ಜಾನಿ ಮಾಸ್ಟರ್‌ ಕೇಸ್‌ : ವೈರಲ್‌ ಆಗ್ತಿದೆ ಸಂತ್ರಸ್ತೆಯ ಹೇಳಿಕೆ …!

ತೆಲಂಗಾಣ : 

    ಲೈಂಗಿಕ ಆರೋಪ ಎದುರಿಸುತ್ತಿರುವ ಖ್ಯಾತ ನೃತ್ಯ ಸಂಯೋಜಕ ಹಾಗೂ ಜನಸೇನಾ ನಾಯಕ ಜಾನಿ ಮಾಸ್ಟರ್ ಪ್ರಕರಣ ದಿನದಿಂದ ದಿನಕ್ಕೆ ಸಾಕಷ್ಟು ಟ್ವಿಸ್ಟ್‌ ಪಡೆಯುತ್ತಿದೆ. ತನಿಖೆಯ ವೇಳೆ ಸಂತ್ರಸ್ತೆ ಶಾಕಿಂಗ್‌ ವಿಚಾರಗಳನ್ನು ಬಯಲಿಗೆಳೆದಿದ್ದಾಳೆ. ಗಂಭೀರ ಆರೋಪಗಳನ್ನು ಮಾಡಿದ್ದಾಳೆ.

   ಸಂತ್ರಸ್ತೆಯ ರಹಸ್ಯ ವಿಚಾರಣೆ ನಡೆಸಿದ ಪೊಲೀಸರು ಸಾಕಷ್ಟು ವಿವರಗಳನ್ನು ಪಡೆದುಕೊಂಡಿದ್ದಾರೆ. ಈ ಪ್ರಕ್ರಿಯೆಯಲ್ಲಿ ಜಾನಿ ಮಾಸ್ಟರ್ ಕ್ರೌರ್ಯವನ್ನು ಬಯಲಿಗೆಳೆದಿದ್ದಾರೆ.

   ಲೈಂಗಿಕ ಆರೋಪಕ್ಕೆ ಒಳಗಾದ ಸಹಾಯಕ ನೃತ್ಯ ನಿರ್ದೇಶಕಿ, ನರಸಿಂಗಿ ಪೊಲೀಸರಿಗೆ ದೂರು ನೀಡಿದ್ದಾಳೆ.. ಜಾನಿ ಮಾಸ್ಟರ್ ವಿರುದ್ಧ ಈಗಾಗಲೇ ಎಫ್‌ಐಆರ್ ದಾಖಲಾಗಿದೆ. ಅಲ್ಲದೆ, ಪೊಲೀಸರು ಸಂತ್ರಸ್ತೆಯಿಂದ ವಿವರ ಸಂಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಸಂತ್ರಸ್ತೆ ಪೊಲೀಸರಿಗೆ ಜಾನಿ ಮಾಸ್ಟರ್ ಕ್ರೌರ್ಯದ ಬಗ್ಗೆ ಅಚ್ಚರಿ ವಿಷಯಗಳನ್ನು ಬಹಿರಂಗ ಪಡಿಸಿದ್ದಾಳೆ. 

  ಜಾನಿ ಮಾಸ್ಟರ್ ತನ್ನ ಮೇಲೆ ಅತ್ಯಾಚಾರ ಮತ್ತು ಹಲ್ಲೆ ನಡೆಸಿದ್ದಾರೆ ಎಂದು ಹೈದರಾಬಾದ್ ಹಾಗೂ ಮುಂಬೈನಲ್ಲಿ ಸಂತ್ರಸ್ತೆ ದೂರು ದಾಖಲಿಸಿದ್ದಾಳೆ. ಪ್ರಕರಣ ಕುರಿತ ವಿಚಾರಣೆ ಸಂತ್ರಸ್ತೆಯನ್ನು ಭದ್ರತಾ ಕೇಂದ್ರಕ್ಕೆ ಕರೆದೊಯ್ಯಲಾಯಿತು ಎಂದು ಪೊಲೀಸರು ವಿವರಿಸಿದರು. ಬಳಿಕ ಸಂತ್ರಸ್ತೆಗೆ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು.

   ಹಗಲಿನ ಶೂಟಿಂಗ್ ಸಮಯದಲ್ಲಿ, ಅವರು ವ್ಯಾನ್‌ಗೆ ಬಂದು ತಮ್ಮ ಪ್ಯಾಂಟ್‌ನ ಜಿಪ್ ಎಳೆದು, ಲೈಂಗಿಕ ಬಯಕೆಗಳನ್ನು ಪೂರೈಸಲು ನನಗೆ ಕಿರುಕುಳ ನೀಡುತ್ತಿದ್ದರು.. ಇಲ್ಲವಾದಲ್ಲಿ ಆಫರ್ ಇಲ್ಲದಂತೆ ಮಾಡುವುದಾಗಿ ಬೆದರಿಕೆ ಹಾಕಿದ್ದರು.. ಹೈದರಾಬಾದ್‌ನಲ್ಲಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ. ನಾನು ಒಪ್ಪದಿದ್ದಾಗ ಬಲವಂತವಾಗಿ ಹಲ್ಲೆ ನಡೆಸುತ್ತಾರೆ. ಜಾನಿ ಮಾಸ್ಟರ್ ಅವರ ಪತ್ನಿಯೂ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಮದುವೆಯಾಗುವಂತೆ ನನಗೆ ಒತ್ತಡ ಹೇರಿದ್ದರು ಎಂದು ಸಂತ್ರಸ್ತೆ ಪೊಲೀಸರಿಗೆ ತಿಳಿಸಿದ್ದಾರೆ.