ನವದೆಹಲಿ:
ಮುಂಬೈ ಬಾಂಬ್ ಸ್ಫೋಟದ ಆರೋಪಿ ಅಬು ಸಲೇಂನನ್ನು ಪೋರ್ಚುಗಲ್ನಿಂದ ಭಾರತಕ್ಕೆ ಹಸ್ತಾಂತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಿಬಿಐ ಮಾಜಿ ನಿರ್ದೇಶಕ ಪಿ ಸಿ ಶರ್ಮಾ ಮಂಗಳವಾರ ನಿಧನರಾಗಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು.ಮೂರು ದಿನಗಳ ಹಿಂದೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಐಪಿಎಸ್ ಅಧಿಕಾರಿ ರಾತ್ರಿ 7.45ಕ್ಕೆ ಕೊನೆಯುಸಿರೆಳೆದಿದ್ದಾರೆ. ಇಂದು ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
1966ರ ಬ್ಯಾಚ್ನ ಅಸ್ಸಾಂ ಕೇಡರ್ನ ಐಪಿಎಸ್ ಅಧಿಕಾರಿಯಾಗಿದ್ದ ಶರ್ಮಾ ಅವರು ವೈಟ್ ಕಾಲರ್ ಅಪರಾಧ ಹೆಚ್ಚುತ್ತಿದ್ದ ವೇಳೆ ಏಪ್ರಿಲ್ 30, 2001 ರಂದು ಸಿಬಿಐ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದರು. ಅವರು ಡಿಸೆಂಬರ್ 6, 2003 ರವರೆಗೆ ತನಿಖಾ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದರು.
ಅಸ್ಸಾಂನೊಂದಿಗಿನ ಅವರ ಸಂಪರ್ಕದ ಸಂಕೇತವಾಗಿ ಅವರು ಪ್ರತಿಯೊಂದು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಬಿದಿರಿನ ಟೋಪಿ ಧರಿಸುವುದರೊಂದಿಗೆ ಗುರುತಿಸಲ್ಪಟ್ಟಿದ್ದರು. ಶರ್ಮಾ ಕಾನೂನು ಜಾರಿಯಲ್ಲಿ ವಿಶಿಷ್ಟವಾದ ವೃತ್ತಿಜೀವನ ಹೊಂದಿದ್ದ ಶರ್ಮಾ, ಸಿಬಿಐಗೆ ಸೇರುವ ಮುನ್ನಾ 1978 ರಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.
1982 ರಲ್ಲಿ ನ ಹೋರಾಟವನ್ನು ನಿಯಂತ್ರಿಸಲು ಅಸ್ಸಾಂ ಸರ್ಕಾರ ಅವರನ್ನು ಹಿಂದಕ್ಕೆ ಕರೆಸಿತು. ಅವರಿಗೆ ಡಿಜಿಪಿ (ಗಡಿ ಮತ್ತು ಕೇಂದ್ರ ವ್ಯಾಪ್ತಿ) ಹುದ್ದೆ ನೀಡುವ ಮೂಲಕ ಅನಧಿಕೃತವಾಗಿ ಒಳನುಗ್ಗುವ ವಿದೇಶಿಯರನ್ನು ಗುರುತಿಸಿ ಗಡಿಪಾರು ಮಾಡುವ ಕಾರ್ಯವನ್ನು ವಹಿಸಲಾಗಿತ್ತು.
