ನೇಹಾ ಕೇಸ್‌ : ನಿರಂಜನ ಹೀರೇಮಠ ನೀಡಿದ ಟ್ವಿಸ್ಟ್‌ ಏನು….?  

 ಹುಬ್ಬಳ್ಳಿ

    ನೇಹಾ ನಿರಂಜನ ಹಿರೇಮಠ ಹತ್ಯೆ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಇನ್ನು ಈ ಬಗ್ಗೆ ಸ್ವತಃ ನೇಹಾ ತಂದೆಯೇ ಟಿವಿ 9 ಜೊತೆ ಮಾತನಾಡಿ ಸ್ಫೋಟಕ ಮಾಹಿತಿಯೊಂದನ್ನು ಬಿಚ್ಚಿಟ್ಟಿದ್ದಾರೆ. ಹಾಗಾದರೆ ಏನೆಲ್ಲ ಹೇಳಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

    “ಒನ್‌ ಸೈಡ್ ಲವ್‌ ಆಗಿದ್ದರಿಂದ ಅವ್ನು ಎಲ್ಲಾರಿಗೂ ಹೆದರಿಸಿದ್ದಾನೆ. ಅವನಿಗೆ ಅನಿಸಿದ ರೀತಿಯಲ್ಲೇ ಎಲ್ಲಾ ಪ್ರಯತ್ನವನ್ನು ಮಾಡಿದ್ದಾನೆ. ನನ್ನ ಮಗಳನ್ನು ಭೇಟಿ ಮಾಡಲು ಪ್ರಯತ್ನ ಮಾಡಿದ್ದಾರೆ. ಆದರೆ ಅವಳು ಯಾವುದ್ದಕ್ಕೂ ಬಗ್ಗಿಲ್ಲ. ಇನ್ನು ನನಗೂ ಕೂಡ ಆಶ್ಚರ್ಯವಾಗಿದೆ. ಈ ರೀತಿಯ ವಿಕೃತಿ ಮನಸ್ಥಿತಿ ಇರುವ ವಿದ್ಯಾರ್ಥಿಗಳಿತ್ತಾರೆಂದು ನನಗೆ ಗೊತ್ತಿರಲಿಲ್ಲ. ಅವನಿಗೆ (ಫಯಾಜ್‌) ತಂದೆ, ತಾಯಿ, ಸಿಸ್ಟರ್‌ ಕೂಡ ಪ್ರಚೋಧಿಸುವ ಕೆಲಸವನ್ನು ಮಾಡಿದ್ದಾರೆ. ಆಗಲೇ ಅವರು ದೂರು ನೀಡಿ ಆತನನ್ನು ಅರೆಸ್ಟ್‌ ಮಾಡಿಸಬಹುದಿತ್ತು.

    ಇನ್ನು ಈ ಘಟನೆ ನಡೆಯುವ ಮೂರು ದಿನದ ಹಿಂದೆಯೇ ನಿಮಗೆ ಕಾಲ್‌ ಮಾಡಿದ್ದನಂತೆ ಎಂದು ಕೇಳಿದಾಗ ಅವರು, “ನಾನು ನಿಮ್ಮ ಮಗಳನ್ನು ಪ್ರೀತಿಸುತ್ತಿದ್ದೇನೆ. ನನ ಜೊತೆ ಮದುವೆ ಮಾಡಿಕೊಡಿ, ನಿಮ್ಮ ಸಮುದಾಯಕ್ಕೆ ಮತಾಂತರ ಆಗುತ್ತೇನೆ ಎಂದು ಕೇಳಿದ್ದ. ಆದರೆ ನಾನು, ನೀನು ಈ ಆಸೆಯನ್ನು ಇಟ್ಟುಕೊಳ್ಳಬೇಡ. ನಮ್ಮ ಸಮಾಜದಲ್ಲಿ ಇದೆಲ್ಲ ನಡೆಯುವುದಿಲ್ಲ. ಹಾಗೂ ಅವಳು ಇದಕ್ಕೆಲ್ಲ ಒಪ್ಪಿಕೊಳ್ಳುವುದಿಲ್ಲ. ಇದನೆಲ್ಲ ಮರೆತು, ವಿದ್ಯಾರ್ಥಿಯಾಗಿ ಉತ್ತಮ ಭವಿಷ್ಯ ಕೊಟ್ಟಿಕೋ ಎಂದು ಬುದ್ಧಿವಾದ ಹೇಳಿದ್ದೆ,” ಎಂದರು.

    ಬಿಜೆಪಿ ನಾಯಕರು ಮನೆಗೆ ಬಂದು ಸಾಂತ್ವನ ಮಾಡುತ್ತೇವೆ ಅಂತಾ ಹೇಳಿದ್ದಾರೆ. ಆದರೆ ಕಾಂಗ್ರೆಸ್‌ ನಾಯಕರು ಯಾರಾದರೂ ನಿಮಗೆ ಫೋನ್‌ ಮಾಡಿ ವಿಚಾರಿಸಿದ್ದಾರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸ್ನೇಹಾ ತಂದೆ, “ಎಲ್ಲ ನಾಯಕರು ಕೂಡ ಬಂದು ನಮಗೆ ಸಾಂತ್ವನ ಹೇಳುವ ಕೆಲಸವನ್ನು ಮಾಡಿದ್ದಾರೆ. ಈಗಾಗಲೇ ಕಾಂಗ್ರೆಸ್‌ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಕೂಡ ನಿಮ್ಮ ಜೊತೆ ನಾವಿದ್ದೇವೆ ಎಂದು ಧೈರ್ಯ ತುಂಬಿದರು,” ಎಂದು ಹೇಳಿದರು.

    ಕೋನರೆಡ್ಡಿ, ಜಿಲ್ಲಾ ಕಾಂಗ್ರೆಸ್‌ ಕಮಿಟಿ ಅಧ್ಯಕ್ಷರು ಸೇರಿದಂತೆ ಅನೇಕ ಕಾಂಗ್ರೆಸ್‌ ಮುಖಡರು ಹಾಗೂ ಬಿಜೆಪಿಯಿಂದ ಜಗದೀಶ್‌ ಶೆಟ್ಟರ್‌ ಕೂಡ ಬಂದಿದ್ದರು. ಆದ್ದರಿಂದ ನಾನು ಆ ಪಕ್ಷದವರು ಬಂದಿದ್ದರು, ಈ ಪಕ್ಷದವರು ಬಂದಿದ್ದಾರೆ ಎಂದು ಹೇಳಲು ನನಗೆ ಇಷ್ಟವಿಲ್ಲ ಎಂದರು. ಇನ್ನು ಸಿಎಂ, ಗೃಹ ಸಚಿವರು ಬರುತ್ತಾರೆ ಎನ್ನುವ ಮಾಹಿತಿಯೂ ಇದೆ ಎಂದು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap