ಬೆಂಗಳೂರು:
ಭವಿಷ್ಯದ ಬಗ್ಗೆ ಆಗಾಗ ಹೇಳಿಕೆ ನೀಡುವ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಮತ್ತೊಮ್ಮೆ ಶಾಕಿಂಗ್ ಭವಿಷ್ಯ ಹೇಳಿದ್ದಾರೆ.
ಕೊರೋನಾ ಮುಗಿದ ಬಳಿಕ ಭವಿಷ್ಯ ನುಡಿದಿದ್ದ ಶ್ರೀ, ಮನುಷ್ಯರು ಎಲ್ಲೆಂದರಲ್ಲಿ ಕುಸಿದು ಬಿದ್ದು ಸಾಯುತ್ತಾರೆ ಎಂದಿದ್ದರು, ನಂತರದ ದಿನಗಳಲ್ಲಿ ಹೃದಯಾಘಾತದಿಂದ ವಯಸ್ಸು, ಲಿಂಗಬೇಧವಿಲ್ಲದೆ ಜನರು ಇದ್ದಕ್ಕಿದ್ದಂತೆ ಸಾಯುವ ಪ್ರಕರಣಗಳು ಹೆಚ್ಚಿವೆ.
ಈಗ ಮತ್ತೆ ಮನುಷ್ಯರು ಸ್ಥಮಿತ ಕಳೆದುಕೊಂಡು ರಸ್ತೆಯಲ್ಲಿ ಬಿದ್ದು ಸಾಯುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ಹಲವು ದೇಶಗಳು ಜಲಪ್ರಳಯದಿಂದ ಅಸ್ತಿತ್ವ ಕಳೆದುಕೊಳ್ಳಲಿವೆ. ಬಿಸಿಪ್ರದೇಶದಲ್ಲಿ ಪ್ರಳಯವಾದರೆ ತಂಪು ಪ್ರದೇಶಗಳು ಬಿಸಿಯೇರಿ ಬರಗಾಲ ಆವರಿಸುತ್ತದೆ ಎಂದೂ ಹೇಳಿದ್ದಾರೆ. ಅಧಿಕಾರರೂಢರು ಮುಂಜಾಗ್ರತೆ ವಹಿಸಿದರೆ ರಾಜ್ಯದಲ್ಲಿ ಇಂಥ ಪರಿಸ್ಥಿತಿಯಿಂದ ಪಾರಾಗಬಹುದು ಎಂದು ಸಲಹೆ ನೀಡಿದ್ದಾರೆ.








