ಪುಣೆ:
ನಮ್ಮಲ್ಲಿ ಬೆಲೆಬಾಳುವ ವಸ್ತು ಇದ್ದಾಗ ಮೈಯೆಲ್ಲಾ ಕಣ್ಣಾಗಿರಬೇಕು. ಚೂರು ಕಣ್ಣು ತಪ್ಪಿದರೂ ಭಾರೀ ನಷ್ಟ ಎದುರಿಸಬೇಕಾಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಘಟನೆಯೊಂದು ಪುಣೆಯಲ್ಲಿ ನಡೆದಿದ್ದು, ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ದಂಪತಿಯೊಂದು ಬ್ಯಾಂಕ್‌ನಿಂದ ಬರೋಬ್ಬರಿ 5ಲಕ್ಷ ರೂ.ಗಳ ಚಿನ್ನವನ್ನು ಬ್ಯಾಂಕಿನಿಂದ ಬಿಡಿಸಿ ತಂದಿದ್ದು, ತಂದ ಕೆಲ ಹೊತ್ತಿನಲ್ಲೇ ಹಾಡುಹಗಲೇ ನಡು ರಸ್ತೆಯಲ್ಲೇ ಕಳ್ಳತನವಾಗಿದೆ.
ವೈರಲ್ ಆಗಿರುವ ವಿಡಿಯೋ ಪ್ರಕಾರ, ಪುಣೆಯ ವೃದ್ಧ ದಂಪತಿಗಳು ತಮ್ಮ ಚಿನ್ನಾಭರಣವನ್ನು ಬ್ಯಾಂಕ್‌ನಿಂದ ಬಿಡಿಸಿ ಸ್ಕೂಟಿಯಲ್ಲಿ ಮನೆಗೆ ಮರಳುತ್ತಿದ್ದರು. ಮಾರ್ಗಮಧ್ಯದಲ್ಲಿ ಅಂಗಡಿಯೊಂದರ ಬಳಿ ಪತಿ ವಡಾಪಾವ್ ಖರೀದಿಸಲು ಹೋಗಿದ್ದಾರೆ. ಆದರೆ ಪತ್ನಿ ಸ್ಕೂಟಿ ಬಳಿ ನಿಂತಿದ್ದರು.
ಈ ವೃದ್ಧ ದಂಪತಿಯನ್ನು ಹಿಂಬಾಲಿಸಿಕೊಂಡು ಬಂದ ಕಳ್ಳನೊರ್ವ ಸರಿಯಾದ ಸಮಯ ನೋಡಿ ಚಿನ್ನವನ್ನಿಟ್ಟಿರುವ ಬ್ಯಾಗ್ ಅನ್ನು ಎಗರಿಸಿ ಓಡಿ ಹೋಗಿದ್ದಾನೆ. ಇದನ್ನು ಗಮನಿಸಿದ ವೃದ್ಧ ಆತನನ್ನು ಹಿಡಿಯಲು ಯತ್ನಿಸಿದ್ದಾಳೆ. ಆಕೆಯ ಕಿರುಚಾಟ ಕೇಳಿ ಸ್ಥಳೀಯರು ಧಾವಿಸಿ ಬಂದಿದ್ದಾರೆ. ಆದರೆ ಕಳ್ಳ ಅದಾಗಲೇ ಅಲ್ಲಿಂದ ಪಾರಾರಿಯಾಗಿದ್ದಾನೆ.
ಫಟನೆಗೆ ಸಂಬಂಧಿಸಿದ ಸಂಪೂರ್ಣ ದೃಶ್ಯ ವಡಾಪಾವ್ ಅಂಗಡಿಯಲ್ಲಿ ಅಳವಡಿಸಿದ ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. @gharkekalesh ಎಂಬ ಟ್ವಿಟರ್ ಖಾತೆಯಲ್ಲಿ Aug 30 ರಂದು ಹಂಚಿಕೊಂಡಿರುವ ವಿಡಿಯೋ ಕೇವಲ ನಾಲ್ಕು ದಿನದಲ್ಲಿ 1.6 ಮಿಲಿಯನ್ ಅಂದರೆ 10ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ.