ಮಡಿಕೇರಿ : ಬೀದಿಗಿಳಿದ KSRTC ಚಾಲಕರು

ಮಡಿಕೇರಿ

    ಕೊಡಗು ಜಿಲ್ಲೆಯ ಮಡಿಕೇರಿ ಡಿಪೋದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಕೆಎಸ್​ಆರ್​ಟಿಸಿ ಬಸ್ ಚಾಲಕರು ಶನಿವಾರ ಬೀದಿಗಿಳಿದು, ಮೌನ ಪ್ರತಿಭಟನೆ ಮಾಡುತ್ತಿದ್ದಾರೆ. ಮಡಿಕೇರಿ ಡಿಪೋದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಇವರೆಲ್ಲರಿಗೂ ಕಳೆದ ಕೆಲವು ತಿಂಗಳಿನಿಂದ ಸರಿಯಾಗಿ ವೇತನ ಪಾವತಿಯಾಗಿಲ್ಲ. ಹಾಗಾಗಿ ಬೆಳಗ್ಗಿನಿಂದಲೇ ಕೆಲಸಕ್ಕೆ ಹಾಜರಾಗದೆ ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ.

    ಇವರನ್ನು ಈ ಮೊದಲು ಬೇರೆಯೊಂದು ಸಂಸ್ಥೆ ಗುತ್ತಿಗೆ ಮೇಲೆ ನೇಮಕ ಮಾಡಿಕೊಂಡಿತ್ತು. ಆದರೆ, ಇದೀಗ ಕಳೆದ ಎರಡು ತಿಂಗಳಿನಿಂದ ಬಹುತೇಕ ಚಾಲಕರ ವೇತನವನ್ನು ಕಾರಣವೇ ಇಲ್ಲದೆ 8 ರಿಂದ 10 ಸಾವಿರ ರೂಪಾಯಿವರೆಗೆ ಕಡಿತ ಮಾಡಲಾಗಿದೆ. ಇವರ ಖಾತೆಗೆ ಇಎಫ್ ಹಣ ಕೂಡ ವರ್ಗಾವಣೆಯಾಗಿಲ್ಲ. ಇದರ ಬಗ್ಗೆ ಕೇಳಿದರೆ ‘‘ಪೂಜ್ಯಾಯ ಸಂಸ್ಥೆ’’ ಉಡಾಫೆಯ ಉತ್ತರ ನೀಡುತ್ತಿದೆ ಎಂಬುದು ಚಾಲಕರ ಆರೋಪವಾಗಿದೆ.

   ಚಾಲಕರಿಗೆ 25 ಸಾವಿರ ರೂ. ಸಂಬಳದಲ್ಲಿ 2 ಸಾವಿರ ರೂ. ಪಿಎಫ್ ಕಡಿತ ಮಾಡಿ ಉಳಿದ 23 ಸಾವಿರ ರೂ. ಹಣ ಅಕೌಂಟ್​ಗೆ ಹಾಕಬೇಕು. ಆದರೆ 23 ಸಾವಿರ ರೂ. ಬದಲು 10 ಸಾವಿರ, 14 ಸಾವಿರ ಹೀಗೆ ಅಲ್ಪ ಮೊತ್ತವನ್ನ ಜಮೆ ಮಾಡಲಾಗುತ್ತಿದೆ ಎಂಬುದು ಚಾಲಕರ ವಾದ. ಈ ಬಗ್ಗೆ ಡಿಪೋ ಡಿಸಿ ಬಳಿ ಪ್ರಶ್ನಿಸಿದಾಗ, ಸಮಸ್ಯೆ ಬಗೆಹರಿಸುತ್ತೇವೆ ಎನ್ನುತ್ತಾರೆ. ಹಾಗೆ ಹೇಳುವುದು ಬಿಟ್ಟರೆ ಈವರೆಗೆ ಸಮಸ್ಯೆ ಪರಿಹಾರವಾಗಿಲ್ಲ ಎಂಬುದು ಚಾಲಕರ ದೂರಾಗಿದೆ.

 
   ಹಾಗಾಗಿ ಬೇರೆ ದಾರಿ ಇಲ್ಲದೆ, ಇದೀಗ ಪ್ರತಿಭಟನೆಗೆ ಇಳಿದಿರುವುದಾಗಿ ಹೇಳಿದ್ದಾರೆ.ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಈ ಸಮಸ್ಯೆಯ ಮೂಲ ರಾಜ್ಯ ಸರ್ಕಾರವೇ ಎಂದು ಸಾರ್ವಜನಿಕ ವಲಯದಲ್ಲಿ ಶಂಕೆ ಮೂಡಿದೆ. ಮಹಿಳೆಯರಿಗೆ ಉಚಿತ ಬಸ್ ಹೊರೆಯಿಂದಾಗಿ ಸರ್ಕಾರದಿಂದ ಸಾರಿಗೆ ಸಂಸ್ಥೆಯ ಗುತ್ತಿಗೆದಾರರಿಗೆ ನೀಡಲು ಹಣವಿಲ್ಲದೆ ಸರ್ಕಾರವೇ ಎಡವಟ್ಟು ಮಾಡಿದೆಯಾ ಎಂಬ ಬಗ್ಗೆ ಚರ್ಚೆಯಾಗುತ್ತಿದೆ.

Recent Articles

spot_img

Related Stories

Share via
Copy link