ನೀವು ಸಂಪೂರ್ಣ ನಿರ್ಣಾಮ ಆಗುವವರೆಗೂ ನಾವು ಬಿಡುವುದಿಲ್ಲ : ಇಸ್ರೇಲ್

ಇಸ್ರೇಲ್ :

    ಲೆಬನಾನ್‌ ದಕ್ಷಿಣ ಬೈರುತ್‌ನಲ್ಲಿರುವ ಹಿಜ್ಬುಲ್ಲಾದ ಪ್ರಮುಖ ಭದ್ರಕೋಟೆಗಳ ಮೇಲೆ ವೈಮಾನಿಕ ದಾಳಿಯನ್ನು ನಡೆಸಿದೆ. ಇಸ್ರೇಲ್ ಲೆಬನಾನ್​​​ನ ರಾಜಧಾನಿಯ ಹೃದಯಭಾಗವಾದ ಬೈರುತ್‌ ಮೇಲೆ ನೆನ್ನೆ ರಾತ್ರಿಯಿಂದ ದಾಳಿ ಮಾಡಲು ಶುರು ಮಾಡಿದೆ. ಇದೀಗ ಈ ದಾಳಿಯಿಂದ ಜನನಿಬಿಡ ನಾಗರಿಕ ಪ್ರದೇಶಗಳಲ್ಲಿ ಭಯ ವಾತವರಣ ಸೃಷ್ಟಿಯಾಗಿದೆ. ಇದೀಗ ಇಸ್ರೇಲ್​​ ಪಡೆಗಳು ಗಾಜಾದಿಂದ ಲೆಬನಾನ್​​ನತ್ತ ಮುಖ ಮಾಡಿದೆ ಎಂದು ಹೇಳಲಾಗಿದೆ. ಬೈರುತ್​​ನ ಮೇಲೆ ಇಸ್ರೇಲ್ ತೀವ್ರವಾದ ದಾಳಿಯನ್ನು ನಡೆಸಿದೆ. ಬೈರುತ್ ಪ್ರದೇಶ ಹೊಗೆಯಿಂದ ತುಂಬಿಕೊಂಡಿದೆ.

 
   ಇಸ್ರೇಲ್​​ ಇಂದು ದಕ್ಷಿಣ ಬೈರುತ್‌ನಲ್ಲಿನ ಕಟ್ಟಡಗಳಲ್ಲಿ ಸಂಗ್ರಹವಾಗಿರುವ ಹೆಜ್ಬೊಲ್ಲಾಹ್‌ನ ಶಸ್ತ್ರಾಸ್ತ್ರ ಡಿಪೋಗಳ ಮೇಲೆ ದಾಳಿಯನ್ನು ಮಾಡಿ ನೆಲಸಮಗೊಳಿಸಿದೆ. ಇದರಿಂದ ಆರು ಕಟ್ಟಡಗಳನ್ನು ನೆಲಸಮವಾಗಿದೆ. ಹಾಗೂ 91 ಜನರು ಗಾಯಗೊಂಡಿದ್ದಾರೆ ಮತ್ತು ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಹೆಜ್ಬೊಲ್ಲಾಹ್ ಉಗ್ರರರು ಕೂಡ ಪ್ರತಿದಾಳಿಯನ್ನು ನಡೆಸಿದ್ದಾರೆ. ಆದರೆ ಇಸ್ರೇಲ್​ ದಾಳಿಗೆ ಹೆಜ್ಬೊಲ್ಲಾಹ್ ಸಂಘಟನೆ ಕಂಗೆಟ್ಟಿದೆ.
 
   ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಶುಕ್ರವಾರ ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ವಿಶ್ವ ನಾಯಕರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಉತ್ತರದ ಗಡಿಯನ್ನು ಸಂಪೂರ್ಣವಾಗಿ ಸುರಕ್ಷಿತಗೊಳಿಸುವವರೆಗೆ ಇಸ್ರೇಲ್ ಹೆಜ್ಬೊಲ್ಲಾ ವಿರುದ್ಧ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ಮುಂದುವರೆಸುತ್ತದೆ ಎಂದು ಪ್ರತಿಜ್ಞೆ ಮಾಡಿದರು. ಇಸ್ರೇಲ್ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕನ್ನು ಹೊಂದಿದೆ. ಹೆಜ್ಬೊಲ್ಲಾಗೆ ಯಾವುದೇ ವಿರಾಮ ನೀಡುವುದಿಲ್ಲ. ಈ ಮೂಲಕ ದಾಳಿಯ ಬಗ್ಗೆ ಸೂಚನೆಯನ್ನು ನೀಡಿದರು.

Recent Articles

spot_img

Related Stories

Share via
Copy link