ವಯನಾಡಿಗೆ ಸಹಾಯ ಹಸ್ತ ಚಾಚಿದ ಉತ್ತರಪ್ರದೇಶ…!

ಲಖನೌ: 

  ಜುಲೈ 30 ರಂದು ಸಂಭವಿಸಿದ ವಿನಾಶಕಾರಿ ಭೂಕುಸಿತದಿಂದ ಹಾನಿಗೊಳಗಾದ ಕೇರಳದ ವಯನಾಡಿನಲ್ಲಿ ಪುನರ್ವಸತಿ ಕಾರ್ಯಕ್ಕಾಗಿ ಉತ್ತರ ಪ್ರದೇಶ ಸರ್ಕಾರ 10 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದೆ.

  ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೋಮವಾರ ಕೇರಳದ ನಾಗರಿಕರು ಮತ್ತು ಸರ್ಕಾರಕ್ಕೆ ತಮ್ಮ ಬೆಂಬಲವನ್ನು ನೀಡಿದ್ದಾರೆ. ವಯನಾಡಿನಲ್ಲಿ ಪರಿಹಾರ ಮತ್ತು ಪುನರ್ವಸತಿ ಪ್ರಯತ್ನಗಳಲ್ಲಿ ಕೇರಳ ಸರ್ಕಾರಕ್ಕೆ ನೆರವಾಗಲು ಯುಪಿ ಸರ್ಕಾರ 10 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದೆ ಎಂದು ಯೋಗಿ ಆದಿತ್ಯನಾಥ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

  ಜುಲೈ 30 ರಂದು ಮೆಪ್ಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು 47.31 ಕಿ.ಮೀ ವ್ಯಾಪ್ತಿಯಲ್ಲಿ ಸಂಭವಿಸಿದ ಭೂ ಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 400ಕ್ಕೂ ಹೆಚ್ಚಿದೆ. ಚೂರಲ್ಮಲಾ, ಮುತಂಗಾ ಮತ್ತು ಮುಂಡಕ್ಕೈ ನಲ್ಲಿ ಅಪಾರ ಪ್ರಮಾಣದಲ್ಲಿ ಆಸ್ತಿ-ಪಾಸ್ತಿ ಜೀವಹಾನಿಯಾಗಿತ್ತು.

Recent Articles

spot_img

Related Stories

Share via
Copy link