ಜನಜಂಗುಳಿಯಿಂದ ಕೂಡಿರುತ್ತಿದ್ದ ಸರಕಾರಿ ಕಚೇರಿಗಳು ಬಿಕೋ ಎನ್ನುತ್ತಿದ್ದು, ತುರ್ತು ಸೇವೆಯ ಇಲಾಖೆಗಳಾದ ಕಂದಾಯ, ಆರೋಗ್ಯ, ಪೊಲೀಸ್, ಸ್ಥಳೀಯಸಂಸ್ಥೆಗಳಲ್ಲಿ ಮಾತ್ರ ಸಿಬ್ಬಂದಿ ನಿತ್ಯ ಹಾಜರಾಗುತ್ತಿದ್ದಾರೆ.

      ಕಚೇರಿಗೆ ಭೇಟಿ ನೀಡುವುದನ್ನು ಕಡಿಮೆ ಮಾಡಿ: ಕೋವಿಡ್ ಸೋಂಕಿತರಾಗಿರುವ ಸರಕಾರಿ ನೌಕರರ ಯೋಗಕ್ಷೇಮದ ಬಗ್ಗೆ ಸಂಘ ಕಾಳಜಿ ಹೊಂದಿದ್ದು, ನಿತ್ಯ ಅವರ ಆರೋಗ್ಯದ ವಿವರ ಪಡೆದು ಶೀಘ್ರ ಗುಣಮುಖರಾಗುವಂತಹ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ನೌಕರರೇನಾದರೂ ದುರದೃಷ್ಟವಶಾತ್ ಮೃತಪಟ್ಟರೆ ಅವರ ಕುಟುಂಬಕ್ಕೆ 30 ಲಕ್ಷ ಪರಿಹಾರವನ್ನೂ ಸರಕಾರ ಕೊಡುತ್ತಿದೆ. ಹಣಕ್ಕಿಂತ ಪ್ರಾಣ ಮುಖ್ಯ. ಆದಷ್ಟು ಸಾರ್ವಜನಿಕರು ಸರಕಾರಿ ಕಚೇರಿಗೆ ಭೇಟಿ ನೀಡುವುದನ್ನು ಸೋಂಕು ಇಳಿಮುಖವಾಗುವ ತನಕ ಭೇಟಿ ನೀಡುವುದನ್ನು ಕಡಿಮೆ ಮಾಡಬೇಕು. ಇದರಿಂದ ನೌಕರರಿಗೂ, ಸಾರ್ವಜನಿಕರು ಇಬ್ಬರಿಗೂ ಒಳಿತಾಗುತ್ತದೆ ಎಂದು ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಎನ್. ನರಸಿಂಹರಾಜು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap