ನಿಷೇಧವಿದ್ರು ​ಭಾರತಕ್ಕೆ ಕಳ್ಳದಾರಿಯಲ್ಲಿ ಬರುತ್ತಿದೆ ಚೀನಾ ಈ ವಸ್ತು ಕೊಳ್ಳುವ ಮುನ್ನ ಎಚ್ಚರ…!

ನವದೆಹಲಿ :

   ಸಾಮಾನ್ಯವಾಗಿ ಹೆಚ್ಚಿನ ಅಡುಗೆಗಳಲ್ಲಿ ಬೆಳ್ಳುಳ್ಳಿಯನ್ನು ಬಳಸಲಾಗುತ್ತದೆ. ಬೆಳ್ಳುಳ್ಳಿ ಇಲ್ಲದಿದ್ರೆ ಅಡುಗೆ ಸಂಪೂರ್ಣವಾಗೋದೆ ಇಲ್ಲ ಅನ್ನೋ ಅಷ್ಟರ ಮಟ್ಟಿಗೆ ಬೆಳ್ಳುಳ್ಳಿ ಅಡುಗೆ ಮನೆಯನ್ನ ಆಕ್ರಮಿಸಿಕೊಂಡಿದೆ. ಆದರೆ ಅದೇ ಬೆಳ್ಳುಳ್ಳಿ ಸೇವನೆ ಆರೋಗ್ಯಕ್ಕೆ ಮಾರಕವಾಗಿದೆ.ಅಂದ ಹಾಗೆ ಈ ಬೆಳ್ಳುಳ್ಳೀ ಭಾರತಕ್ಕೆ ಬರ್ತಿರೋದು ಚೀನಾದಿಂದ.

    ಬೆಳ್ಳುಳ್ಳಿಯನ್ನು ಮಾಂತ್ರಿಕ ಮಸಾಲೆ ಎಂದು ಅಂತಲೇ ಕರೆಯುತ್ತಾರೆ. ಆಹಾರದ ಪರಿಮಳ ಹೆಚ್ಚಿಸುತ್ತದೆ. ಅಲ್ಲದೇ ಆಹಾರದಲ್ಲಿ ಇದನ್ನು ಬಳಸುವುದರಿಂದ ಆರೋಗ್ಯಕ್ಕೂ ಒಳ್ಳೆಯದು ಅನ್ನೋದು ಸಾಕಷ್ಟು ವೈದ್ಯರು ದೃಡಪಡಿಸಿದ್ದಾರೆ. ಆದರೆ ಚೀನಾ ಬೆಳ್ಳುಳ್ಳಿ ಆರೋಗ್ಯಕ್ಕೆ ಮಾರಕವಾಗಿದೆ.

   ಚೀನಾವು ವಿಶ್ವದ ಅತಿದೊಡ್ಡ ಬೆಳ್ಳುಳ್ಳಿ ಉತ್ಪಾದಕಯನ್ನು ಹೊಂದಿದೆ. ಜಾಗತಿಕ ಪೂರೈಕೆಯ 80% ಅನ್ನು ಉತ್ಪಾದಿಸುತ್ತದೆ. ಚೀನಾದ ಹೆಚ್ಚಿನ ಬೆಳ್ಳುಳ್ಳಿಯನ್ನು ಬೀಜಿಂಗ್‌ನ ಆಗ್ನೇಯ ಭಾಗದಲ್ಲಿರುವ ಪೂರ್ವ ಕರಾವಳಿ ಪ್ರಾಂತ್ಯವಾದ ಶಾಂಡೊಂಗ್‌ನಲ್ಲಿ ಉತ್ಪಾದಿಸಲಾಗುತ್ತದೆ. ನಿರ್ದಿಷ್ಟವಾಗಿ, ಜಿಂಕ್ಯಾಂಗ್ ಅನ್ನು “ವಿಶ್ವದ ಬೆಳ್ಳುಳ್ಳಿ ರಾಜಧಾನಿ” ಎಂದು ಕರೆಯಲಾಗುತ್ತದೆ.

   2014ರಿಂದಲೇ ಭಾರತದಲ್ಲಿ ಚೀನಾ ಬೆಳ್ಳುಳ್ಳಿಯನ್ನು ನಿಷೇಧಿಸಲಾಗಿದೆ. ಆದರೂ ಚೀನಾ ಬೆಳ್ಳುಳ್ಳಿ ಕಳ್ಳದಾರಿಯಲ್ಲಿ ಭಾರತೀಯ ಮಾರುಕಟ್ಟೆ ಪ್ರವೇಶಿಸುತ್ತಿದೆ. ಚೈನೀಸ್ ಬೆಳ್ಳುಳ್ಳಿ ತಿಳಿ ಬಿಳಿ ಮತ್ತು ಗುಲಾಬಿ ಮತ್ತು ಗಾತ್ರದಲ್ಲಿ ಚಿಕ್ಕದಾಗಿದೆ. ಭಾರತೀಯ ಬೆಳ್ಳುಳ್ಳಿ ಗಾತ್ರದಲ್ಲಿಯೂ ದೊಡ್ಡದಾಗಿದ್ದಲ್ಲದೇ ವಾಸನೆಯನ್ನು ಹೊಂದಿದೆ. ಆದರೆ ಚೈನೀಸ್ ಬೆಳ್ಳುಳ್ಳಿ ಕಡಿಮೆ ವಾಸನೆ ಹೊಂದಿರುತ್ತದೆ.

   ಇತ್ತೀಚೆಗೆ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಗೊಂಡಲ್ ಕೃಷಿ ಉತ್ಪನ್ನ ಮಾರುಕಟ್ಟೆ ಸಹಕಾರಿ (ಎಪಿಎಂಸಿ) ನಲ್ಲಿ ಚೀನಾದ ಬೆಳ್ಳುಳ್ಳಿಯ ಚೀಲಗಳು ಕಂಡುಬಂದ ನಂತರ ವ್ಯಾಪಾರಿಗಳು ಪ್ರತಿಭಟನೆಯನ್ನು ನಡೆಸಿದರು. ಅಕ್ರಮದ ವಿರುದ್ಧ ನಾವು ಪ್ರತಿಭಟನೆ ನಡೆಸುತ್ತಿದ್ದೇವೆ. ನಿಷೇಧದ ಹೊರತಾಗಿಯೂ ಚೀನಾದ ಬೆಳ್ಳುಳ್ಳಿ ಭಾರತಕ್ಕೆ ಹೇಗೆ ಪ್ರವೇಶಿಸುತ್ತಿದೆ ಎಂದು ಗೊಂಡಲ್ ಎಪಿಎಂಸಿಯ ವರ್ತಕರ ಸಂಘ ಕಿಡಿಕಾರಿದೆ.

   ಚೀನಾ ಬೆಳ್ಳುಳ್ಳಿಗೆ ಹೋಲಿಸಿದ್ರೆ ಭಾರತದ ಬೆಳ್ಳುಳ್ಳಿ ಬಳಕೆಗೂ ಯೋಗ್ಯ, ಆರೋಗ್ಯಕ್ಕೂ ಸುರಕ್ಷಿತವಾಗಿದೆ. ಚೀನಾ ಬೆಳ್ಳುಳ್ಳಿ ಆಧುನಿಕ ಕೃಷಿ ತಂತ್ರಜ್ಞಾನ, ಅತಿ ಹೆಚ್ಚು ರಾಸಾಯನಿಕಗಳು, ಕೀಟನಾಶಕಗಳ ಬಳಕೆಯೊಂದಿಗೆ ಬೆಳೆಯುತ್ತಾರೆ. ಚೀನಿ ಬೆಳ್ಳುಳ್ಳಿ ದೀರ್ಘಾವಧಿ ಸೇವನೆಯಿಂದ ಕ್ಯಾನ್ಸರ್​ಗೆ ಕಾರಣವಾಗಬಹುದು ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.

Recent Articles

spot_img

Related Stories

Share via
Copy link
Powered by Social Snap